Headlines

ಬಾತ್‌ರೂಂ vs ವಾಶ್‌ರೂಂ: ಇವೆರಡಕ್ಕೂ ಇರುವ ವ್ಯತ್ಯಾಸ ತಿಳಿದರೆ ನೀವು ಇನ್ಮೇಲೆ ಹಾಗೆ ಹೇಳಲ್ಲ

ಬಾತ್‌ರೂಂ vs ವಾಶ್‌ರೂಂ: ಇವೆರಡಕ್ಕೂ ಇರುವ ವ್ಯತ್ಯಾಸ ತಿಳಿದರೆ ನೀವು ಇನ್ಮೇಲೆ ಹಾಗೆ ಹೇಳಲ್ಲ

ಬಾತ್‌ರೂಂ vs ವಾಶ್‌ರೂಂ: ಇವೆರಡಕ್ಕೂ ಇರುವ ವ್ಯತ್ಯಾಸ ತಿಳಿದರೆ ನೀವು ಇನ್ಮೇಲೆ ಹಾಗೆ ಹೇಳಲ್ಲ

Toilet vs Washroom meaning: ನಾವು ಪ್ರತಿದಿನ ಬಾತ್‌ರೂಂ ಅಥವಾ ವಾಶ್‌ರೂಂ ಎಂಬ ಪದ ಬಳಸುತ್ತಲೇ ಇರುತ್ತೇವೆ. ಆದರೆ ಈ ಎರಡೂ ಪದಗಳು ಒಂದೇ ಎಂದು ನೀವು ಭಾವಿಸಿದ್ದೀರಾ? ಖಂಡಿತ ಇಲ್ಲ! ಇವೆರಡರ ನಡುವೆ ಡಿಕ್ಷನರಿ ಮತ್ತು ಬಳಕೆಯ ದೃಷ್ಟಿಯಿಂದ ಸಾಕಷ್ಟು ವ್ಯತ್ಯಾಸಗಳಿವೆ.

ನಾವೆಲ್ಲರೂ ಸಾಮಾನ್ಯವಾಗಿ ಹೊರಗೆ ಹೋದಾಗ, ಕಚೇರಿಗಳಲ್ಲಿ ಅಥವಾ ದೈನಂದಿನ ಜೀವನದಲ್ಲಿ ಬಾತ್‌ರೂಂ ಅಥವಾ ವಾಶ್‌ರೂಂ ಎಂಬ ಪದಗಳನ್ನು ಒಂದೇ ಅರ್ಥದಲ್ಲಿ ಬಳಸುತ್ತೇವೆ. ಆದರೆ ಇವುಗಳ ನಡುವೆ ಸ್ಪಷ್ಟವಾದ ವ್ಯತ್ಯಾಸಗಳಿವೆ ಎಂಬುದು ನಿಮಗೆ ತಿಳಿದಿದೆಯೇ?. ಏಕೆಂದರೆ ಸಂದರ್ಭಕ್ಕೆ ತಕ್ಕಂತೆ ಸರಿಯಾದ ಪದ ಬಳಸುವುದು ಉತ್ತಮ. ಆ ವ್ಯತ್ಯಾಸಗಳು ಇಲ್ಲಿವೆ ನೋಡಿ..

ಹೆಸರೇ ಸೂಚಿಸುವಂತೆ ‘ಬಾತ್’ ಎಂದರೆ ಸ್ನಾನ. ಸ್ನಾನ ಮಾಡಲು ಬಕೆಟ್, ಶವರ್ ಅಥವಾ ಬಾತ್‌ಟಬ್ ವ್ಯವಸ್ಥೆ ಇರುವ ಕೋಣೆಯನ್ನು ಬಾತ್‌ರೂಂ ಎನ್ನಲಾಗುತ್ತದೆ. ಇದು ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿರುವ ವೈಯಕ್ತಿಕ ಕೊಠಡಿ. ಇಲ್ಲಿ ಸ್ನಾನದ ಜೊತೆಗೆ ಶೌಚಾಲಯದ (Toilet) ವ್ಯವಸ್ಥೆಯೂ ಇರಬಹುದು ಅಥವಾ ಇಲ್ಲದಿರಬಹುದು.

ಇದು ಪ್ರಮುಖವಾಗಿ ಕೈ-ಮುಖ ತೊಳೆಯಲು (Wash) ಬಳಸುವ ಜಾಗ. ಇಲ್ಲಿ ಕೇವಲ ವಾಶ್ ಬೇಸಿನ್, ಕನ್ನಡಿ ಮತ್ತು ಶೌಚಾಲಯದ ಸೀಟು ಮಾತ್ರ ಇರುತ್ತದೆ. ಇಲ್ಲಿ ಸ್ನಾನ ಮಾಡಲು ಯಾವುದೇ ವ್ಯವಸ್ಥೆ ಇರುವುದಿಲ್ಲ. ಮಾಲ್‌ಗಳು, ಕಚೇರಿಗಳು, ಚಿತ್ರಮಂದಿರಗಳು ಅಥವಾ ವಿಮಾನ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಇವುಗಳನ್ನು ಕಾಣಬಹುದು.

ಇದು ಅಮೆರಿಕನ್ ಇಂಗ್ಲಿಷ್‌ನಲ್ಲಿ ಹೆಚ್ಚಾಗಿ ಬಳಸುವ ಪದ. ಪ್ರಯಾಣದ ಸಮಯದಲ್ಲಿ ದಣಿದವರು ಸ್ವಲ್ಪ ಸಮಯ ಫ್ರೆಶ್ ಆಗಲು ಅಥವಾ ವಿಶ್ರಾಂತಿ ಪಡೆಯಲು (Rest) ಬಳಸುವ ಕೊಠಡಿ ಎಂದರ್ಥ. ಇದು ವಾಶ್‌ರೂಂಗೆ ಪರ್ಯಾಯ ಪದವಾಗಿದೆ.

ಇದು ಕೇವಲ ಮಲಮೂತ್ರ ವಿಸರ್ಜನೆಗೆ ಬಳಸುವ ಕಮೋಡ್ ಅಥವಾ ಸೀಟನ್ನು ಮಾತ್ರ ಸೂಚಿಸುತ್ತದೆ. ಬಹುತೇಕ ದೇಶಗಳಲ್ಲಿ ಕೇವಲ ಶೌಚಾಲಯದ ಸೌಲಭ್ಯವಿರುವ ಸಣ್ಣ ಕೊಠಡಿಯನ್ನು ‘ಟಾಯ್ಲೆಟ್’ ಎಂದೇ ಕರೆಯುತ್ತಾರೆ.

ಸ್ನಾನ ಮಾಡುವ ವ್ಯವಸ್ಥೆ ಇದ್ದರೆ ಮಾತ್ರ ಅದು ಬಾತ್‌ರೂಂ. ಸ್ನಾನದ ವ್ಯವಸ್ಥೆ ಇಲ್ಲದೆ ಕೇವಲ ಫ್ರೆಶ್ ಆಗಲು ಮಾತ್ರ ಇದ್ದರೆ ಅದು ವಾಶ್‌ರೂಂ. ಇನ್ನೊಮ್ಮೆ ನೀವು ಸಾರ್ವಜನಿಕ ಸ್ಥಳದಲ್ಲಿದ್ದಾಗ ಅಥವಾ ಯಾರನ್ನಾದರೂ ಕೇಳುವಾಗ ಈ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಪದ ಬಳಸಿ. ಇದರಿಂದ ನಿಮ್ಮ ಭಾಷಾ ಜ್ಞಾನವೂ ಎದ್ದು ಕಾಣುತ್ತದೆ!

Source link

Leave a Reply

Your email address will not be published. Required fields are marked *