ಬೆಂಗಳೂರಿನಲ್ಲಿ ಟೆಕ್ ಉದ್ಯೋಗಗಳಿಗೆ ಮುಗಿಬೀಳುತ್ತಿದ್ದಾರೆ ಜನ! ರಿಕ್ರೂಟರ್ ಎಕ್ಸ್ ಪೋಸ್ಟ್ ವೈರಲ್

ಬೆಂಗಳೂರಿನಲ್ಲಿ ಟೆಕ್ ಉದ್ಯೋಗಗಳಿಗೆ ಮುಗಿಬೀಳುತ್ತಿದ್ದಾರೆ ಜನ! ರಿಕ್ರೂಟರ್ ಎಕ್ಸ್ ಪೋಸ್ಟ್ ವೈರಲ್


ಬೆಂಗಳೂರಿನಲ್ಲಿ ಟೆಕ್ ಉದ್ಯೋಗಗಳಿಗೆ ಮುಗಿಬೀಳುತ್ತಿದ್ದಾರೆ ಜನ! ರಿಕ್ರೂಟರ್ ಎಕ್ಸ್ ಪೋಸ್ಟ್ ವೈರಲ್

ಬೆಂಗಳೂರು, ಮಾರ್ಚ್ 16: ಐಟಿ ಸಿಟಿಗೆ ಉದ್ಯೋಗ ಹುಡುಕಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೆ ಕೆಲಸ ಅರಸಿ ಬರುವ ಆಕಾಂಕ್ಷಿಗಳ ಮಧ್ಯೆ ಸ್ಪರ್ಧೆ ತೀವ್ರವಾಗಿದೆ, ಈ ಬಗ್ಗೆ ಬೆಂಗಳೂರಿನ (ಬೆಂಗಳೂರು) ರಿಕ್ರೂಟರ್ ಒಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 15 ದಿನಗಳಲ್ಲಿ ಸಾವಿರಾರು ಮಂದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಕುರಿತು ಅವರು ಪೋಸ್ಟ್ ಮಾಡಿದ್ದಾರೆ, ಒಂದು ಕೆಲಸ ದಕ್ಕಿಸಿಕೊಳ್ಳುವ ಸ್ಪರ್ಧೆಯು ಇದೇ ಎಂದು ಬರೆದುಕೊಂಡಿದ್ದಾರೆ.

15 ದಿನಗಳಲ್ಲಿ 30 ಸಾವಿರಕ್ಕೂ ಹೆಚ್ಚು ಅರ್ಜಿಗಳು

ಟೆಕ್ ಉದ್ಯೋಗಗಳಿಗಾಗಿ ಸ್ಪರ್ಧೆ ದಿನೇ ದಿನೇ ಹೆಚ್ಚುತ್ತಿದೆ, ವಿಶೇಷವಾಗಿ MERN ಮತ್ತು ರಿಯಾಕ್ಟ್ ಡೆವಲಪರ್ ಹುದ್ದೆಗಳಿಗೆ ಭಾರೀ ಪ್ರಮಾಣದಲ್ಲಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಗಮನಕ್ಕೆ ಬಂದಿದೆ. ಕಳೆದ 15 ದಿನಗಳಲ್ಲಿ ಸುಮಾರು 34,742 ಮಂದಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಕುರಿತು ಮಾಹಿತಿ ಹಂಚಿಕೊಂಡಿರುವ ರಿಕ್ರೂಟರ್ ನಾರಾಯಣಿ ಗುರುನಾಥನ್ ಎಕ್ಸ್ ಪೋಸ್ಟ್ ಮಾಡಿ, ಕೇವಲ 15 ಮೆರ್ನ್ ಮತ್ತು ರಿಯಾಕ್ಟ್ ಉದ್ಯೋಗಿಗಳಿಗೆ 34 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಉದ್ಯೋಗಕ್ಕೆ ಅರ್ಜಿ ಹಾಕುವಾಗ ಸ್ಪರ್ಧೆ ಇದುವೆ ಎಂದು ಹೇಳಿದರು.

ಪೋಸ್ಟ್ ವೈರಲ್ ಇಲ್ಲಿದೆ

ನೆಟ್ಟಿಗರ ರಿಯಾಕ್ಷನ್ ಹೇಗಿತ್ತು?

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಬೆಂಗಳೂರು ಟೆಕ್ ಉದ್ಯೋಗ ಸ್ಪರ್ಧೆ ಎಷ್ಟು ಸಾಧ್ಯವೋ ತಮ್ಮ ಅನುಭವಗಳ ಮೂಲಕ ಹಂಚಿಕೊಂಡಿದ್ದಾರೆ. ಕೆಲವು ಉದ್ಯೋಗ ಸುಳ್ಳು ಅರ್ಜಿ ಹಾಕುವವರ ಸಂಖ್ಯೆಯು ಹೆಚ್ಚು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ಬಳಕೆದಾರ ನಮ್ಮ ಕಂಪನಿಯಲ್ಲಿ 500ಕ್ಕೂ ಹೆಚ್ಚು ರೆಸ್ಯೂಮ್ ಬಂದರೂ, ಕೆಲಸಕ್ಕೆ ಬೇಕಾದ ಅರ್ಹತೆ ತಿಳುವಳಿಕೆ ಹಲವರಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ, ಟೆಕ್ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಿದ್ದರೂ, ಅದೇ ಮಟ್ಟದಲ್ಲಿ ಸ್ಪರ್ಧೆಯೂ ಹೆಚ್ಚುತ್ತಿದೆ ಈ ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *