
ಬೆಂಗಳೂರು, ಏಪ್ರಿಲ್ 03: ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ನಗರದ ಹೆಬ್ಬಾಳದಲ್ಲಿ ಎರಡು ಲೂಪ್‌ಗಳನ್ನು ಅಳವಡಿಸಿರುವ ಕಾರಣಕ್ಕೆ ಇತ್ತೀಚೆಗೆ ಟ್ರಾಫಿಕ್ ಕೊಂಚ ಸುಧಾರಿಸಿದೆ. ಆದರೆ ಅಲ್ಲಿನ ಟ್ರಾಫಿಕ್ ಈಗ ಮೇಖ್ರಿ ಸರ್ಕಲ್‌ಗೆ ಶಿಫ್ಟ್ ಆಗಿದ್ದು, ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಹೀಗಾಗಿ ಬಳ್ಳಾರಿ ರಸ್ತೆಯ ವೆಟರ್ನರಿ ಕಾಲೇಜು ಬಳಿಯಿಂದ ಮೇಖ್ರಿ ಸರ್ಕಲ್ ವರೆಗೆ ಹೊಸ ಫ್ಲೈಓವರ್ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿದ್ದು, ಸೂಕ್ತ ಟೆಂಡರ್ ಕೂಡ ಆಹ್ವಾನಿಸಿದೆ.
ಬರೋಬ್ಬರಿ 420 ಕೋಟಿ ರೂಪಾಯಿ ವೆಚ್ಚದಲ್ಲಿ 4 ಪಥದ ರೋಟರಿ ಎಲಿವೇಟೆಡ್ ಕಾರಿಡಾರ್ ನಿಮಾರ್ಣಕ್ಕೆ ಟೆಂಡರ್ ಆಹ್ವಾನಿಸಲಾಗಿದೆ, ಈ ಫ್ಲೈಓವರ್ ಸಂಚಾರ ದಟ್ಟಣೆ ವಿಚಾರದಲ್ಲಿ ಗಮನಾರ್ಹ ಸುಧಾರಣೆ ತರುವ ವಿಶ್ವಾಸವನ್ನು ಜಿಬಿಎ ಹೊಂದಿದೆ. ಈ ಸರ್ಕಲ್‌ನಲ್ಲಿ ರೋಟರಿ ಮಾದರಿಯ ವಿನ್ಯಾಸವಿರಲಿದೆ, ಜಯಮಹಲ್ ರಸ್ತೆ ಹಾಗೂ ಯಶವಂತಪುರ ಕಡೆಗೆ ಲೂಪ್ ಮಾಡಲಾಗಿದೆ. ಸುಮಾರು 1.6 ಕಿಲೋ ಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್ ಇದಾಗಿರಲಿದೆ. ಇನ್ನು ಯೋಜನೆಯನ್ನು ತ್ವರಿತವಾಗಿ ಪ್ರಾರಂಭಿಸಲು ಬಿಡಿಎ ಮಾರ್ಚ್ 26 ರಂದು ಹೊಸ ಟೆಂಡರ್ ಆಹ್ವಾನಿಸಲಾಗಿದೆ. ಕಳೆದ ನಾಲ್ಕು ತಿಂಗಳಿನಲ್ಲಿ ಇದು ಎರಡನೇ ಬಾರಿಕರೆದ ಟೆಂಡರ್ ಆಗಿದ್ದು, 2025ರ ಡಿಸೆಂಬರ್‌ನಲ್ಲಿ ಫ್ಲೈವರ್ ಮತ್ತು ಶಾರ್ಟ್ ಟನಲ್ ಯೋಜನೆಗೆ ಸಂಯುಕ್ತ ಪ್ರಸ್ತಾವನೆಯನ್ನು ನೀಡಲಾಯಿತು.
ಇದನ್ನೂ ಓದಿ: ಬೆಂಗಳೂರಿಗರಿಗೆ ಬ್ಯಾಡ್ ನ್ಯೂಸ್; ಸದ್ಯ ಸಾರ್ವಜನಿಕ ಸೇವೆಗೆ ಲಭ್ಯವಿಲ್ಲ ಬಹುನಿರೀಕ್ಷಿತ ಈ ಫ್ಲೈಓವರ್
ಫ್ಲೈವರ್‌ನಲ್ಲಿ ಎರಡು ಪ್ರಮುಖ ಡೌನ್‌ರ್ಯಾಂಪ್‌ಗಳು ಇರುತ್ತವೆ, ಬಿಡಿಎ ಅಧಿಕಾರಿಗಳ ಪ್ರಕಾರ ಈ ಫ್ಲೋವರ್ ವಿನ್ಯಾಸ ಭವಿಷ್ಯದ ಈ ವೆಸ್ಟ್ ಎಲಿವೇಟೆಡ್ ಕಾರಿಡಾರ್‌ಗೆ ಹೊಂದಿಕೆಯಾಗುವಂತೆ ರೂಪಿಸಿ. ಇದರಿಂದ ನಗರದಾದ್ಯಂತ ಸಾರಿಗೆ ಯೋಜನೆಗೆ ಅಭಿವೃದ್ಧಿ ಸಾಧ್ಯವಾಗಲಿದೆ. ಜೊತೆಗೆ 18 ತಿಂಗಳ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲು, ಈ ಯೋಜನೆ ವಿಶೇಷವೆಂದರೆ ಖಾಸಗಿ ಭೂಸ್ವಾಧೀನದ ಅಗತ್ಯವಿಲ್ಲ. ಆದರೆ ಏರ್ ಫೋರ್ಸ್ ಟ್ರೈನಿಂಗ್ ಕಮಾಂಡ್ ಹಾಗೂ ಪ್ಯಾರಾಚೂಟ್ ರೆಜಿಮೆಂಟ್ ಸೇರಿದಂತೆ ಪ್ರಮುಖ ರಕ್ಷಣಾ ಸಂಸ್ಥೆಗಳಿಂದ ಅನುಮತಿ ಪಡೆಯಲಾಗಿದೆ, ಅದನ್ನು ಸ್ವೀಕರಿಸಲಾಗಿದೆ.
ವರದಿ: ಲಕ್ಷ್ಮೀನರಸಿಂಹ, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.