Headlines

IPSಗೆ ಸೇರಿದ ವಿಲ್ಲಾದಲ್ಲಿ ಅತ್ಯಾಚಾರ: ಬೆಂಗಳೂರು ಕಾರ್ಪೊರೇಟರ್ ಮಗ ಅರೆಸ್ಟ್, ಒಬ್ಬೊಬ್ಬರದ್ದು ಒಂದೊಂದು ಪಾತ್ರ

IPSಗೆ ಸೇರಿದ ವಿಲ್ಲಾದಲ್ಲಿ ಅತ್ಯಾಚಾರ: ಬೆಂಗಳೂರು ಕಾರ್ಪೊರೇಟರ್ ಮಗ ಅರೆಸ್ಟ್, ಒಬ್ಬೊಬ್ಬರದ್ದು ಒಂದೊಂದು ಪಾತ್ರ


ಬೆಂಗಳೂರು, ಮಾರ್ಚ್ 01: ಅಮೃತಹಳ್ಳಿಯ ವಿಲ್ಲಾದಲ್ಲಿ ನಡೆದಿರುವ ಅತ್ಯಾಚಾರ ಕೇಸ್ (ದೈಹಿಕ ಹಲ್ಲೆ ಪ್ರಕರಣ) ಸಂಬಂಧ ಮತ್ತೆ ಮೂವರ ಬಂಧನವಾಗಿದೆ. ಮಾಸ್ಟರ್ ಮೈಂಡ್ ನಿಖಿಲ್ ಕೃತ್ಯಕ್ಕೆ ಸಾಥ್ ನೀಡುತ್ತಿದ್ದ ರಾಜಕಾರಣಿ ಮಗ ಸೇರಿದಂತೆ ಮೂವರನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇನ್ನು ಕೃತ್ಯದ ವೇಳೆ ನಿಖಿಲ್ ಬಳಸಿದ್ದ ಕಾರ್ನ್ನ ಖಾಕಿ ಸೀಜ್ ಮಾಡಿದೆ.

ಡ್ರಗ್ಸ್ ದಂಧೆ ಜತೆ ಸೆಕ್ಸ್ ದಂಧೆಗೂ ಬಯಲಾಗಿದ್ದ ಕೇಸ್ ನಲ್ಲಿ ಮತ್ತೆ ಮೂವರು ಲಾಕ್ ಆಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ನಿಖಿಲ್, ಡಿಕ್ಸನ್ ಹೆಡೆಮುರಿ ಕಟ್ಟಿದ್ದ ಅಮೃತಹಳ್ಳಿ ಇದೀಗ ಅನಿರುದ್ಧ, ಶ್ರವಣ್, ಮೋಹಿತ್ ಎಂಬ ಮೂವರನ್ನ ಕಸ್ಟಡಿಗೆ ಪಡೆದಿದ್ದಾರೆ. ಈ ಮೂವರು ಕೂಡ ನಿಖಿಲ್ ಕೃತ್ಯಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಸಾಥ್ ನೀಡಿದ ಬಗ್ಗೆ ತನಿಖೆ ವೇಳೆ ಬಯಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿನಿಗಳ ಜತೆ ಪಾರ್ಟಿ ಮಾಡಿದ ಎಕ್ಸ್‌ಕ್ಲೂಸಿವ್ ದೃಶ್ಯ: ನಿಖಿಲ್ ಯುವತಿಯರ ಜೊತೆಗೆ ಖುಲ್ಲಂ ಖುಲ್ಲಾ

ಡ್ರಗ್ಸ್ ನೀಡಿ ರೇಪ್ ಮಾಡಿದ್ದಾನೆ ಎಂಬ ದೊಡ್ಡ ಆರೋಪ ಹೊತ್ತಿರುವ ನಿಖಿಲ್ ನ ಕೆಲಸಕ್ಕೆಲ್ಲಾ ಈ ನಾಲ್ವರು ಕೂಡ ಬಲಗೈ ಎಡಗೈನಂತಿದ್ದರು. ಯಾವಾಗ ನಿಖಿಲ್ ಮತ್ತು ಡಿಕ್ಸನ್ ಬಂಧನವಾಯ್ತೋ ಈ ಮೂವರದ್ದು ಕೂಡ ಇದರಲ್ಲಿ ಪಾತ್ರವಿದೆ ಅನ್ನೋದು ಗೊತ್ತಾಯ್ತು. ಹೀಗಾಗಿ ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ.

ಒಬ್ಬಬ್ಬರದ್ದು ಒಂದೊಂದು ಪಾತ್ರ

ನಿಖಿಲ್- ಪಾರ್ಟಿಯ ಮಾಸ್ಟರ್ ಮೈಂಡ್. ಡಿಕ್ಸನ್ ಸಾಂಡ್ರಾ: ಹುಡುಗಿರನ್ನ ಕರೆತರುವುದು, ಅನಿರುದ್ಧ: ಪಾರ್ಟಿಗೆ ವಿಲ್ಲಾ ಬುಕ್ ಮಾಡಿ, ಹಣದ ವ್ಯವಸ್ಥೆ ಮಾಡಿದೆ, ಶ್ರವಣ: ಹುಡುಗಿಯರು ಪಿಕ್ ಮಾಡಿ ಕರೆತರುವುದು, ಮೋಹಿತ್: ಮೂಲತಃ ರಾಜಧಾನಿಯಾದ ಇವನು ಪಾರ್ಟಿಯಲ್ಲಿದ್ದ.

ಹೀಗೆ ನಿಖಿಲ್ ನಡೆಸುತ್ತಿದ್ದ ಪಾರ್ಟಿಯಲ್ಲಿ ಈ ನಾಲ್ವರು ಒಂದಲ್ಲಾ ಒಂದು ರೀತಿ ಪಾತ್ರದಾರಿಗಳಾಗಿದ್ದರು. ಇನ್ನು ಅನಿರುದ್ಧ ದಾವಣಗೆರೆ ಮೂಲದ ಮಾಜಿ ಕಾರ್ಪೊರೇಟರ್ ಮಗನಾಗಿದ್ದು, ಕಂಟ್ರಾಕ್ಟರ್ ಕೂಡ ಆಗಿದ್ದ ಅನ್ನೋದು ಗೊತ್ತಾಗಿದೆ. ಸದ್ಯ ಈ ಆರೋಪಿಗಳ ನೀಚತನದ ಬಗ್ಗೆ ತನಿಖೆ ಚುರುಕಾಗಿದೆ.

ಇದನ್ನೂ ಓದಿ: ಐಪಿಎಸ್ ಅಧಿಕಾರಿಗೆ ಸೇರಿದ ವಿಲ್ಲಾದಲ್ಲೇ ಸಾಮೂಹಿಕ ಅತ್ಯಾಚಾರ: ಕಟ್ಟಡದ ಮಾಲೀಕನ ಮೇಲೆ ಕ್ರಮ ಯಾಕಿಲ್ಲ?

ಮತ್ತೊಂದು ಕಡೆ ಪ್ರೇಮಿಗಳ ದಿನಾಚರಣೆಯ ದಿನ ನಡೆದ ಪಾರ್ಟಿ ನಂತರ ನಿಖಿಲ್ ಸಂತ್ರಸ್ಥೆಯನ್ನ ಡ್ರಾಪ್ ಮಾಡಿದ್ದಾನೆ. ಈ ವೇಳೆ ನಿಖಿಲ್ ಇದೆ KA 05-NC 7299 ನೋಂದಣಿ ಫಾರ್ಚುನರ್ ಕಾರಿನಲ್ಲಿ ಯುವತಿಯನ್ನ ಹಿಡಿದುಕೊಂಡು ಅಲ್ಲು ಕಿರುಕುಳ ನೀಡಿ ಬೆದರಿಕೆ ಹಾಕಿದ್ದ.

ಕಾರು ವಶಕ್ಕೆ

ಪಾರ್ಟಿ ಬಳಿಕ ಯುವತಿಯನ್ನ ತನ್ನ ಕಾರಿನಲ್ಲಿ ಕೂರಿಸಿಕೊಂಡ ನಿಖಿಲ್, ನಡೆದ ವಿಚಾರವನ್ನ ಯಾರಿಗೂ ಹೇಳದಂತೆ ಅಸಭ್ಯವಾಗಿ ವರ್ತಿಸುತ್ತಲೇ ಯುವತಿಗೆ ಬೆದರಿಕೆ ಹಾಕಿದ್ದ ಅಂತನೂ ಯುವತಿ ಆರೋಪಿಸಿದ್ದಾಳೆ. ಸದ್ಯ ಈ ತನಿಖೆಯ ಭಾಗವಾಗಿ ಪೊಲೀಸರು ಈ ಕಾರನ್ನ ವಶಕ್ಕೆ ಪಡೆದಿದ್ದು, ಪ್ರಕರಣದಲ್ಲಿ ಮತ್ತೆ ಯಾರ ಕೈಗೆ ಕೋಳ ಬೀಳುತ್ತೋ ಕಾದು ನೋಡಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *