ಬೆಂಗಳೂರು: ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಗೆ ಕನ್ನ ಹಾಕಿದ ಯುವಕ

ಬೆಂಗಳೂರು: ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಗೆ ಕನ್ನ ಹಾಕಿದ ಯುವಕ


ಬೆಂಗಳೂರು, ಫೆ.10: ದೊಡ್ಡಮ್ಮ ಕೆಲಸ ಮಾಡುತ್ತಿರುವ ಮನೆಗೆ ಯುವಕನೊಬ್ಬ ಕನ್ನ ಹಾಕಿದ್ದಾನೆ. ಈ ಬೆಂಗಳೂರಿನ ಬಸವನಗುಡಿ ಠಾಣಾ ಘಟನೆ ನಡೆದಿದೆ. ಮನೆಯಲ್ಲಿದ್ದ 241 ಗ್ರಾಂ ಚಿನ್ನಾಭರಣ, 2.8 ಕೆಜಿ ಬೆಳ್ಳಿ 1.3 ಲಕ್ಷ ನಗದು ಕಳ್ಳತನ ಮಾಡಲಾಗಿದೆ. ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಒಬ್ಬ ಮಹಿಳೆ ಕೆಲಸ ಮಾಡುತ್ತಿದ್ದರು. ಆಕೆಯ ಮೇಲೆ ಅತೀವ ನಂಬಿಕೆ ಇಟ್ಟು ಮನೆಯ ಕೀಲಿ ಕೈಯನ್ನು ಆಕೆಯ ಬಳಿಯೇ ನೀಡುತ್ತಿತ್ತು. ಈ ಮಹಿಳೆಯ ಜೊತೆಗೆ ಆಕೆಯ ತಂಗಿಯ ಮಗನೂ ಸಹ ಆಗಾಗ ಇರುತ್ತಿದ್ದನು.

ದೊಡ್ಡಮ್ಮನ ಬಳಿಯಿದ್ದ ಮನೆಯ ಕೀಲಿಯನ್ನು ಯುವಕ ಚಾಲಾಕಿತನದಿಂದ ಇದ್ದಿದ್ದಾನೆ.ಮಾಲೀಕರು ಇಲ್ಲದ ಸಮಯ ನೋಡಿ ಮನೆಯೊಳಗೆ ನುಗ್ಗಿ ಕಪಾಟಿನಲ್ಲಿದ್ದ ಬೆಲೆಬಾಳುವ ಆಭರಣ ಮತ್ತು ನಗದನ್ನು ದೋಚಿದ್ದಾನೆ. ಮನೆಯಲ್ಲಿ ಕಳ್ಳತನವಾದ ಬಗ್ಗೆ ಮನೆಯವರು ದೂರು ನೀಡಿದ್ದಾರೆ. ಒಟ್ಟು 241 ಗ್ರಾಂ ಚಿನ್ನ, 2.8 ಕೆಜಿ ಬೆಳ್ಳಿ, 1.3 ಲಕ್ಷ ನಗದು ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಐಸ್ ಕ್ರೀಮ್ ತಿಂದ್ರೆ ನೇರ ಯಮನ ಪಾದಕ್ಕೆ: ದಾಳಿಯ ವೇಳೆ ಅಧಿಕಾರಿಗಳಿಗೆ ಶಾಕ್

ಮನೆಯಲ್ಲಿ ಕಳ್ಳತನವಾದ ಬಗ್ಗೆ ದೂರು ದಾಖಲಾಗಿದ್ದರಿಂದ ತನಿಖೆ ಕೈಗೆತ್ತಿಕೊಂಡ ಬಸವನಗುಡಿ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳುವಾದ ಎಲ್ಲಾ ಚಿನ್ನ, ಬೆಳ್ಳಿ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ತುಂಬಾ ನಂಬಿಕಸ್ಥ ಕೆಲಸಗಾರರಾಗಿದ್ದರೂ, ಮನೆಯ ಕೀಲಿ ಕೈಗಳನ್ನು ಅವರು ಬಿಟ್ಟು ಹೋಗುವುದು ಸುರಕ್ಷಿತವಲ್ಲ ಎಂದು ವೈದ್ಯರ ಬಳಿ ಸಲಹೆ ನೀಡಿದ್ದಾರೆ. ಇನ್ನು ಬಸವನಗುಡಿ ಪೊಲೀಸರು ಈ ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿ ಆಭರಣಗಳನ್ನು ವಶಪಡಿಸಿಕೊಳ್ಳುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *