ಹಸಿರು ಗಾಜಿನ ಬಳೆ ತೊಟ್ಟು ಸಂಭ್ರಮಿಸಿದ ಕಾವೂ, ಕೊಟ್ಟಿದ್ದು ಯಾರು ಅಂತಾ ಗೊತ್ತಾಯ್ತು ಅಂದ ಗಿಲ್ಲಿ ಫ್ಯಾನ್ಸ್‌!

ಹಸಿರು ಗಾಜಿನ ಬಳೆ ತೊಟ್ಟು ಸಂಭ್ರಮಿಸಿದ ಕಾವೂ, ಕೊಟ್ಟಿದ್ದು ಯಾರು ಅಂತಾ ಗೊತ್ತಾಯ್ತು ಅಂದ ಗಿಲ್ಲಿ ಫ್ಯಾನ್ಸ್‌!

ಹಸಿರು ಗಾಜಿನ ಬಳೆ ತೊಟ್ಟು ಸಂಭ್ರಮಿಸಿದ ಕಾವೂ, ಕೊಟ್ಟಿದ್ದು ಯಾರು ಅಂತಾ ಗೊತ್ತಾಯ್ತು ಅಂದ ಗಿಲ್ಲಿ ಫ್ಯಾನ್ಸ್‌!
ಬಿಗ್‌ಬಾಸ್‌ 12ನೇ ಸೀಸನ್‌ನ ಫೈನಲಿಸ್ಟ್ ಕಾವ್ಯಾ, ಬಿಡುವಿನ ಸಮಯದಲ್ಲಿ ತಮ್ಮ ಅಜ್ಜಿ ಮನೆಗೆ ಭೇಟಿ ನೀಡಿ ಪ್ರಕೃತಿಯ ಸೌಂದರ್ಯವನ್ನು ಆನಂದಿಸಿದ್ದಾರೆ. ಈ ವೇಳೆ ಅವರು ಹಸಿರು ಬಳೆ ತೊಟ್ಟ ಫೋಟೋ ಹಂಚಿಕೊಂಡಿದ್ದು, ಇದು ಗಿಲ್ಲಿ ಕೊಟ್ಟಿದ್ದಾ ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ.
ಬಿಗ್‌ಬಾಸ್‌ 12ನೇ ಸೀಸನ್‌ ಮುಗಿದು ಒಂದು ತಿಂಗಳ ಮೇಲಾಗಿದೆ. ಆದರೂ ಕೊನೇ 6 ಫೈನಲಿಸ್ಟ್‌ ಲಿಸ್ಟ್‌ನಲ್ಲಿದ್ದ ಕಾವ್ಯಾ ಹಾಗೂ ಗಿಲ್ಲಿ ಕ್ರೇಜ್‌ ಮಾತ್ರ ಕಡಿಮೆಯಾಗಿಲ್ಲ.

ಸಾಲು ಸಾಲು ಪ್ರೋಗ್ರಾಮ್‌ಗಳಲ್ಲಿ ಇವರಿಬ್ಬರೂ ಭಾಗಿಯಾಗಿದ್ದಾರೆ. ಗಿಲ್ಲಿ ಹಾಗೂ ಕಾವ್ಯಾ ಕೆಲವೊಂದು ವೇದಿಕೆಯಲ್ಲಿ ಜೊತೆಯಾಗಿಯೂ ಕಾಣಿಸಿಕೊಂಡಿದ್ದಾರೆ.

ಹೀಗಿರುವಾಗ ಕಾವ್ಯಾ ಸ್ವಲ್ಪ ಫ್ರೀ ಆದಂತೆ ಕಂಡಿದ್ದಾರೆ. ಅದಕ್ಕಾಗಿ ಸೀದಾ ಅವರು ತಮ್ಮ ಅಜ್ಜಿಯ ಮನೆಗೆ ಭೇಟಿ ನೀಡಿದ್ದಾರೆ.

ಅಜ್ಜಿಯ ಮನೆಗೆ ಭೇಟಿ ನೀಡಿ, ತೋಟಕ್ಕೆ ಹೊಕ್ಕು ಅಡಿಕೆ, ತೆಂಗಿನ ತೋಟವನ್ನು ನೋಡಿ ಸಂಭ್ರಮಿಸಿದ್ದಾರೆ. ಎಳೆನೀರನ್ನು ಕುಡಿದು ಪ್ರಕೃತಿಯನ್ನು ಸವಿದಿದ್ದಾರೆ.

ಇದರ ನಡುವೆ ಹಸಿರು ಗಾಜಿನ ಬಳೆಯನ್ನು ತೊಟ್ಟು ಕಾವ್ಯಾ ಮಿಂಚಿದ್ದು, ಇದರ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

ಕಾಮೆಂಟ್ಸ್‌ನಲ್ಲಿ ಹೆಚ್ಚಿನವರು ಈ ಹಸಿರು ಬಳೆ ಕೊಟ್ಟಿದ್ದು ಗಿಲ್ಲಿನಾ? ಎಂದು ಅವರ ಕಾಲೆಳೆದಿದ್ದಾರೆ.

ಅಜ್ಜಿಯ ಮನೆಯ ಫೋಟೋಗಳನ್ನು ಹಂಚಿಕೊಂಡು ಅದಕ್ಕೆ ನೆಮ್ಮದಿ ಅನ್ನೋ ಶೀರ್ಷಿಕೆಯನ್ನು ಕಾವ್ಯಾ ಕೊಟ್ಟಿದ್ದಾರೆ.

ಅಜ್ಜಿಯ ಮನೆಯ ಬಾಗಲಿಲ್ಲಿ ನಿಂತ ಫೋಟೋ ತೆಗೆದುಕೊಂಡು ಕಾವ್ಯಾ ಸಂಭ್ರಮಿಸಿದ್ದಾರೆ.

Source link

Leave a Reply

Your email address will not be published. Required fields are marked *