Headlines

ಭಾರತೀಯರಿಗೆ ಬಾಂಗ್ಲಾದೇಶದ ವೀಸಾ ಸೇವೆ ಮತ್ತೆ ಆರಂಭ; ಪ್ರಧಾನಿ ತಾರಿಕ್ ರೆಹಮಾನ್ ನಿರ್ಧಾರ

ಭಾರತೀಯರಿಗೆ ಬಾಂಗ್ಲಾದೇಶದ ವೀಸಾ ಸೇವೆ ಮತ್ತೆ ಆರಂಭ; ಪ್ರಧಾನಿ ತಾರಿಕ್ ರೆಹಮಾನ್ ನಿರ್ಧಾರ


ಢಾಕಾ, ಫೆಬ್ರವರಿ 20: ಬಾಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿ.ಪಿ.ಪಿ) ಈ ಬಾರಿಯ ಚುನಾವಣೆಯಲ್ಲಿ ಗೆಲುವು ಕಂಡ ನಂತರ ಫೆಬ್ರವರಿ 17 ರಂದು ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ (ತಾರಿಕ್ ರೆಹಮಾನ್) ಅಧಿಕಾರ ವಹಿಸಿಕೊಂಡರು. ಅದಾದ ಮೂರೇ ದಿನದಲ್ಲಿ ಭಾರತದಲ್ಲಿನ ಬಾಂಗ್ಲಾದೇಶ ಹೈಕಮಿಷನ್‌ನಲ್ಲಿ ಭಾರತೀಯ ನಾಗರಿಕರಿಗೆ ವೀಸಾ ಸೇವೆಗಳನ್ನು ಮರು ಸ್ಥಾಪಿಸುವ ಮೂಲಕ ಭಾರತದೊಂದಿಗೆ ಸಂಬಂಧವನ್ನು ಸರಿಪಡಿಸಲು ಅವರು ಕ್ರಮ ಕೈಗೊಂಡಿದ್ದಾರೆ.

ಇಂದಿನಿಂದಲೇ ಈ ನಿರ್ಧಾರ ಜಾರಿಗೆ ಬರಲಿದೆ. ಮಹಮ್ಮದ್ ಯೂನಸ್ ಸರ್ಕಾರ 2025 ರಿಂದ ಭಾರತಕ್ಕೆ ವೀಸಾ ಸೇವೆಯನ್ನು ರದ್ದುಗೊಳಿಸಲಾಯಿತು. ಇದೀಗ ಹೊಸ ಸರ್ಕಾರ ರಚನೆಯಾದ ನಂತರ ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಸಂಬಂಧ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿವೆ. ಇಂದು ದೆಹಲಿಯ ಬಾಂಗ್ಲಾ ಹೈಕಮಿಷನ್ ನಿರ್ಬಂಧಗಳಿಲ್ಲದೆ ಭಾರತೀಯರಿಗೆ ಪ್ರವಾಸ, ವೈದ್ಯಕೀಯ, ವ್ಯವಹಾರ, ಕೆಲಸ ಮತ್ತು ಇತರ ವೀಸಾ ವರ್ಗಗಳನ್ನು ನೀಡಿತು.

ಇದನ್ನೂ ಓದಿ: ಬಾಂಗ್ಲಾದೇಶದ ಚುನಾವಣಾ ಗೆಲುವಿನ ಭಾರತದ ಬಳಿಕ ತಾರಿಕ್ ರೆಹಮಾನ್ ಮೊದಲ ಹೇಳಿಕೆಯೇನು?

ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರದ ಉಸ್ತುವಾರಿ ಮಹಮ್ಮದ್ ಯೂನಸ್ ಅವರ ಅಡಿಯಲ್ಲಿ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ವಿರೋಧಿ ಯುವ ನಾಯಕ ಷರೀಫ್ ಉಸ್ಮಾನ್ ಅವರ ಹತ್ಯೆಯ ನಂತರ ಎರಡೂ ದೇಶದ ನಡುವಿನ ಸಂಬಂಧಗಳು ಮತ್ತಷ್ಟು ಹದಗೆಟ್ಟವು. ಅವರ ಹತ್ಯೆಯ ನಂತರ ವ್ಯಾಪಕ ಪ್ರತಿಭಟನೆಗಳು ಮತ್ತು ಹಿಂದೂಗಳ ವಿರುದ್ಧ ಹಲವಾರು ಹಿಂಸಾಚಾರದ ಘಟನೆಗಳು ನಡೆದವು.

ಇದರ ನಡುವೆ ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಅವರ ಮೊದಲ ಅಧಿಕೃತ ವಿದೇಶ ಪ್ರವಾಸದ ಬಗ್ಗೆ ರಾಜತಾಂತ್ರಿಕ ವಲಯಗಳಲ್ಲಿ ಊಹಾಪೋಹಗಳು ಕೇಳಿಬರುತ್ತಿವೆ. ಈ ವಾರದ ಆರಂಭದಲ್ಲಿ, ಭಾರತೀಯ ಲೋಕಸಭಾ ಸ್ಪೀಕರ್ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿನಿಧಿಯಾಗಿ ರೆಹಮಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕಾರ

ಭಾರತಕ್ಕೆ ಪ್ರಧಾನಿ ಭೇಟಿ ನೀಡುವಂತೆ ಒಮ್ ಬಿರ್ಲಾ ಅವರು ಮೋದಿಯ ಪರವಾಗಿ ತಾರಿಕ್ ರೆಹಮಾನ್ ಅವರಿಗೆ ಆಹ್ವಾನವನ್ನು ನೀಡಿದ್ದರು. ಕಳೆದ ವರ್ಷ ಮಹಮ್ಮದ್ ಯೂನಸ್ ಅವರ ಹಿಂದಿನ ಸರ್ಕಾರದ ಸಂಪ್ರದಾಯವನ್ನು ಮುರಿದು ಮೊದಲ ಅಧಿಕೃತ ಭೇಟಿಗೆ ಚೀನಾವನ್ನು ಆಯ್ಕೆ ಮಾಡಿಕೊಂಡಿದ್ದು ಚರ್ಚೆಗೆ ಕಾರಣವಾಗಿತ್ತು. ಇದಾದ ನಂತರ ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಸಂಬಂಧ ನಾನಾ ಕಾರಣಗಳಿಂದ ಹದಗೆಟ್ಟಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *