ಬೆಂಗಳೂರು, ಡಿ.15: ಬೆಂಗಳೂರು ರಸ್ತೆ (ಬೆಂಗಳೂರು ರಸ್ತೆ) ಸಮಸ್ಯೆಗಳ ಬಗ್ಗೆ ಉದ್ಯಮಿಗಳು, ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು, ವಿದೇಶಿಗರು ಪೋಸ್ಟ್ ಮಾಡಿ ಸರ್ಕಾರಕ್ಕೆ ಛೀಮಾರಿ ಹಾಕಿದ್ದರು. ಆದ್ರೂ ಇನ್ನು ಕೂಡ ಬೆಂಗಳೂರು ರಸ್ತೆ ಸುಧಾರಿಸಿಲ್ಲ. ಈ ಹಿಂದೆ ಗ್ರೇಟರ್ ಪ್ರಾಧಿಕಾರದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೆಂಗಳೂರಿನಲ್ಲಿ ರಸ್ತೆ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ವೈಟ್ ಟ್ಯಾಪಿಂಗ್ ಕಾಮಗಾರಿಗಳು ಜೂನ್ 2026 ರೊಳಗೆ ಮುಕ್ತಾಯಗೊಳ್ಳಲಿದೆ, ನಗರದ ಮುಖ್ಯ ರಸ್ತೆಗಳು ಸುಧಾರಣೆಗೊಳ್ಳಲಿವೆ ಎಂದೆಲ್ಲ ಹೇಳಿದರು. ಆದರೆ ಇನ್ನು ಮುಂದೆ ಯಾವುದೇ ಕೆಲಸ ಪ್ರಾರಂಭವಾಗುತ್ತಿಲ್ಲ. ಇದೀಗ ಬೆಂಗಳೂರಿನ ರಸ್ತೆಯ ಬಗ್ಗೆ ಯೂರೋಪನಲ್ಲಿದ್ದ ಭಾರತೀಯ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜಧಾನಿಯಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯ ದಂಪತಿಗಳು ಭಾರತಕ್ಕೆ ಬಂದಿದ್ದಾರೆ, ಹೊಸ ಜೀವನ ಕಟ್ಟಿಕೊಳ್ಳಲು ಕರ್ನಾಟಕ ರಾಜಧಾನಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಇದೀಗ ಬೆಂಗಳೂರಿನ ರಸ್ತೆಯ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ.
ನಮಗೆ ಬೆಂಗಳೂರಿನ ರಸ್ತೆಯ ಬಗ್ಗೆ ತುಂಬಾ ನಿರಾಸೆ ಉಂಟು ಮಾಡಿದೆ ಎಂದು ಪೋಸ್ಟ್ ಮಾಡಲಾಗಿದೆ. 30 ನಂತರ ಈ ದಂಪತಿ ಭಾರತಕ್ಕೆ ಬಂದಿದ್ದಾರೆ. ಮುಂಬರುವ ವಯಸ್ಸಿನಲ್ಲಿ ತಮ್ಮ ಕುಟುಂಬದ ಜೊತೆ ಜೀವನ ನಡೆಸಲು ನಿರ್ಧರಿಸಿದ್ದಾರೆ. ಭಾರತದ ಇತರ ಸಿಟಿಗಳಿಂದ ಬೆಂಗಳೂರು ಉತ್ತಮ ಎಂದುಕೊಂಡಿದ್ದರು, ಆದರೆ ಇದೀಗ ಇಲ್ಲಿನ ರಸ್ತೆಗಳನ್ನು ನೋಡಿ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ತಂಗಿದ್ದ ದಂಪತಿಗಳು, ದೇಶದ ಕೆಲವು ಪ್ರದೇಶಗಳಲ್ಲಿ ಸುತ್ತಾಡಿದ್ದಾರೆ. ಹೊರ ವರ್ತುಲ ರಸ್ತೆಯ ಉದ್ದಕ್ಕೂ ಐಟಿ ಕಂಪನಿಗಳು ಇರುವ ಕಾರಣ, ಈ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಇದು ದಾಖಲೆಗಳಲ್ಲಿ ಮಾತ್ರ ಸರಿಯಾಗಿದೆ. ನೇರವಾಗಿ ನೋಡಿದಾಗ, ತುಂಬಾ ಕೆಟ್ಟ ಅನುಭವವನ್ನು ನೀಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗಿಂತ ಬಳ್ಳಾರಿಯಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿದೆ
ಈ ಪ್ರದೇಶವು ವಾರಾಂತ್ಯಗಳಲ್ಲಿಯೂ ಸಹ ತುಂಬಾ ಜನನಿಬಿಡ ಮತ್ತು ಗದ್ದಲದಿಂದ ಕೂಡಿರುತ್ತದೆ. ನಿರಂತರ ಸಂಚಾರ ಇರುತ್ತದೆ. ಇಲ್ಲಿ ಯಾವುದೇ ಗಲಾಟೆ ಇಲ್ಲದೆ, ಶಾಂತಿಯುತವಾಗಿ ಬದುಕಲು ಸಾಧ್ಯವಿಲ್ಲ. ಇನ್ನು ಇತರ ಪ್ರದೇಶಗಳಲ್ಲಿ ಮನೆ ನೋಡಿದ್ರೆ, ರಸ್ತೆಗಳು ಗುಂಡಿ ಬಿದ್ದಿದೆ. ಆ ರಸ್ತೆಯಲ್ಲಿ ನಾವು ಸುಮಾರು 3-4 ಬಾರಿ ಎಡವಿ ಬಿದ್ದಿದ್ದೇವೆ. ತುಂಬಾ ಎಚ್ಚರಿಕೆಯಿಂದ ನಡೆಯಬೇಕಾದ ಪರಿಸ್ಥಿತಿ ಇದೆ. ಅದರೂ ಬೇರೆ ಬೇರೆ ಕಡೆ ಮನೆಗಳನ್ನು ಹುಡುಕಿದ್ದೇವೆ. ಆದರೆ ಅಲ್ಲಿ ಕೂಡ ಸಮಸ್ಯೆಗಳು ಕಂಡುಬಂದಿವೆ. ಕಡೆ ಕಾರ್ ಪಾರ್ಕಿಂಗ್ ಇಲ್ಲ. ಮೆಟ್ರೋ ಸಂಪರ್ಕ ಕೂಡ ತುಂಬಾ ದೂರು ಇದೆ. ಪ್ರಮುಖ ನ್ಯೂನತೆಗಳು ಇಲ್ಲಿದೆ. ಇನ್ನು ಈ ಪ್ರದೇಶದಲ್ಲಿ ರಸ್ತೆಯಲ್ಲಿ ಪ್ರಯಾಣಿಸುವ ಎಂದರೆ 1 ಗಂಟೆಗಿಂತ ಹೆಚ್ಚಿನ ಸಮಯ ಬೇಕು ಎಂದು ಹೇಳಿದ್ದಾರೆ.
ಇಲ್ಲಿದೆ ನೋಡಿ ಪೋಸ್ಟ್:
ಬೆಂಗಳೂರಿಗೆ ನಮ್ಮ ಅನ್ವೇಷಣಾ ಪ್ರವಾಸದಲ್ಲಿ ಆಘಾತವಾಗಿದೆ – ಆರ್‌ಟಿಐಗೆ ಹೊಂದಾಣಿಕೆ ಮಾಡುವುದು ಹೇಗೆ? byu/devilman123 inreturnToIndia
ಮಾರತ್ತಹಳ್ಳಿಗೆ ಬಳಿ ವಾಸಿಸಲು ಸ್ವಲ್ಪ ಯೋಗ್ಯವಾದ ಪ್ರದೇಶಗಳು ಇತ್ತು. ಆದರೆ ಅಲ್ಲಿ ಸಮಸ್ಯೆ ಬಂದದ್ದು, ಮನೆಯ ಬಾಡಿಗೆ. ಕೊಳೆಗೇರಿಗಳ ಬಳಿ ವಾಸಿಸಲು 4 ಕೋಟಿ ರೂ. ಪಡೆಯಬೇಕು ಎಂದು ಹೇಳಿದರು. ಇನ್ನು ಈ ಪೋಸ್ಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಲಹೆಗಳನ್ನು ನೀಡಿದ್ದಾರೆ ಈ ದಂಪತಿಗಳು. ಇದರಲ್ಲಿ ಯಾರಾದರೂ ಇತರರನ್ನು ಹುಡುಕಿ ಎಂದು ಸಲಹೆ. ನೀವು ಭಾರತಕ್ಕೆ ಬಂದಾಗ ಜೀವನ ಹೇಗಿರುತ್ತದೆ ಎಂಬುದರ ಬಗ್ಗೆ ನಿಮಗೆ ನೇರ ಅನುಭವ ಸಿಕ್ಕಿರುವುದು ಒಳ್ಳೆಯದು. ಜೊತೆಗೆ, ನೀವೇ ವಾಹನ ಚಾಲನೆ ಮಾಡುವ ಅನುಭವವನ್ನು ಪಡೆದಿರಬಹದು. ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋದಾಗ ಯಾವಾಗಲೂ ವಿನಿಮಯ ಇರುತ್ತದೆ. ಇದರಿಂದ ನೀವು ಏನನ್ನಾದರೂ ಗಳಿಸುತ್ತೀರಿ ಮತ್ತು ಏನನ್ನಾದರೂ ಕಳೆದುಕೊಳ್ಳುತ್ತೀರಿ ಎಂದು ಮತ್ತೊಬ್ಬರು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ