ಬೆಂಗಳೂರಿನ ಪಿಜಿಗಳಿಗೆ ಜಿಬಿಎ ಶಾಕ್! 500ಕ್ಕೂ ಹೆಚ್ಚು ಪಿಜಿಗಳಿಗೆ ನೋಟಿಸ್

ಬೆಂಗಳೂರಿನ ಪಿಜಿಗಳಿಗೆ ಜಿಬಿಎ ಶಾಕ್! 500ಕ್ಕೂ ಹೆಚ್ಚು ಪಿಜಿಗಳಿಗೆ ನೋಟಿಸ್


ಬೆಂಗಳೂರಿನ ಪಿಜಿಗಳಿಗೆ ಜಿಬಿಎ ಶಾಕ್! 574 ಪಿಜಿಗಳಿಗೆ ನೋಟಿಸ್

ಬೆಂಗಳೂರು, ಫೆಬ್ರುವರಿ 02: ವಿವಿಧ ರಾಜ್ಯಗಳಿಂದ ಉದ್ಯೋಗ, ಶಿಕ್ಷಣ ಸೇರಿದಂತೆ ಹಲವು ಕಾರಣಗಳಿಂದ ವಾಸವಾಗಿರುವ ಜನರ ಸಂಖ್ಯೆ ಹೆಚ್ಚುತ್ತಿರುವ, ಪೇಯಿಂಗ್ ಗೆಸ್ಟ್ (ಬೆಂಗಳೂರು ಪಿಜಿ) ವಸತಿಗೃಹಗಳ ಸಂಖ್ಯೆಯು ತುಂಬಾ ಹೆಚ್ಚಾಗಿದೆ. ಆದರೆ ಅನೇಕ ಪಿಜಿಗಳು ಮೂಲಭೂತ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಅಸುರಕ್ಷಿತ ಪಿಜಿಗಳ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಕಾರಿಗಳು ಕಟ್ಟುನಿಟ್ಟಿನ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಎತ್ತಿ 8 ಪಿಜಿಗಳಿಗೆ ಬೀಗ!

ಜನವರಿ ತಿಂಗಳಲ್ಲೇ ಶಾಂತಿನಗರ, ಸಿ.ವಿ.ರಾಮನ್‌ನಗರ, ಗಾಂಧಿನಗರ, ಶಿವಾಜಿನಗರ, ಚಾಮರಾಜಪೇಟೆ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ತಪಾಸಣೆ ನಡೆಸಿದ ಆರೋಗ್ಯಾಧಿಕಾರಿಗಳು 574 ಪಿಜಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಡುಗೆ ಕೋಣೆ ಶುಚಿತ್ವ, ಶುದ್ಧ ಕುಡಿಯುವ ನೀರು, ಸುರಕ್ಷತಾ ಕ್ರಮಗಳನ್ನು ಪಾಲಿಸಿದರೆ 8 ಪಿಜಿಗಳಿಗೆ ಬೀಗ ಹಾಕಲಾಯಿತು, ಇತರ ನಿಯಮ ಉಲ್ಲಂಘನೆಗಳಿಗೆ ಒಟ್ಟು 3.09 ಲಕ್ಷ ರೂ. ದಂಡ ವಿಧಿಸಲಾಗಿದೆ.

ಪಿಜಿಗೆ ಅಧಿಕಾರಿಗಖ ಖಡಕ್ ವಾರ್ನಿಂಗ್

ಪಿಜಿ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಏಕಾಏಕಿ ನಡೆಯುತ್ತಿರುವ ಕಾರ್ಯಾಚರಣೆಯಿಂದ ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತ ವಿಲ್ಸನ್ ಗಾರ್ಡನ್‌ನ ಪಿಜಿ ಮಾಲೀಕ ಶರಣೇಶ್ ಹೇಳಿಕೆ, ನಿಯಮ ಪಾಲನೆ ಜೊತೆಗೆ ಅಧಿಕಾರಿಗಳು ಸಹಕರಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ. ಪರಿಶೀಲನೆಗೆ ಒಳಪಟ್ಟ ಎಲ್ಲಾ ಪಿಜಿಗಳಿಗೆ ನೀಡಲಾಗುವುದು, ನ್ಯೂನತೆ ಸರಿಪಡಿಸಲಾಗಿದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪಿಜಿಗಳಿಗೆ ಬೀಗ ಬೀಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಲಕ್ಷ್ಮಿ ನರಸಿಂಹ , TV9 ಬೆಂಗಳೂರು

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *