ಟ್ರಾಫಿಕ್ ಉಲ್ಲಂಘನೆ ಪೇಮೆಂಟ್ ಚಲನ್ ನೆಪದಲ್ಲಿ 5 ಲಕ್ಷ ರೂ. ವಂಚನೆ: ವಾಹನ ಚಾಲಕರೇ ಎಚ್ಚರ

ಟ್ರಾಫಿಕ್ ಉಲ್ಲಂಘನೆ ಪೇಮೆಂಟ್ ಚಲನ್ ನೆಪದಲ್ಲಿ 5 ಲಕ್ಷ ರೂ. ವಂಚನೆ: ವಾಹನ ಚಾಲಕರೇ ಎಚ್ಚರ


ಬೆಂಗಳೂರು, ಜನವರಿ 22: ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳು (ಸೈಬರ್ ವಂಚನೆ) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಿಕ್ಷಣವಂತರು ವಂಚಕರ ಜಾಲಕ್ಕೆ ಸಿಲುಕಿ ವಂಚನೆಗೆ ಒಳಗಾಗುತ್ತಿದ್ದಾರೆ. ಇದೀಗ ನಗದರಲ್ಲಿ ಅಂತಹದೊಂದು ಘಟನೆ ನಡೆದಿದೆ. ಟ್ರಾಫಿಕ್ ಚಲನ್ ಪಾವತಿ ನೆಪದಲ್ಲಿ ಸೈಬರ್ ಕದೀಮರ ಬಲೆಗೆ ಬಿದ್ದ ಮಹಿಳೆಯೊಬ್ಬರು ಬರೋಬ್ಬರಿ 5 ಲಕ್ಷ ರೂ ಕಳೆದುಕೊಂಡಿದ್ದಾರೆ. ಸದ್ಯ ಮಹಿಳೆ ಪೂರ್ವ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದು, ಎಫ್ ಐಆರ್(ಎಫ್ಐಆರ್) ದಾಖಲಿಸಿ ತನಿಖೆ.

ನಡೆದದ್ದೇನು?

ಮಹಿಳೆಯ ಮೊಬೈಲ್ ನಂಬರ್‌ಗೆ ನಿಮ್ಮ ಟ್ರಾಫಿಕ್ ದಂಡ ಪಾವತಿ ಮಾಡಿ ಎಂದು ಮೆಸೆಜ್ ಬಂದಿದೆ. ಜೊತೆಗೆ ಸೈಬರ್ ವಂಚಕರು ಲಿಂಕ್ ಕೂಡ ಕಳಿಸಿದ್ದರು. ಕೊಡಲೇ ಮಹಿಳೆ ಲಿಂಕ್ ಓಪನ್ ಮಾಡಿ ಕ್ರೆಡಿಟ್ ಕಾರ್ಡ್ ಡಿಟೇಲ್ಸ್ ಹಾಕಿದ್ದಾರೆ. ಡಿಟೇಲ್ಸ್ ತಕ್ಷಣದ ಕ್ರೆಡಿಟ್ ಕಾರ್ಡ್ ನಿಂದ 5 ಲಕ್ಷ ರೂ. ಕಡಿತಗೊಂಡ. ಆ ಮೂಲಕ ಕದೀಮರು 500ರೂ. ಪೇಮೆಂಟ್ ರಿಕ್ವೆಸ್ಟ್ ಕಳಿಸಿ 5 ಲಕ್ಷ ರೂ ದೋಚಿದ್ದಾರೆ. ಸದ್ಯ ಮಹಿಳೆ ಪೂರ್ವ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ದಾವಣಗೆರೆ ಪಾಲಿಕೆ ವಲಯ ಕಚೇರಿಯ ತಂತ್ರಾಂಶವನ್ನು ಬಿಡದ ಸೈಬರ್ ವಂಚಕರು

ದಾವಣಗೆರೆ ಮಹಾನಗರ ಪಾಲಿಕೆ ವಲಯ ಕಚೇರಿಯ ತಂತ್ರಾಂಶವನ್ನು ಸೈಬರ್ ವಂಚಕರು ಹ್ಯಾಕ್ ಅವರು ಇತ್ತೀಚೆಗೆ ನಡೆದಿದ್ದರು. ಪಾಲಿಕೆ ಇ-ಆಸ್ತಿ ತಂತ್ರಾಂಶವನ್ನೇ ಹ್ಯಾಕ್ ಮಾಡಿದೆ, ಹ್ಯಾಕರ್ಸ್ ಅಕ್ರಮವಾಗಿ ಇ-ಆಸ್ತಿಗೆ ಅನುಮೋದನೆ ನೀಡಿದ್ದರು. ದಾವಣಗೆರೆ ಮಹಾನಗರ ಪಾಲಿಕೆ ವಲಯ ಕಚೇರಿ -1 ರಲ್ಲಿ ಘಟನೆ ನಡೆದಿದ್ದು, ಕೃತ್ಯ ನಡೆದು ಆರು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬಿಎಂಟಿಸಿ ಬಸ್ 6 ರೂ. ಬದಲಿಗೆ 60 ಸಾವಿರ ರೂ ಫೋನ್ ಪೇ ಮಾಡಿದ ಪ್ರಯಾಣಿಕ, ಮುಂದೇನಾಯ್ತು ನೋಡಿ

ಆಯುಕ್ತರ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು, ಸೈಬರ್ ವಂಚಕರ ವಿರುದ್ಧ ಸೆನ್ ಪೊಲೀಸ್ ಠಾಣೆ ವಲಯ ಆಯುಕ್ತ ಕೆ ನಾಗರಾಜ್ ದೂರು ದಾಖಲಿಸಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *