Headlines

ಕ್ರೆಡಿಟ್ ಸ್ಕೋರ್ ಮಾತ್ರವಲ್ಲ, ನಿಮ್ಮ ಡಿಟಿಐ ಅನ್ನೂ ಪರಿಶೀಲಿಸುತ್ತವೆ ಬ್ಯಾಂಕುಗಳು; ಏನಿದು ಡಿಟಿಐ?

ಕ್ರೆಡಿಟ್ ಸ್ಕೋರ್ ಮಾತ್ರವಲ್ಲ, ನಿಮ್ಮ ಡಿಟಿಐ ಅನ್ನೂ ಪರಿಶೀಲಿಸುತ್ತವೆ ಬ್ಯಾಂಕುಗಳು; ಏನಿದು ಡಿಟಿಐ?


ಬ್ಯಾಂಕುಗಳಿಗೆ ಪ್ರಮುಖ ಆದಾಯ ಮೂಲವೇ ಸಾಲಗಳು. ಬ್ಯಾಂಕಿಗೆ ಗೃಹ ಸಾಲ, ಒಡವೆ ಸಾಲ ಇತ್ಯಾದಿ ಅಡಮಾನದ ಸಾಲಗಳು ಬಹಳ ಸೇಫ್. ಆದರೆ, ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ (ವೈಯಕ್ತಿಕ ಸಾಲ) ಬಹಳ ರಿಸ್ಕಿ ಅಸೆಟ್ ಎನಿಸುತ್ತದೆ. ಹೀಗಾಗಿ, ವೈಯಕ್ತಿಕ ಸಾಲ ನೀಡುವಾಗ ಬ್ಯಾಂಕ್ ಬಹಳ ಎಚ್ಚರಿಕೆ ವಹಿಸುತ್ತದೆ. ಗ್ರಾಹಕರು ಸಾಲದ ವರದಿಯನ್ನು ಪರಿಶೀಲಿಸುತ್ತಾರೆ. ಅದರಲ್ಲಿ ಮುಖ್ಯವಾದುದು ಗ್ರಾಹಕರು ಸ್ಕೋರ್ ಮತ್ತು ಡಿಟಿ ಸ್ಕೋರ್. ಈ ಎರಡು ಅಂಶಗಳಲ್ಲಿ ಭರವಸೆ ನೀಡುವ ಗ್ರಾಹಕರಿಗೆ ಸುಲಭ ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಇಲ್ಲದಿದ್ದರೆ, ಬ್ಯಾಂಕು ಹೆಚ್ಚಿನ ಬಡ್ಡಿದರದಲ್ಲಿ ಕಡಿಮೆ ಪ್ರಮಾಣದ ಸಾಲ ಬಿಡುಗಡೆ ಮಾಡಬಹುದು.

ಏನಿದು ಡಿಟಿಐ ಸ್ಕೋರ್?

ಡಿಟಿಐ ಎಂಬುದು ಡೆಟ್ ಟು ಇನ್ಕಮ್ ರೇಶಿಯೋ (ಡಿಟಿಐ- ಆದಾಯ ಅನುಪಾತಕ್ಕೆ ಸಾಲ). ಅಂದರೆ, ಇದು ಆದಾಯ ಮತ್ತು ಸಾಲದ ಅನುಪಾತ. ಗ್ರಾಹಕನ ಆದಾಯದಲ್ಲಿ ಸಾಲ ಎಷ್ಟಿದೆ ಅಥವಾ ಎಷ್ಟು ಬ್ಯಾಂಕ್ ಗಣನೆಗೆ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: ಪಿಎಫ್ ಅರ್ಹತೆಗೆ ವೇತನ ಮಿತಿ 15,000 ರೂನಿಂದ 25,000 ರೂಗೆ ಏರಿಸಲು ಸರ್ಕಾರದಿಂದ ಚಿಂತನೆ

ಹೆಚ್ಚಿನ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಶೇ. 40ಕ್ಕಿಂತ ಕಡಿಮೆ ಡಿಟಿಐ ಇರುವುದನ್ನು ಖಾತ್ರಿಪಡಿಸಿಕೊಳ್ಳುತ್ತವೆ. ಗ್ರಾಹಕರ ಆದಾಯ ಹೆಚ್ಚಿದೆ ಶೇ. 50 ಡಿಟಿಐ ಕೂಡ ಬ್ಯಾಂಕುಗಳಿಗೆ ಓಕೆ.

ಉದಾಹರಣೆಗೆ, ನಿಮ್ಮ ಮಾಸಿಕ ಆದಾಯ 60,000 ರೂ ಇದೆ ಎಂದಿಟ್ಟುಕೊಳ್ಳಿ. ನಿಮ್ಮ ವಿವಿಧ ಸಾಲಗಳು ಇಎಂಐ, ಕ್ರೆಡಿಟ್ ಕಾರ್ಡ್ ಬಿಲ್ ಎಲ್ಲಾ ತಿಂಗಳಿಗೆ 30,000 ರೂ ಇದ್ದಾಗ ನಿಮ್ಮ ಡಿಟಿಐ ಅನುಪಾತ 50 ಆಗುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಇದಕ್ಕಿಂತ ಹೆಚ್ಚಿನ ಸಾಲದ ಹೊರೆ ಹೊರುವುದು ಕಷ್ಟವಾಗುತ್ತದೆ. ಸಾಲದ ಹೊರೆ ಮತ್ತು ಅದನ್ನು ನಿಭಾಯಿಸುವ ಶಕ್ತಿಯನ್ನು ಸೂಚಿಸುವ ಡಿಟಿಐ ಅನುಪಾತ ಬ್ಯಾಂಕುಗಳಿಗೆ ಬಹಳ ಮುಖ್ಯವಾಗುತ್ತದೆ.

ಇದನ್ನೂ ಓದಿ: ಸದ್ಯ ಷೇರುಪೇಟೆ ಸುರಕ್ಷಿತ ಇಲ್ಲ; ಕಾದಿದೆ ವಿಪತ್ತು: ವ್ಯಾಲ್ಯುಯೇಶನ್ ಎಕ್ಸ್‌ಪರ್ಟ್ ದಾಮೋದರನ್ ಆತಂಕ

ನಿಮ್ಮ ಆದಾಯ 60,000 ರೂ ಇದೆ, ನಿಮ್ಮ ಇತರ ಸಾಲ ಬಾಧ್ಯತೆ 10,000 ರೂ ಇದ್ದಾಗ ಬ್ಯಾಂಕ್ ಡಿಟಿಐ ಅನುಪಾತ ಶೇ. 30-40 ಮೀರಿ ನಿರ್ದಿಷ್ಟ ಪ್ರಮಾಣದ ಸಾಲ ನೀಡಲು ಮುಂದಾಗಬಹುದು. ಮೇಲಿನ ನಿದರ್ಶನದಲ್ಲಿ ಶೇ. 40 ಡಿಟಿಐ ಎಂದರೆ 24,000 ರೂ ಆಗುತ್ತದೆ. ನಿಮ್ಮ ಈಗಿನ ಸಾಲ ಬಾಧ್ಯತೆ ಮಾಸಿಕ 10,000 ರೂ ಇದೆ ಎಂದಾದರೆ ಇನ್ನೂ 14,000 ರೂ ಇಎಂಐ ಕಟ್ಟುವ ಸಾಮರ್ಥ್ಯ ನಿಮಗಿದೆ ಎಂದು ಬ್ಯಾಂಕ್ ಪರಿಗಣಿಸುತ್ತದೆ. ಮಾಸಿಕ 14,000 ರೂ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *