Headlines

ಪೊಲೀಸ್ ಇಲಾಖೆಗೆ ಸೇರಿದ 80 ಕೋಟಿ ರೂ. ಮೌಲ್ಯದ ಆಸ್ತಿ ಕಬಳಿಕೆ! ಬೆಸ್ಕಾಂ ಅಧಿಕಾರಿಗಳು ಸೇರಿ ಹಲವರ ಮೇಲೆ ಎಫ್ಐಆರ್

ಪೊಲೀಸ್ ಇಲಾಖೆಗೆ ಸೇರಿದ 80 ಕೋಟಿ ರೂ. ಮೌಲ್ಯದ ಆಸ್ತಿ ಕಬಳಿಕೆ! ಬೆಸ್ಕಾಂ ಅಧಿಕಾರಿಗಳು ಸೇರಿ ಹಲವರ ಮೇಲೆ ಎಫ್ಐಆರ್


ಪೊಲೀಸ್ ಇಲಾಖೆಗೆ ಸೇರಿದ 80 ಕೋಟಿ ರೂ. ಮೌಲ್ಯದ ಆಸ್ತಿ ಕಬಳಿಕೆ! ಬೆಸ್ಕಾಂ ಅಧಿಕಾರಿಗಳು ಸೇರಿ ಹಲವರ ಮೇಲೆ ಎಫ್ಐಆರ್

ಬೆಂಗಳೂರು, ಏಪ್ರಿಲ್ 01: ಪೊಲೀಸ್ ಇಲಾಖೆಗೆ ಸೇರಿದ ಸುಮಾರು 80 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕಬಳಿಸಲು ಯತ್ನಿಸಿರುವ ಗಂಭೀರ ಆರೋಪ ಬೆಳಕಿಗೆ ಬಂದಿದೆ. ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಬೆಸ್ಕಾಂಪಾಲಿಕೆ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಮಹಿಳೆಯ ಹೆಸರಲ್ಲಿ ಬಂದ ವಿದ್ಯುತ್ ಬಿಲ್

ಹಳೆಯ ಮಲ್ಲೇಶ್ವರಂ ಪೊಲೀಸ್ ಠಾಣೆ ಹಾಗೂ ವಸತಿ ಗೃಹಗಳಿರುವ ಈ ಜಾಗಕ್ಕೆ 100 ವರ್ಷಕ್ಕೂ ಹೆಚ್ಚು ಇತಿಹಾಸವಿದೆ. 1913ರ ಮಾಪನ ನಕ್ಷೆಯಲ್ಲಿಯೇ ಈ ಪ್ರದೇಶವನ್ನು ಪೊಲೀಸ್ ವಸತಿಗೃಹ ಎಂದು ಗುರುತಿಸಲಾಗಿದೆ. ಪ್ರಸ್ತುತವೂ ಇಲ್ಲಿ ನಾಲ್ವರು ಇನ್ಸ್‌ಪೆಕ್ಟರ್‌ಗಳ ಕುಟುಂಬಗಳು ವಾಸಿಸುತ್ತಿವೆ. ಆದರೆ ಇತ್ತೀಚೆಗೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಕುಮಾರ್ ಅವರ ಮನೆಗೆ ವಿದ್ಯುತ್ ಬಿಲ್ ನಲ್ಲಿ ಮಹಾಲಕ್ಷ್ಮೀ ಎಂಬ ಖಾಸಗಿ ವ್ಯಕ್ತಿಯ ಹೆಸರು ನಮೂದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಅನುಮಾನಗೊಂಡ ಕುಮಾರ್ ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ, ಅಕ್ರಮವಾಗಿ ಆಸ್ತಿ ದಾಖಲೆಗಳನ್ನು ಮಹಾಲಕ್ಷ್ಮೀ ಹೆಸರಿಗೆ ವರ್ಗಾವಣೆ ಮಾಡಿರುವುದು ಬಹಿರಂಗವಾಗಿದೆ.

ಇದನ್ನೂ ಓದಿ ಬ್ರ್ಯಾಂಡೆಡ್ ವಾಚ್ ಎಂದು ಕಮ್ಮಿ ಬೆಲೆಗೆ ನಕಲಿ ವಾಚ್‌ಗಳನ್ನು ಮಾರುತ್ತಿದ್ದ ಐವರ ಬಂಧನ!

ಇದಲ್ಲದೆ, ಬಿಬಿಎಂಪಿ ಮೂಲಕ ಅಕ್ರಮವಾಗಿ ಇ-ಖಾ ಮಾಡಿರುವುದು ಹಾಗೂ ಕೃಷ್ಣಮೂರ್ತಿ ಎಂಬಾತನಿಗೆ ಮಾರಾಟ ಮಾಡಲು ಒಪ್ಪಂದ ಪತ್ರ (ಅಗ್ರಿಮೆಂಟ್ ಆಫ್ ಸೇಲ್) ಕೂಡ ಮಾಡಿರುವುದು ತನಿಖೆಯಲ್ಲಿದೆ. ಈ ನಡುವೆ, ಅಧಿಕಾರಿಗಳಿದ್ದರೂ ಜಾಗ ಖಾಲಿ ಮಾಡುತ್ತೇನೆ ಎಂದು ಮಹಿಳೆಯ ಕಡೆಯಿಂದ ಬೆದರಿಕೆ ಹಾಕಲಾಗಿದೆ. ಪ್ರಸ್ತುತ ಲೋಕಾ ಇನ್ಸ್‌ಪೆಕ್ಟರ್ ಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಮಲ್ಲೇಶ್ವರಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *