ಮಾಜಿ ಸ್ಪರ್ಧಿಗಳು ಬಂದಿದ್ದೇಕೆ? ಬಾಯ್ತಪ್ಪಿ ನಿಜ ಹೇಳಿದ ಚೈತ್ರಾ

ಮಾಜಿ ಸ್ಪರ್ಧಿಗಳು ಬಂದಿದ್ದೇಕೆ? ಬಾಯ್ತಪ್ಪಿ ನಿಜ ಹೇಳಿದ ಚೈತ್ರಾ


‘ಬಿಗ್ ಬಾಸ್ ಕನ್ನಡ ಸೀಸನ 11’ರ ಸ್ಪರ್ಧಿಗಳು ಈ ಸೀಸನ್‌ಗೆ ಅತಿಥಿಗಳಾಗಿ ಬಂದಿದ್ದಾರೆ. ಇಡೀ ಬಿಗ್ ಬಾಸ್ ಮನೆ ಪ್ಯಾಲೇಸ್ ಆಗಿ ಬದಲಾಗಿದ್ದು, ಅತಿಥಿಗಳ ಅಬ್ಬರ ಜೋರಾಗಿದೆ. ಅವರು ಮನಸ್ಸಿಗೆ ಬಂದ ಕೆಲಸಗಳನ್ನು ಸ್ಪರ್ಧಿಗಳಿಂದ ಮಾಡಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಚೈತ್ರಾ ಅವರು ಆಡಿದ ಒಂದು ಮಾತು ಚರ್ಚೆ ಹುಟ್ಟುಹಾಕಿದೆ. ಅವರು ದೊಡ್ಮನೆಗೆ ಬಂದಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಈ ಬಾರಿ ಬಿಗ್ ಬಾಸ್ ಗೆ ಚೈತ್ರಾ, ಮಂಜು, ರಜತ್, ಮೋಕ್ಷಿತಾ, ತ್ರಿವಿಕ್ರಂ ಅತಿಥಿಗಳಾಗಿ ಬಂದಿದ್ದಾರೆ. ಅವರುಗಳು ಇಡೀ ಮನೆಯನ್ನು ಆಳುತ್ತಿದ್ದಾರೆ. ಕಿರಿಕಿರಿ ಮಾಡಿದ ಗಿಲ್ಲಿಗೆ ತಿರುಗಿ ಬಿದ್ದಿದ್ದಾರೆ.ಅಶ್ವಿನಿ ಅವರು ತಪ್ಪಾಗಿ ಚೈತ್ರಾ ಮಾತನಾಡಿದ್ದಾರೆ. ಈ ವೇಳೆ ಅವರು ಒಂದು ವಿಷಯ ರಿವೀಲ್ ಮಾಡಿಬಿಟ್ಟಿದ್ದಾರೆ.

‘ನಿಮ್ಮಲ್ಲಿ ಒಗ್ಗಟ್ಟಿಲ್ಲ. ನಿಮ್ಮಲ್ಲಿ ಎಷ್ಟು ಒಗ್ಗಟು ಇದೆ ಎಂದು ನೋಡಬೇಕು. ಅದನ್ನು ಪರೀಕ್ಷೆ ಮಾಡೋಕೆ ನಾವು ಬಂದಿರೋದು’ ಎಂದು ಚೈತ್ರಾ ಕುಂದಾಪುರ ಅವರು ಹೇಳಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸ್ಪರ್ಧಿಗಳು ಇಷ್ಟು ಕಠಿಣವಾಗಿ ನಡೆದುಕೊಳ್ಳಲು ಬಿಗ್ ಬಾಸ್ ಸೂಚನೆ ಕೂಡ ಇರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಅತಿಥಿಗಳು ನಡೆದುಕೊಂಡ ರೀತಿಗೆ ಒಂದಾದ ಗಿಲ್ಲಿ-ಅಶ್ವಿನಿ; ಮೂಡಿತು ಗೆಳತನ

ಬಿಗ್ ಬಾಸ್ ಸೀಸನ್ 10 ರಲ್ಲಿ ಪ್ರಥಮ್ ಅವರಿಗೆ ಲಾರ್ಡ್ ಆಗಿ ದೊಡ್ಮನೆಗೆ ಕರೆಸಲಾಯಿತು. ಈ ವೇಳೆ ಅವರು ತಮಗೆ ಬೇಕಾದಂತೆ ಸ್ಪರ್ಧಿಗಳನ್ನು ನಡೆಸಿದ್ದರು.ಇದನ್ನು ವಿರೋಧಿಸಬೇಕಿತ್ತು ಎಂಬರ್ಥದಲ್ಲಿ ಸುದೀಪ್ ಮಾತನಾಡಿದ್ದರು. ಈ ಬಾರಿ ಬಂದ ಅತಿಥಿಗಳು ಮನೆಯವರಿಗೆ ತಮಗೆ ಬೇಕಾದ ರೀತಿ ನಡೆಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ವೀಕಂಡ್‌ನಲ್ಲಿ ಚರ್ಚೆ ಆಗೋ ಸಾಧ್ಯತೆ ಇದೆ. ಅತಿಥಿಗಳ ಉದ್ದಟತನವನ್ನು ಗಿಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀಪ್ ಮೆಚ್ಚುಗೆ ಸೂಚಿಸಬಹುದು. ಅವರು ಎಲ್ಲೆ ಮೀರಿ ನಡೆದುಕೊಂಡಿದ್ದಕ್ಕೆ ಪ್ರಶ್ನೆ ಮಾಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *