ಗಂಡ ಬೇಕಾದ್ರೆ ಹೋಗಲಿ, ನಾನು ವಿಡಿಯೋ ಮಾಡೋದು ನಿಲ್ಲಿಸಲ್ಲ: ರಕ್ಷಿತಾ ಶೆಟ್ಟಿ

ಗಂಡ ಬೇಕಾದ್ರೆ ಹೋಗಲಿ, ನಾನು ವಿಡಿಯೋ ಮಾಡೋದು ನಿಲ್ಲಿಸಲ್ಲ: ರಕ್ಷಿತಾ ಶೆಟ್ಟಿ


ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕ ರಕ್ಷಿತಾ ಶೆಟ್ಟಿ ಅವರು ಫೇಮಸ್ ಆದರು. ಅದರಿಂದ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಗ್ ಬಾಸ್ ಕನ್ನಡ ಸೀಸನ್ 12) ಶೋನಲ್ಲಿಡುವ ಅವಕಾಶ ಸಿಕ್ಕಿತು. ತಮ್ಮ ಗಂಡ ಹೇಗಿರಬೇಕು ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ಮದುವೆ ಆದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡೋದು ಬೇಡ ಅಂತ ಗಂಡ ಹೇಳಿದರೆ ಏನು ಮಾಡ್ತಿಯಾ ಎಂದು ರಜತ್ ಕೇಳಿದ ಪ್ರಶ್ನೆ ರಕ್ಷಿತಾ ಶೆಟ್ಟಿ (ರಕ್ಷಿತಾ ಶೆಟ್ಟಿ) ಉತ್ತರಿಸಿದ್ದಾರೆ. ‘ನನ್ನ ಹಾಗೆ ಇರುವ ಯಾರೂ ಸಿಕ್ಕಿಲ್ಲ. ನನಗೆ ಹಳ್ಳಿ ಹುಡುಗ ಬೇಕು. ತೋಟ ಇರಬೇಕು. ರೈತ ಆಗಿರಬೇಕು. ನಾನು ವಿಡಿಯೋ ಮಾಡುತ್ತಾ ಇಡೀ ದಿನ ಅಲ್ಲಿ ಕಳೆಯಬಹುದು. ಮದುವೆ ನಂತರ ನನಗೆ ಅದೇ ಜೀವನ ಬೇಕು. ಮದುವೆ ಆದ ಮೇಲೆ ವಿಡಿಯೋ ಮಾಡೋದು ಬೇಡ ಅಂದರೆ ಅವರು ಇದ್ದರೆ ಇರ್ತಾರೆ, ಹೋದರೆ ಹೋಗ್ತಾರೆ’ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *