ಬೆಂಗಳೂರು, ಫೆ.16: ಬೆಂಗಳೂರಿನ ಜೋಡಿ ಹಕ್ಕಿಗಳಿಗೆ ಫೆ.14 ತುಂಬಾ ನಿರಾಸೆದಾಯಕವಾಗಿತ್ತು. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಾಲೆಂಟೈನ್ಸ್ ಡೇ ಸಂಭ್ರಮಿಸಲು ಯೋಜಿಸಿದ್ದ ನೂರಾರು ಜೋಡಿಗಳಿಗೆ ಬೆಂಗಳೂರಿನ ಜನಪ್ರಿಯ ಬ್ರೂವರಿ (ಬೆಂಗಳೂರು ಬ್ರೂವರಿ) ನಿರಾಶೆ ಉಂಟು ಮಾಡಿದ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗಿದೆ. ಟೇಬಲ್‌ಗಳನ್ನು ಸಾಮರ್ಥ್ಯಕ್ಕಿಂತ ಹೆಚ್ಚು ಬುಕ್ ಮಾಡಿರುವ ಕಾರಣ, ಜೋಡಿಗಳು ಗಂಟೆಗಳ ಕಾಲ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸಂಜೆಯ ಚಳಿಯಲ್ಲಿ ಹೊರಗೆ ಉದ್ದವಾಗಿ ನಿಂತು ಸುಸ್ತಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಅಕ್ಷಯ್ ಕುಮಾವತ್ ಎಂಬ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ, “ಸಾಮರ್ಥ್ಯಕ್ಕಿಂತ ಹೆಚ್ಚು ಟೇಬಲ್ ಬುಕ್ ಮಾಡಿದರೆ ಏನಾಗುತ್ತದೆ” ಎಂಬ ಶೀರ್ಷಿಕೆಯನ್ನು ಪ್ರಕಟಿಸಲಾಗಿದೆ.
ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಈಗ ಭಾರಿ ವೈರಲ್ ಆಗಿದ್ದು, ಬೆಂಗಳೂರಿನ ಬ್ರೂವರಿ ಮ್ಯಾನೇಜ್‌ಮೆಂಟ್ ವೈಫಲ್ಯವನ್ನು ಬಯಲು ಮಾಡಿದೆ ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ನೂರಾರು ಜೋಡಿಗಳು ಚಳಿಯಲ್ಲಿ ಮಳಿಗೆಯ ಹೊರಗೆ ಉದ್ದನೆಯ ಸಾಲಿನಲ್ಲಿ ಕಾಯುತ್ತಿರುವುದು ಕಂಡುಬಂದಿದೆ. ಟೇಬಲ್ ರಿಸರ್ವೇಶನ್ ಮಾಡಿದರೂ ಸಹ ಸೀಟು ಸಿಗದೆ ಕೋಪ ವ್ಯಕ್ತಪಡಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
ವರದಿಗಳ ಪ್ರಕಾರ, ಒಬ್ಬ ವ್ಯಕ್ತಿಗೆ ತಲಾ 2,000 ರೂ. ವರೆಗೆ ಭಾರಿ ಪ್ರಮಾಣದ ಕವರ್ ಚಾರ್ಜ್ ವಸೂಲಿ ಮಾಡಲಾಗಿದೆ. ಇಷ್ಟೊಂದು ಹಣ ನೀಡಿದರೂ ಸರಿಯಾದ ವ್ಯವಸ್ಥೆ ಇರಲಿಲ್ಲ ಎಂಬುದು ಗ್ರಾಹಕರ ದೂರು. ಸೀಟು ಸಿಗದೆ ಹಿಂತಿರುಗಿದ ಅನೇಕ ಗ್ರಾಹಕರು ತಾವು ಪಡೆದ ಹಣವನ್ನು ಮರಳಿ ಪಡೆಯಲು ಬ್ರೂವರಿ ಸಿಬ್ಬಂದಿಗೆ ಹರಸಾಹಸ ಪಡಬೇಕಾಗಿದೆ.ಫೆಬ್ರವರಿ 15 ರಂದು ಹಂಚಿಕೊಳ್ಳಲಾದ ಈ ವೀಡಿಯೊವನ್ನು ವೀಕ್ಷಿಸಲು 40 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸುತ್ತಿದ್ದಾರೆ ನೆಟ್ಟಿಗರು ಬ್ರೂವರಿಯ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ .
ಇದನ್ನೂ ಓದಿ: “ಇಷ್ಟು ಕೆಟ್ಟದಾಗಿ ಸೋಲುವ ಬದಲು ಬಾಯ್ಕಾಟ್ ಮಾಡೋದೇ ಲೇಸಾಗಿತ್ತು”: ಪಾಕಿಸ್ತಾನವನ್ನು ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು
ಅತಿಯಾದ ದರ ಮತ್ತು ಕಳಪೆ ನಿರ್ವಹಣೆಯ ಬಗ್ಗೆಯೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.”ಕೇವಲ ಸಾಮಾಜಿಕ ಜಾಲತಾಣದ ಹೈಪ್‌ಗಾಗಿ ಇಷ್ಟು ಕಷ್ಟಪಡಬೇಕೇ?” ಎಂದು ಒಬ್ಬರು ಪ್ರಶ್ನಿಸಿದರೆ, “ಮನೆಯಲ್ಲೇ ಉಳಿದ ಜೋಡಿಗಳೇ ಇಂದು ಅದೃಷ್ಟವಂತರು” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. “ಒಳ್ಳೆಯ ದಿನದಲ್ಲಿ ನಿಂತು ಶಾಂತಿಯನ್ನು ಕಳೆದುಕೊಳ್ಳಬೇಕೇ?” ಮತ್ತೊಬ್ಬರು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ