ಬಿಗ್ ಬಾಸ್ ಕನ್ನಡ 12 ಶೋ ಪ್ರಸಾರ ಆಗುತ್ತಿದ್ದಾಗ, ಹೊರಗಡೆ ಮಹಾನಟಿ ಶೋ ಗಗನಾ ಹೋದಲ್ಲಿ ಬಂದಲ್ಲಿ, ಗಿಲ್ಲಿ ನಟನ ಬಗ್ಗೆ ಪ್ರಶ್ನೆ ಮಾಡುತ್ತಿದ್ದರು. ಆಗ ಗಗನಾ ಏನೂ ಮಾತನಾಡಿರಲಿಲ್ಲ. ಇದರಿಂದಲೇ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ಸ್, ಟ್ರೋಲ್ ಮಾಡಲಾಗಿತ್ತು. ಈ ಬಗ್ಗೆ ಕಾವ್ಯ ಮಾತನಾಡಿದ್ದಾರೆ.

ನೀವು ಗಿಲ್ಲಿಯನ್ನು ವಿರೋಧ ಮಾಡಿದ್ರಿ, ನಾಮಿನೇಟ್ ಮಾಡಿದ್ರಿ, ಬ್ಲ್ಯಾಕ್ ಮಾಡ್ತೀನಿ ಎಂದಿರಿ. ಕಾವ್ಯ ಅವರು ಇನ್ನೊಂದು ಗಗನಾ ಆದರು ಎಂಬ ಮಾತು ಬಂತು ಎಂದು ಕಾವ್ಯ ಶೈವ ಅವರಿಗೆ ಮಾಧ್ಯಮದಿಂದ ಪ್ರಶ್ನೆ ಕೇಳಲಾಗಿತ್ತು.

“ನಾನು, ಗಿಲ್ಲಿ ಇದರ ಬಗ್ಗೆ ಮಾತನಾಡಿದ್ದೆವು, ಇದು ಪ್ರಸಾರ ಆಗಿದೆಯೋ ಆಗಿಲ್ಲವೋ ಗೊತ್ತಿಲ್ಲ. ಸ್ನೇಹ ಎನ್ನೋದು ಏನಿರತ್ತೆ, ಜನರಿಗೆ ಇಷ್ಟ ಆಗಿರುತ್ತದೆ, ಆದರೆ ಗಗನಾ ಅವಳ ಸ್ಟ್ಯಾಂಡ್ ಅವಳು ತಗೊಂಡಿದ್ದಾಳೆ” ಎಂದು ಕಾವ್ಯ ಶೈವ ಹೇಳಿದ್ದಾರೆ.

“ಗಿಲ್ಲಿ ನಟ ನನ್ನನ್ನು ರೇಗಿಸಿದಾಗ ನಾನು ಬ್ಲ್ಯಾಕ್ ಮಾಡ್ತೀನಿ ಎಂದು ಹೇಳಿದ್ದೀನಿ. ಅದನ್ನು ಯಾವ ಉದ್ದೇಶಕ್ಕೆ ಹೇಳಿದ್ದೀನಿ ಎನ್ನೋದು ನನಗೆ ಗೊತ್ತಿದೆ. ಆದರೆ ಅದನ್ನು ಸೀರಿಯಸ್ ಆಗಿ ತಗೊಂಡರೆ ನಾನು ಏನೂ ಮಾಡೋಕೆ ಆಗೋದಿಲ್ಲ” ಎಂದಿದ್ದಾರೆ.

“ನನ್ನ, ಗಿಲ್ಲಿ ನಟನ ಸ್ನೇಹ ಒಳಗಡೆ ಹೇಗಿತ್ತೋ, ಹಾಗೆ ಹೊರಗಡೆಯೂ ಇರುತ್ತದೆ. ನಾನು ಏನು ಮಾಡಿದ್ರೂ ತಪ್ಪಾಗಿ ಕಾಣಿಸುತ್ತಿದೆ. ನೆಗೆಟಿವ್ ಆಗುತ್ತದೆ ಎಂದು ನಾನು ಬದಲಾಗೋದಿಲ್ಲ, ನನ್ನ ಮನೆಯವರು ಒಳಗಡೆ ಬಂದಾಗ ಮಾತನಾಡಿದ್ದು ನೆಗೆಟಿವ್ ಆಯ್ತು, ಆದರೆ ನಾನು ಅಲ್ಲಿ ನನ್ನ ಗೇಮ್ ಬದಲಾಯಿಸಲಿಲ್ಲ” ಎಂದಿದ್ದಾರೆ.

ಗಿಲ್ಲಿ ನಟ ಅವರು ಬಿಗ್ ಬಾಸ್ ಶೋ ಗೆದ್ದ ಬಳಿಕ ಕಾವ್ಯ ಶೈವ ಅವರು ಬಡವರ ಮಕ್ಕಳು ಬೆಳಿಬೇಕಯ್ಯ, ಒಳ್ಳೆಯದಾಗಲಿ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದರು.

Source link
ಏಕಾಏಕಿ ಗಗನಾ ಯಾಕೆ ಗಿಲ್ಲಿಯನ್ನು Avoid ಮಾಡಿದಳು ಅಂತ ನಾನು, ಅವನ ಜೊತೆ ಮಾತಾಡಿದೆ: Kavya Shaiva