
ಬೆಂಗಳೂರು, ಮಾರ್ಚ್ 11: ಇವಾಗೇನಿದ್ರೂ ಆನ್ ಲೈನ್ ಜಮಾನ. ಎಲ್ಲವೂ ಆನ್ಲೈನ್ನಲ್ಲೇ ಸಿಕ್ಕಿಬಿಡುತ್ತೆ. ಊಟ ತಿಂಡಿ, ದವಸ-ಧಾನ್ಯದಿಂದ ಹಿಡಿದು ಗೃಹಪಯೋಗಿ ವಸ್ತುಗಳು ಕೂಡ ದೊರಕಿಬಿಡುತ್ತೆ. ಇದೇ ರೀತಿ ವ್ಯಕ್ತಿ ಬ್ಲಿಂಕ್ ಇಟ್ ನಲ್ಲಿ ತಿನ್ನುವುದಕ್ಕೆ ಅಂತಾ ಸ್ನ್ಯಾಕ್ಸ್ ಆರ್ಡರ್ ಮಾಡಿದ್ದರು. ಆರ್ಡರ್ ತಗೊಂಡು ಬಂದ ಡೆಲಿವರಿ ಬಾಯ್ (ಡೆಲಿವರಿ ಬಾಯ್) ಗ್ರಾಹಕನ ಮೂಗಿನ ಮೂಳೆಯನ್ನೇ ಮುರಿದ ಘಟನೆ ಕೋರಮಂಗಲ 8ನೇ ಬಾಕ್ಲ್ನಲ್ಲಿ ನಡೆದಿದೆ.
ನಡೆದಿದ್ದೇನು?
ಮಾರ್ಚ್ 7ರ ಬೆಳಗಿನ ಜಾವ 2ಗಂಟೆಯ ಸಮಯ. ಕೋರಮಂಗಲ 8ನೇ ಬ್ಲಾಕ್ ನಿವಾಸಿ ಪೌಲ್ ಎಂಬಾತ ಬ್ಲಿಂಕ್ ಇಟ್ ಆಯಪ್ ನಲ್ಲಿ ಸ್ನ್ಯಾಕ್ಸ್ ಬುಕ್ ಮಾಡಿದ್ದಾನೆ. 2 ಗಂಟೆ 8 ನಿಮಿಷಕ್ಕೆ ಬಂದ ಡೆಲಿವರಿ ಬಾಯ್ ನೇರವಾಗಿ ನಾಲ್ಕನೇ ಫ್ಲೋರ್ಗೆ ಹೋಗಿದ್ದಾನೆ. ಅಲ್ಲಿಂದ ಕರೆ ಮಾಡ್ತಿದ್ದಂತೆ ಗ್ರಾಹಕ ಎರಡನೇ ಫ್ಲೋರ್ಗೆ ಬರುವಂತೆ ಸೂಚಿಸಿದ್ದಾರೆ. ಅಲ್ಲಿ ಬಂದ ಡೆಲಿವರಿ ಬಾಯ್ ಗ್ರಾಹಕನ ಜೊತೆಗೆ ಗಲಾಟೆ ಮಾಡಿದ್ದಾನೆ.
ಇದನ್ನೂ ಓದಿ: ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕ: ಮಾಲೀಕ ಗಿರವಿಟ್ಟಿದ್ದ 13 ಲಕ್ಷ ಚಿನ್ನವನ್ನೇ ಮಾರಿದ ಭೂಪ
ಗಲಾಟೆ ವಿಕೋಪಕ್ಕೆ ತಿರುಗಿದಾಗ ಡೆಲಿವರಿ ಬಾಯ್ ಮತ್ತು ಗ್ರಾಹಕನ ನಡುವೆ ಹೊಡೆದಾಟವೇ ನಡೆದು ಹೋಗಿದ್ದು, ಡೆಲಿವರಿ ಬಾಯ್ ಕೊಟ್ಟ ಪಂಚ್ಗೆ ಗ್ರಾಹಕ ಪೌಲ್ನ ಮೂಗು ಮತ್ತು ತುಟಿಗೆ ಗಂಭೀರ ಗಾಯವಾಗಿದೆ. ಎಕ್ಸ್ ರೇ ತೆಗೆಸಿ ನೋಡಿದಾಗ ಮೂಗಿನ ಮೂಳೆಯೇ ಮುರಿದಿರುವುದು ಗೊತ್ತಾಗಿದೆ. ಚಿಕಿತ್ಸೆಗೆ ಅಂತ ಪೌಲ್ ಹುಟ್ಟೂರು ಕೇರಳಕ್ಕೆ ತೆರಳಿದ್ದಾರೆ.
ಇದನ್ನೂ ಓದಿ: ರಿಯಲ್ ಎಸ್ಟೇಟ್ ಏಜೆಂಟ್ ಅನ್ನು ಅಪಹರಿಸಿ ಹತ್ಯೆ ಪ್ರಕರಣ: ಅಪ್ರಾಪ್ತ ಸೇರಿ 8 ಆರೋಪಿಗಳ ಬಂಧನ
ಗಲಾಟೆ ಆಗಿದ್ದು ನಿಜ, ಆದರೆ ಗಲಾಟೆಗೆ ಕಾರಣ ಏನು ಅನ್ನೋದು ಇನ್ನೂ ನಿಗೂಢವಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್ಐ ದಾಖಲಿಸಿದ್ದು, ಡೆಲಿವರಿ ಬಾಯ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.