Headlines

ಗಿಲ್ಲಿಯನ್ನು ಬಳಸಿಕೊಂಡು ಅವನಿಗೆ ಉಲ್ಟಾ ಹೊಡೆಯೋದು ತಪ್ಪು: ಕಾವ್ಯಾ ಬಗ್ಗೆ ರಿಷಾ ಖಡಕ್ ಮಾತು

ಗಿಲ್ಲಿಯನ್ನು ಬಳಸಿಕೊಂಡು ಅವನಿಗೆ ಉಲ್ಟಾ ಹೊಡೆಯೋದು ತಪ್ಪು: ಕಾವ್ಯಾ ಬಗ್ಗೆ ರಿಷಾ ಖಡಕ್ ಮಾತು


‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಿಂದ ರಿಷಾ (ರಿಶಾ) ಅವರು ಎಲಿಮಿನೇಟ್ ಆಗಿದ್ದಾರೆ. ಟಿವಿ9 ಜೊತೆ ಮಾತನಾಡಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ರಿಷಾ ಹಂಚಿಕೊಂಡಿದ್ದಾರೆ. ಕಾವ್ಯ ಮತ್ತು ಗಿಲ್ಲಿ (ಗಿಲ್ಲಿ ನಾಟಾ) ಬಗ್ಗೆ ಅವರು ಮಾತನಾಡಿದ್ದಾರೆ. ‘ಕಾವ್ಯ ಚಾಲಾಕಿ. ಅದು ಆಗಿದೆ. ಗಿಲ್ಲಿ ನನ್ನ ಜೊತೆ ಕ್ಲೋಸ್ ಆಗಬೇಕಾದರೆ ಅವನನ್ನು ಸೈಡಿಗೆ ಕರೆದುಕೊಂಡು ಹೋಗಿ ರಿಷಾ ಜೊತೆ ಯಾಕೆ ಕ್ಲೋಸ್ ಆಗುತ್ತಿದ್ದೀಯಾ ಅಂತ ಅವನಿಗೆ ಕೇಳಿದಳು. ಅದೇ ಚಾಲಾಕಿತನ. ಗಿಲ್ಲಿ ಜೊತೆ ನಾನು ಇದ್ದರೆ ಹೈಲೈಟ್ ಆಗುತ್ತೇನೆ ಎಂಬುದು ಅವಳಿಗೆ ಗೊತ್ತಿದೆ. ಗಿಲ್ಲಿಯನ್ನು ಬಿಟ್ಟು ಆಡಿದರೆ ಕಾವ್ಯ ಝೀರೋ. ಅದು ಅವಳಿಗೂ ಗೊತ್ತು. ಗಿಲ್ಲಿ ಯಾರ ಕೈ ಬಿಡುತ್ತಾನೋ ಅವರ ಆಟ ಮುಗಿಯುತ್ತೆ. ಅವನ ಲಕ್ ಕೂಡ ಚೆನ್ನಾಗಿದೆ. ಅವನಿಗೆ ಉಲ್ಟಾ ಹೊಡೆಯೋದು ತಪ್ಪು. ಕಾವ್ಯ (ಕಾವ್ಯ ಶೈವ) ಎಲ್ಲೋ ಅದನ್ನು ಮಾಡುತ್ತಿದ್ದಾಳೆ ಅಂತ ನನಗೆ ಅನಿಸಿತು. ಗಿಲ್ಲಿಯನ್ನು ಬೇರೆ ಹುಡುಗಿಯರ ಜೊತೆ ಕ್ಲೋಸ್ ಆಗಲು ಕಾವ್ಯ ಬಿಡಲಿಲ್ಲ. ಕಾವ್ಯಕ್ಕೆ ಗೆಲ್ಲುವ ಅರ್ಹತೆ ಇಲ್ಲ. ಟಾಸ್ಕ್ ನಲ್ಲೂ ಆಕೆ ಸಮರ್ಥಳಲ್ಲ’ ಎಂದು ರಿಷಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *