Headlines

ಬೆಂಗಳೂರು ಗಾಳಿಯ ಗುಣಮಟ್ಟ ತೀವ್ರ ಕುಸಿತ: ಉಸಿರಾಟ ಸಂಬಂಧಿ ಸಮಸ್ಯೆ ಹೆಚ್ಚಳದ ಆತಂಕ

ಬೆಂಗಳೂರು ಗಾಳಿಯ ಗುಣಮಟ್ಟ ತೀವ್ರ ಕುಸಿತ: ಉಸಿರಾಟ ಸಂಬಂಧಿ ಸಮಸ್ಯೆ ಹೆಚ್ಚಳದ ಆತಂಕ


ಬೆಂಗಳೂರು, ಡಿ.11: ಬೆಂಗಳೂರಿನಲ್ಲಿ ಮೂರು ದಿನದಿಂದ ಗಾಳಿಯ ಗುಣಮಟ್ಟದಲ್ಲಿ (ಬೆಂಗಳೂರು ವಾಯು ಗುಣಮಟ್ಟ ಎಚ್ಚರಿಕೆ) ವ್ಯತ್ಯಾಸ ಕಂಡು ಬಂದಿದೆ, ಬೆಂಗಳೂರಿನ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಿದೆ. ಗಾಳಿಯ ಗುಣಮಟ್ಟ ಅನಾರೋಗ್ಯಕರವಾಗಿದ್ದು 180ಕ್ಕೆ ತಲುಪಿದೆ. ಇದರಿಂದ ಈಗ ಜನರು ಆತಂಕಗೊಂಡಿದ್ದಾರೆ. ಬೆಂಗಳೂರಿನ ಗಾಳಿಯಲ್ಲಿ ಉಂಟಾದ ಅಶುದ್ಧತೆಯಿಂದ ಉಸಿರಾಟ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಇದಕ್ಕೆ ಪ್ರಮುಖ ಚಳಿಗಾಲ ಎಂದು ಹೇಳಲಾಗಿದೆ. ಇದರೊಂದಿಗೆ ವಾಹನ ದಟ್ಟಣೆ ಮತ್ತು ನಿರ್ಮಾಣ ಕಾರ್ಯಗಳಿಂದ ಈ ಸ್ಥಿತಿ ಉಂಟಾಗಿದೆ ಎಂದು ಹೇಳಲಾಗಿದೆ. ಇನ್ನು ಬೆಂಗಳೂರಿನಲ್ಲಿ ಇಂದು ಚಳಿಯ ವಾತಾವರಣವಿದ್ದು, ಇದು ಅನಾರೋಗ್ಯ ಪೀಡಿತರ ಮೇಲೆ ಹಾಗೂ ಯುವಕರು, ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು. ಆದ್ದರಿಂದ ಹೆಚ್ಚು ಹೊರಗೆ ಹೋಗುವುದನ್ನು ತಪ್ಪಿಸುವುದೇ ಇದಕ್ಕೆ ಉತ್ತಮ ಪರಿಹಾರ ಹಾಗೂ ಬಿಸಿ ವಸ್ತು ಇರುವ ವಸ್ತುಗಳನ್ನು ಬಳಸಲಾಗಿದೆ ಎಂದು ಹೇಳಲಾಗಿದೆ. ದೆಹಲಿಗಿಂತ ಬೆಂಗಳೂರಿನ ವಾತಾವರಣ ಉತ್ತಮವಾಗಿದ್ದರೂ, ಸೂಚ್ಯಂಕದ ಪ್ರಕಾರ ಇದು ಕಳಪೆ ಗಾಳಿಯಾಗಿರುವ ಕಾರಣ ಎಚ್ಚರ ವಹಿಸುವುದು ಅಗತ್ಯ.

ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ 90-180ಕ್ಕೆ ತಲುಪಿದೆ. ಇದು ಅನಾರೋಗ್ಯಕರ ಸ್ಥಿತಿ ಎಂದು ಹೇಳಲಾಗಿದೆ. PM2.5 (ಸೂಕ್ಷ್ಮ ಕಣಗಳು) ಮತ್ತು PM10 ಪ್ರಮುಖ, ಜೊತೆಗೆ ಸಾರಜನಕ ಡೈಆಕ್ಸೈಡ್ ಗಾಳಿಯ ಕುಗ್ಗಿಸಿದೆ. ವಾಹನ ಹೊರಸೂಸುವ ಹೊಗೆಗಳಿಂದ ಮತ್ತು ನಿರ್ಮಾಣ ಕಾರ್ಯಗಳಿಂದ ಗಾಳಿಯ ಗುಣಮಟ್ಟದ ಹದಗೆಡಲು ಕಾರಣ ಎಂದು ಹೇಳಲಾಗಿದೆ. ಇದರೊಂದಿಗೆ ಚಳಿಗಾಲ ಆಗಿರುವ ಕಾರಣ ಈ ವಾಯುಮಾಲಿನ್ಯಕ್ಕೆ ಪ್ರಮುಖವಾಗಿದೆ. ಇದರಿಂದ ತೊಂದರೆ ಮತ್ತು ಗಂಟಲಿನ ಕಿರಿಕಿರಿಯನ್ನು ಉಂಟುಮಾಡಬಹುದು, ವಿಶೇಷವಾಗಿ ಯುವಕರು, ವೃದ್ಧರಲ್ಲಿ ಸಮಸ್ಯೆ ಕಂಡು ಬರಬಹುದು. ಇನ್ನು ಇಂತಹ ಗಾಳಿಯ ಗುಣಮಟ್ಟದಿಂದ ಯುವಕರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ವರದಿಗಳು ತಿಳಿಸಿವೆ.

ಮುಂದಿನ 4 ದಿನ ಗಾಳಿಯ ಗುಣಮಟ್ಟ:

ಇಂದು ಗಾಳಿಯ ಗುಣಮಟ್ಟ 180ಕ್ಕೆ ತಲುಪಿದೆ. ಇದು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದು ಹೆಚ್ಚು ಅಪಾಯಕಾರಿ ಗಾಳಿಯ ಮಟ್ಟ ಎಂದು ಹೇಳಲಾಗಿದೆ. ನಾಳೆ (ಡಿ.12) ಗಾಳಿಯ ಗುಣಮಟ್ಟ 156ಕ್ಕಿಂತ ಹೆಚ್ಚಿರಬಹುದು. ಇದರಿಂದ ಕೂಡ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಆರೋಗ್ಯವಂತ ವ್ಯಕ್ತಿಗಳು ತೊಂದರೆ ಮತ್ತು ಗಂಟಲಿನ ಕಿರಿಕಿರಿಯನ್ನು ಅನುಭವಿಸುವ ಸಾಧ್ಯತೆಯಿದೆ. ಶನಿವಾರ (ಡಿ.13) ಗಾಳಿಯ ಗುಣಮಟ್ಟ 157ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದರಿಂದಲೂ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಉಂಟು ಮಾಡಬಹುದು. ಇನ್ನು ಭಾನುವಾರ (ಡಿ.14) ಗಾಳಿಯ ಗುಣಮಟ್ಟ 171ಕ್ಕೆ ತಲುಪಲಿದೆ ಎಂದು ಹೇಳಲಾಗಿದೆ. ಜನರು ಈ ಮೂರು ದಿನವೂ ಎಚ್ಚರಿಕೆಯಿಂದ ಇರಬೇಕು ಹಾಗೂ ಆರೋಗ್ಯದ ಬಗ್ಗೆ ಗಮನಹರಿಸಬೇಕು ಎಂದು ಹೇಳಲಾಗಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ

ಈ ಮಾಲಿನ್ಯಕ್ಕೆ ಪ್ರಮುಖ ಕಾರಣ:

ಅತಿ ಹೆಚ್ಚು ವಾಹನ ದಟ್ಟಣೆಯಿಂದ ಈ ಸಮಸ್ಯೆ ಉಂಟಾಗಿದೆ. ಇಂಧನ ದಹನದಿಂದ ಹೊರಸೂಸುವ ಗಾಳಿಯಿಂದ ಮಾಲಿನ್ಯಕಾರಕಕ್ಕೆ ಕಾರಣವಾಗಿದೆ. ರಸ್ತೆ ಕಾಮಗಾರಿ, ಕಟ್ಟಡ ಕಾಮಗಾರಿಗಳಿಂದ ಪರಿಸರ ಮಾಲಿನ್ಯ ಉಂಟಾಗಿದೆ. ಜೊತೆಗೆ ತ್ಯಾಜ್ಯ ಸುಡುವುದರಿಂದ ಈ ಸಮಸ್ಯೆ ಉಂಟಾಗಿದೆ. ಹೊರಗೆ ಹೋಗಬೇಕಾದರೆ ಮಾಸ್ಕ್ ಧರಿಸುವುದು ಉತ್ತಮ, ಹೆಚ್ಚಾಗಿ ಬಿಸಿ ಆಹಾರಗಳನ್ನು ಸೇವಿಸುವುದು ಉತ್ತಮ.

ಉತ್ತರ ಕರ್ನಾಟಕ ಗಾಳಿಯಲ್ಲಿ ವ್ಯತ್ಯಾಸ:

ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಶೀತಗಾಳಿ ಬೀಸಿದ್ದು, ಸಸ್ಯಗಳಲ್ಲಿ ಉಂಟಾಗುವ ರೋಗಗಳ ಜೊತೆಗೆ ಜನರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಸೇರಿದಂತೆ ಹೆಚ್ಚಿನ ಭಾಗಗಳಲ್ಲಿ ಜನರು ರಾತ್ರಿಯಲ್ಲಿ ಕೊರೆಯುವ ಚಳಿಯಿಂದಾಗಿ ಮನೆಯಿಂದ ಹೊರಗೆ ಬಂದಿಲ್ಲ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *