
ಬೆಂಗಳೂರು, ಏ.1: ಬೆಂಗಳೂರು ಸಿಟಿ ಪೊಲೀಸ್ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ “ಉಚಿತ ಐಪಿಎಲ್ ಟಿಕೆಟ್‌ಗಳು” ಎಂಬ ಪೋಸ್ಟರ್ ಅನ್ನು ಹಂಚಿಕೊಂಡಿದೆ. ಆದರೆ, ಇದು ನಿಜವಾದ ಆಫರ್, ಬದಲಾಗಿ ಸಾರ್ವಜನಿಕರಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಹೂಡಿರುವ ಒಂದು ತಂತ್ರವಾಗಿದೆ. ಇಂದು ಏಪ್ರಿಲ್ 1, ಅಂದರೆ ಏಪ್ರಿಲ್ ಫೂಲ್ ದಿನ. ಇದನ್ನೇ ಬಳಸಿಕೊಂಡಿರುವ ಬೆಂಗಳೂರು ನಗರ, ಐಪಿಎಲ್ ಕ್ರೇಜ್ ನಡುವೆ ಸಾರ್ವಜನಿಕರಿಗೆ ಹೇಗೆ ಸೈಬರ್ ವಂಚಕರು ಗಾಳ ಹಾಕುತ್ತಾರೆ ಎಂದು ತೋರಿಸಿಕೊಟ್ಟಿದ್ದಾರೆ.
ವೈದ್ಯರು ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ “ಬೆಂಗಳೂರು ಸಿಟಿ ಪೊಲೀಸ್ ವತಿಯಿಂದ 2 ಉಚಿತ ಐಪಿಎಲ್ ಟಿಕೆಟ್‌ಗಳನ್ನು ನೀಡಲಾಗುತ್ತಿದೆ, ಭಾಗವಹಿಸಲು ಬಯೋದಲ್ಲಿರುವ ಲಿಂಕ್ ಕ್ಲಿಕ್ ಮಾಡಿ” ಎಂದು ಬರೆಯಲಾಗಿದೆ. ಇದನ್ನು ನೋಡಿದ ಅನೇಕರು ನಿಜವೆಂದು ನಂಬಿ ಲಿಂಕ್ ಹುಡುಕತೊಡಗಿದ್ದಾರೆ. ಆದರೆ, ವಾಸ್ತವದಲ್ಲಿ ಇದು ವಂಚಕ ಜಾಲದ ಬಗ್ಗೆ ಎಚ್ಚರಿಸುವ ಒಂದು ಪ್ರ್ಯಾಂಕ್ ಆಗಿದೆ.
ಇದನ್ನೂ ಓದಿ: ಬೆಂಗಳೂರು ‘ಪೀಕ್ ಹೆಲ್ತ್‌ಕೇರ್’: ಅಮೆರಿಕದಲ್ಲಿ ಸಿಗದ ಲಸಿಕೆ ಕೋರಮಂಗಲದಲ್ಲಿ 10 ನಿಮಿಷದಲ್ಲಿ ಲಭ್ಯ!
ಇಲ್ಲಿದೆ ನೋಡಿ ಪೋಸ್ಟ್;
ಈಗ ನಿಮ್ಮ ಟಿಕೆಟ್‌ಗಳನ್ನು ಪಡೆದುಕೊಳ್ಳಿ!!
ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: https://t.co/sQ9x432iSd #ipl2026 #BCP #ಏಪ್ರಿಲ್ pic.twitter.com/FhQ8BWn09E— ಬೆಂಗಳೂರು ನಗರ ಪೊಲೀಸ್, BengaluruCityPolice (@BlrCityPolice) ಏಪ್ರಿಲ್ 1, 2026
“ಉಚಿತವಾಗಿ ಏನಾದರೂ ಸಿಗುತ್ತದೆ ಎಂಬ ಆಸೆಗೆ ಬಿದ್ದು ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಐಪಿಎಲ್ ಸೀಸನ್‌ನಲ್ಲಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಹಣವನ್ನು ದೋಚುವ ಸೈಬರ್ ಕ್ರಿಮಿನಲ್‌ಗಳ ಬಗ್ಗೆ ಎಚ್ಚರದಿಂದಿರಿ” ಎಂದು ಈ ಪೋಲ್ ಮತ್ತು ಪೋಸ್ಟ್ ಮೂಲಕ ಸಂದೇಶವನ್ನು ಕಳುಹಿಸಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ