ಬೆಂಗಳೂರಿನಲ್ಲಿ ಪಾತಾಳಕ್ಕಿಳಿದ ಗಾಳಿಯ ಗುಣಮಟ್ಟ; ಮೂಲೆ ಸಮಸ್ಯೆಗಿದು ಬುನಾದಿ
ಬೆಂಗಳೂರು, ಡಿಸೆಂಬರ್ 13: ಬೆಂಗಳೂರಿನಲ್ಲಿ ದಿನೇ ದಿನೇ ವಾಯು ಗುಣಮಟ್ಟ ಕುಸಿಯುತ್ತಲೇ ಇದೆ, ವಾಯುಮಾಲಿನ್ಯ ಹೆಚ್ಚುತ್ತಿದೆ. ಇದೇ ವಾತಾವರಣ ಮುಂದುವರೆದರೆ ಮುಂದೊಂದು ದಿನ ದೆಹಲಿಯಂತೆ ಇಲ್ಲಿಯೂ ಉಸಿರಾಡುವುದೂ ಕಷ್ಟವೆಂಬಂತಾಗುತ್ತೆ ಎಂಧು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ನಿನ್ನೆ (ಡಿ.12) ಗಾಳಿಯ ಗುಣಮಟ್ಟದ ಸೂಚ್ಯಂಕ (AQI) 175ಕ್ಕೆ ತಲುಪಿತ್ತು. ಇಂದು ಗಾಳಿಯ ಗುಣಮಟ್ಟ ಸುಮಾರು 186 ರಿಂದ 206 ರವರೆಗೂ ಏರಿಕೆ ಕಂಡಿದ್ದು, ಉಸಿರಾಟಕ್ಕೆ ತೀವ್ರ ಬಿಕ್ಕಟ್ಟು ಎದುರಾಗಲಿದೆ.
200ರ ಗಡಿದಾಟಿದ ಗಾಳಿಯ ಕ್ವಾಲಿಟಿ
ವಿಶ್ವ ಆರೋಗ್ಯ ಸಂಸ್ಥೆ ಹೇಳುವ, 5ಕ್ಕಿಂತ ಹೆಚ್ಚು PM2.5(ಪಾರ್ಟಿಕ್ಯುಲೇಟ್ ಮ್ಯಾಟರ್) ಜನರಲ್ಲಿ ಪ್ರಸ್ತುತ ಸಮಸ್ಯೆ ತಂದೊಡ್ಡಬಹುದು. ಆದರೆ ಭಾರತೀಯ ಸುರಕ್ಷಾ ಮಿತಿಗಳ ಪ್ರಕಾರ 40ಕ್ಕಿಂತ ಕಡಿಮೆ PM2.5 ಇದ್ದರೂ ಸ್ವೀಕಾರಾರ್ಹವಾಗಿದೆ. PM10 ಪ್ರಮಾಣವೂ 50 ಮೈಕ್ರೋಗ್ರಾಮ್ವರೆಗೂ ಇರಬಹುದು.ಈಗಾಗಲೇ ಇಂದು ಬೆಂಗಳೂರಿನ ಗಾಳಿಯ ಗುಣಮಟ್ಟ 200 ದಾಟಿ ತೊಂದರೆಯಿರುವವರು ಜಾಗರೂಕರಾಗಿರಬೇಕಾಗಿದೆ. ಇಂದು PM2.5 95 ಮೈಕ್ರೋಗ್ರಾಮ್ ಇದೆ, PM10 ಪ್ರಮಾಣ 96 ಇದೆ.
PM ಎಂದರೆ ಗಾಳಿಯಲ್ಲಿರುವ ಕಣಗಳು. PM2.5ನ ಕಣಗಳು ವಾಹನ ಹೊಗೆ, ಕೈಗಾರಿಕಾ ಹೊಗೆ, ಹಾಗೂ ಇಂಧನಗಳ ಹೊಗೆಯಿಂದ ಉತ್ಪತ್ತಿಯಾಗುತ್ತವೆ ಹಾಗೂ PM10 ನ ಕಣಗಳು ಕನ್ಸ್ಟ್ರಕ್ಷನ್ ನ ಧೂಳು, ಪರಾಗದಿಂದೆಲ್ಲಾ ಉತ್ಪತ್ತಿಯಾಗುತ್ತವೆ. ಎರಡ ಪ್ರಮಾಣವೂ ಮಿತಿ ಮೀರಿದಾಗ ಸಾರ್ವಜನಿಕ ಆಸ್ತಮಾದಂತಹ ತೊಂದರೆಗಳು ಎದುರಾಗುತ್ತವೆ. ಕೇವಲ PM ಆಯ್ಕೆ ಖಾರ್ಬನ್ ಮೊನಾಕ್ಸೈಡ್, ಓಜೋನ್, ನೈಜನ್ ಡೈ ಆಕ್ಸೈಡ್‌ಗಳ ಹೆಚ್ಚಿನವೂ ಗಾಳಿಯನ್ನು ಉಸಿರಾಡಲು ಅನರ್ಹವಾಗಿಸುತ್ತದೆ. ಸಧ್ಯ ಬೆಂಗಳೂರಿನಲ್ಲೇ ಅರೆಕೆರೆ, ಬೆಳ್ಳಂದೂರು ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿಯೂ ಗಾಳಿಯ ಗುಣಮಟ್ಟ ತೀವ್ರ ಕುಸಿತ ಕಂಡಿದೆ.
ಇದನ್ನೂ ಓದಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಉಲ್ಬಣ: ಇಂದು ಮತ್ತೆ ಗಾಳಿಮಟ್ಟ ಕುಸಿತ
ಗಾಳಿಯ ಗುಣಮಟ್ಟ ತಿಳಿಯುವುದು ಹೇಗೆ?
- ಉತ್ತಮ- 0-50
- ಮಧ್ಯಮ – 50-100
- ಕಳಪೆ – 100-150
- ಅನಾರೋಗ್ಯಕರ – 150-200
- ಗಂಭೀರ – 200 – 300
- ಅಪಾಯಕಾರಿ – 300 -500+
ಪ್ರಮುಖ ನಗರಗಳಲ್ಲಿ ಗಾಳಿ ಗುಣಮಟ್ಟ
- ಬೆಂಗಳೂರು – 180
- ಮಂಗಳೂರು -146
- ಮೈಸೂರು – 118
- ಬೆಳಗಾವಿ- 143
- ಕಲಬುರಗಿ – 77
- ಶಿವಮೊಗ್ಗ – 77
- ಬಳ್ಳಾರಿ- 167
- ಹುಬ್ಬಳ್ಳಿ – 90
- ಉಡುಪಿ – 85
- ವಿಜಯಪುರ – 79
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.