Headlines

ಕಿಚ್ಚನ ತಿವಿತವೊ, ಗಿಲ್ಲಿಯ ಗೆಲುವೊ? 'ಹೇಳೋದೆಲ್ಲಾ ಸುಳ್ಳು' ಎಂದು ಕೊನೆಗೂ ಒಪ್ಪಿಕೊಂಡ ಡಾಗ್​ ಸತೀಶ್!

ಕಿಚ್ಚನ ತಿವಿತವೊ, ಗಿಲ್ಲಿಯ ಗೆಲುವೊ?  'ಹೇಳೋದೆಲ್ಲಾ ಸುಳ್ಳು' ಎಂದು ಕೊನೆಗೂ ಒಪ್ಪಿಕೊಂಡ ಡಾಗ್​ ಸತೀಶ್!

ಕಿಚ್ಚನ ತಿವಿತವೊ, ಗಿಲ್ಲಿಯ ಗೆಲುವೊ?  'ಹೇಳೋದೆಲ್ಲಾ ಸುಳ್ಳು' ಎಂದು ಕೊನೆಗೂ ಒಪ್ಪಿಕೊಂಡ ಡಾಗ್​ ಸತೀಶ್!

ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಅನುಬಂಧ ವೇದಿಕೆಯಲ್ಲಿ ತಮ್ಮ ದುಬಾರಿ ಉಡುಪು ಮತ್ತು ವೈಯಕ್ತಿಕ ಜೀವನದ ಬಗ್ಗೆ ಎಂದಿನಂತೆ ಬಡಾಯಿ ಕೊಚ್ಚಿಕೊಂಡಿದ್ದಾರೆ. ಆದರೆ, ಅಂತಿಮವಾಗಿ ವೇದಿಕೆಯಲ್ಲೇ ತಾನು ಹೇಳುವುದೆಲ್ಲಾ ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ.

ಬಿಗ್​ಬಾಸ್​ನಿಂದ ಖ್ಯಾತಿ ಪಡೆದಿರುವ ಡಾಗ್​ ಸತೀಶ್, ಬಾಯಿ ಬಿಟ್ಟರೆ ಕೋಟಿಯಲ್ಲಿ ಮಾತನಾಡುವವರು. ಇವರೊಬ್ಬ ಪುಂಗಿದಾಸ ಎಂದು ಹೇಳಿಕೊಂಡೇ ಅದೆಷ್ಟೋ ಯುಟ್ಯೂಬ್​ ಚಾನೆಲ್​ನವರು ಇವರನ್ನು ಕರೆಸಿ ಟಿಆರ್​ಪಿ ಏರಿಸಿಕೊಂಡರು. ಗೊತ್ತೇ ಇರಲ್ಲ, ಹೆಸರೇ ಇಲ್ಲದ ಕೆಲವು ಇನ್​ಸ್ಟಾಗ್ರಾಮ್​ನಲ್ಲಿಯೂ ಇವರ ಹವಾ ಜೋರಾಗಿಯೇ ನಡೆದಿತ್ತು.

ಬಿಗ್​ಬಾಸ್​ ಅನ್ನು ರಾತ್ರೋರಾತ್ರಿ ಇಂಟರ್​ನ್ಯಾಷನಲ್​ ಲೆವೆಲ್​ಗೆ ಕರೆದುಕೊಂಡು ಹೋಗಬಲ್ಲೆ ಎಂದೆಲ್ಲಾ ಹೇಳುತ್ತಿದ್ದ ಡಾಗ್​ ಸತೀಶ್​ ಅವರ ಮರ್ಯಾದೆಯನ್ನು ಬಿಗ್​ಬಾಸ್​ ಫಿನಾಲೆಯಲ್ಲಿ ಸಂಪೂರ್ಣವಾಗಿ ತೆಗೆದಿದ್ದರು ಕಿಚ್ಚ ಸುದೀಪ್​. ಡಾಗ್​ ಸತೀಶ್​ ಅವರನ್ನು ಮಾತಿನಲ್ಲಿಯೇ ಕಟ್ಟಿ ಹಾಕಿ, ನೀವು ಕುಡಿದು ಬಂದಿದ್ದೀರೋ, ನಾನು ಕುಡಿದಿದ್ದೇನೋ ಗೊತ್ತಾಗ್ತಿಲ್ಲ ಎಂದು ಹೇಳುವ ಮೂಲಕ ಎಲ್ಲರ ಎದುರೇ ಡಾಗ್​ ಸತೀಶ್​ ಬಾಯಿ ಮುಚ್ಚಿಸಿದ್ದರು.

ಇದೀಗ ಕಲರ್ಸ್​ ಕನ್ನಡದ ಅನುಬಂಧ ವೇದಿಕೆಯಲ್ಲಿ ಭರ್ಜರಿ ಚಿನ್ನಾಭರಣ ತೊಟ್ಟು ಬಂದಿರೋ ಡಾಗ್​ ಸತೀಶ್​ ಅಲ್ಲಿಯೂ ತಮ್ಮ ಷರ್ಟ್​ ಎರಡು ಲಕ್ಷ, ಪ್ಯಾಂಟ್​ 10 ಲಕ್ಷ ಎನ್ನುತ್ತಲೇ ಅದರ ಟ್ಯಾಗ್​ ಕೂಡ ತೋರಿಸಿದ್ದಾರೆ.

ಕೊನೆಗೆ ಕಾಲೇಜು ದಿನಗಳಲ್ಲಿ ಎಂಟು ಮಂದಿ ಹುಡುಗಿಯರನ್ನು ಇಟ್ಟುಕೊಂಡೇ ತಿರುಗುತ್ತಿದ್ದೆ ಎಂದಿದ್ದಾರೆ. ಅಷ್ಟಕ್ಕೂ ತಮ್ಮ ಹಿಂದೆ ಈಗಲೂ ಹುಡುಗಿಯರು ಬೀಳ್ತಾರೆ, ಹೀರೋಯಿನ್​ಗಳು ಕರೀತಾರೆ. ಪ್ರಧಾನಿಗೂ ನೀಡದ ವ್ಯವಸ್ಥೆ ನನಗೆ ನೀಡ್ತಾರೆ, ನನ್ನ ಒಂದೇಒಂದು ನೋಟಕ್ಕೆ ಇಂಟರ್​ನ್ಯಾಷನಲ್​ ಫಿಗರ್​ಗಳೂ ಬೀಳ್ತಾರೆ ಎಂದೆಲ್ಲಾ ಇಂದಿಗೂ ಹೇಳುತ್ತಲೇ ಬಂದಿದ್ದಾರೆ.

ಗಿಲ್ಲಿ ನಟ ಬಿಗ್​ಬಾಸ್​ ವಿನ್​ ಆಗುವುದೇ ಇಲ್ಲ. ಒಂದು ವೇಳೆ ವಿನ್​ ಆದರೆ ಅವನ ಕಾಲ ಕೆಳಗೆ ನುಸುಳುತ್ತೇನೆ ಎಂದಿದ್ದರು ಡಾಗ್​ ಸತೀಶ್​. ಆದರೆ ಈ ಬಗ್ಗೆ ಸದ್ಯ ಗಪ್​ಚುಪ್​ ಆಗಿದ್ದಾರೆ.

ಇದೀಗ ಅನುಬಂಧ ವೇದಿಕೆಯ ಮೇಲೆ ಕೊನೆಗೂ ನಾನು ಹೇಳ್ತಿರೋದೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಇದನ್ನು ಕೇಳಿ ಅಲ್ಲಿಗೆ ಆಗಮಿಸಿದ್ದ ನಟ ರವಿಚಂದ್ರನ್​ ಕೂಡ ನಕ್ಕಿದ್ದಾರೆ. ಇಷ್ಟು ಪ್ರೊಮೋ ಬಿಡುಗಡೆಯಾಗುತ್ತಲೇ ಟ್ರೋಲ್​ಗಳ ಸುರಿಮಳೆಯಾಗುತ್ತಿದೆ. ಕೊನೆಗೂ ಸತ್ಯ ಒಪ್ಪಿಕೊಂಡ ಪುಂಗಿದಾಸ ಎಂದೆಲ್ಲಾ ನೆಟ್ಟಿಗರು ಹೇಳುತ್ತಿದ್ದಾರೆ. ಮತ್ತೆ ಕೆಲವರು ​ಗಿಲ್ಲಿಯ ಕಾಲ ಕೆಳಗೆ ನುಸುಳು ಎನ್ನುತ್ತಿದ್ದರೆ, ಮತ್ತೆ ಕೆಲವರು ಕಿಚ್ಚನ ಕ್ಲಾಸ್​ ಸರಿಯಾಗಿ ಏಟು ನೀಡಿದೆ ಎನ್ನುತ್ತಿದ್ದಾರೆ.

Source link

Leave a Reply

Your email address will not be published. Required fields are marked *