Headlines

ನನ್ನ ದೇಹವನ್ನು ನೀನು ಛೇದಿಸಿ ಪಾಠ ಮಾಡಬೇಕು: ಶತಾಯುಷಿ ತಾಯಿಯ ಆಸೆ ಈಡೇರಿಸಿದ ಪುತ್ರ!

ನನ್ನ ದೇಹವನ್ನು ನೀನು ಛೇದಿಸಿ ಪಾಠ ಮಾಡಬೇಕು: ಶತಾಯುಷಿ ತಾಯಿಯ ಆಸೆ ಈಡೇರಿಸಿದ ಪುತ್ರ!


ನನ್ನ ದೇಹವನ್ನು ನೀನು ಛೇದಿಸಿ ಪಾಠ ಮಾಡಬೇಕು: ಶತಾಯುಷಿ ತಾಯಿಯ ಉದ್ದೇಶಿಸಿದ ಪುತ್ರ!

ಬೆಳಗಾವಿ, ಮಾರ್ಚ್ 11: ದಾನಗಳಲ್ಲಿ ಅನ್ನದಾನ, ನೇತ್ರದಾನ ಹಾಗೂ ದೇಹದಾನ ಶ್ರೇಷ್ಠ. ಇಂತಹ ಶ್ರೇಷ್ಠ ದಾನಗಳ 101 ವರ್ಷದ ತಾಯಿ ದೇಹದಾನ (ದೇಹ ದಾನ) ಮಾಡಿರುವುದು ಗಮನ ಸೆಳೆಯುತ್ತಿದೆ. ತಂದೆಯಂತೆ ತಾಯಿ ತನ್ನನೇ ದೇಹವನ್ನ ಛೇದಿಸಬೇಕೆಂದು ಬರೆದು ಸಾವನ್ನಪ್ಪಿದ್ದರೆ, ತಾಯಿ ಕೊನೆ ಆಸೆಯಂತೆ ವೈದ್ಯ ಪುತ್ರ ದೇಹ ಛೇದಿಸಲು ಸಿದ್ಧ ಮಗ. ಅಜ್ಜಿಯ ಮಾದರಿಯ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣ ಸಮಾಜಕ್ಕೆ ಮಾದರಿಯಾಗಿರುವುದು, ಶತಾಯುಷಿ ಅಜ್ಜಿಯ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಇದು ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ವೈದ್ಯ ಕುಟುಂಬದ ಕಥೆ. ಏಕೆಂದರೆ ಹೆತ್ತಮಕ್ಕಳಿಗೆ ತಂದೆ-ತಾಯಿ ಆಸ್ತಿ ಅಂತಸ್ತನ್ನ ವಿಲ್ ಆಗಿ ಬರೆದಿದ್ದಾರೆ. ಇಲ್ಲೊಬ್ಬರು ಮಹಾತಾಯಿ ತನ್ನ ಪುತ್ರನಿಂದಲೇ ದೇಹ ಛೇದಿಸಬೇಕೆಂದು ವಿಲ್ ಬರೆದಿಟ್ಟು ದೇಹದಾನ ಮಾಡಿದ್ದಾರೆ.

ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ: ಬಿಜೆಪಿ ಶಾಸಕ ಸುರೇಶ್ ಕುಮಾರ್ ತಾಯಿಯ ದೇಹದಾನ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ಶತಾಯಿಷಿ ಸುಶೀಲಾದೇವಿ ರಾಮಣ್ಣವರ್. ಈ ಮಹಾ ತಾಯಿಯ ವಯಸ್ಸು 101 ವರ್ಷ. ತಮ್ಮ ನಿಧನದ ಬಳಿಕ ದೇಹವನ್ನ ದಾನ ಮಾಡಿದರು. ಅದು ಬೆಳಗಾವಿ ನಗರದಲ್ಲಿರುವ ಕೆಎಲ್‌ಐ ಕಂಕಣವಾಡಿ ಆಯುರ್ವೇದ ಕಾಲೇಜಿಗೆ ದೇಹದಾನವನ್ನು ಮಾಡಿದೆ. ಅದರಂತೆ ಅವರ ನಿಧನದ ಬಳಿಕ ಶತಾಯುಷಿ ಸುಶೀಲಾದೇವಿ ದೇಹವನ್ನ ಆಸ್ಪತ್ರೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನ ನೀಡಿದ್ದಾರೆ. ಆಸ್ಪತ್ರೆಗೆ ದೇಹದಾನ ಮಾಡುವುದಕ್ಕೂ ಮುನ್ನ ಕೆಲ ಧಾರ್ಮಿಕ ವಿಧಿಗಳ ಪ್ರಕಾರ ಪೂಜೆ ಸಲ್ಲಿಸಿ, ಗೌರವವನ್ನು ಅರ್ಪಿಸಲಾಗಿದೆ.

ಈ ಹಿಂದೆ ಇದೇ ಆಸ್ಪತ್ರೆಗೆ ಡಾ.ಮಹಾಂತೇಶ ರಾಮಣ್ಣನವರ ತಂದೆ ಸಹ ದೇಹದಾನ ಮಾಡಿದರು. ತಂದೆ ದೇಹವನ್ನು ಸಹ ಪುತ್ರ ಮಹಾಂತೇಶ ರಾಮಣ್ಣನವರ ಛೇದಿಸಿದ್ದರು. ಈಗ ತಾಯಿ ಇಚ್ಛೆಯಂತೆ ಅವರ ದೇಹವನ್ನ ಮಗ ಛೇದಿಸಿ ಪಾಠ ಮಾಡಲಿದ್ದಾರೆ. ಇಷ್ಟೇ ಜೊತೆಗೆ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ದೇಹಗಳ ಕೊರತೆ ಇರೋದನ್ನ ಮನಗೊಂಡು ಇಡೀ ಕುಟುಂಬ ದೇಹದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಲೇ ಬಂದಿದ್ದಾರೆ. ಇದರ ಪರಿಣಾಮವಾಗಿ ಕಂಕಣವಾಡಿ ಆಸ್ಪತ್ರೆಗೆ ಒಂದು ಸಾವಿರ ಜನರು ದೇಹವನ್ನು ದಾನ ಮಾಡಿದ್ದಾರೆ. ಇನ್ನೂ 5 ಸಾವಿರ ಜನರು ದೇಹದಾನ ಮಾಡುವ ವಾಗ್ದಾನ ಮಾಡಲಾಗಿದೆ.

ಇದನ್ನೂ ಓದಿ: ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿಗೆ ಬಲಿ ಆಯ್ತು ಜೀವ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ

ರಾಮಣ್ಣನವರ ಕುಟುಂಬವು ಸಮಾಜಕ್ಕೆ ಆಯುರ್ವೇದಿಕ ವೈದ್ಯಕೀಯ ಚಿಕಿತ್ಸೆ ಜೊತೆಗೆ ದೇಹದಾನದಂತಹ ಸಮಾಜ ಮುಖಿಯಲ್ಲಿ ತೊಡಗಿಸಿಕೊಂಡಿದ್ದು ಸಮಾಜಕ್ಕೆ ಮಾದರಿಯಾಗಿದೆ. ಇದಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಕೆಲಸಕ್ಕೆ ಸಾರ್ವಜನಿಕರು ಕೂಡ ಮುಂದಾಗಬೇಕು ಅಂತಾ ಕರೆ ಕೂಡ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ತಂದೆಯಂತೆ ತಾಯಿ ಕೂಡ ಪುತ್ರನ ಕೈಯಿಂದಲೇ ದೇಹ ಛೇದಿಸಲು ವಿಲ್ ಬರೆದು ಗಮನ ಸೆಳೆದಿದ್ದಾರೆ. ಇದೆ ಹಿಂದೇ ದೇಹ ಛೇದಿಸಿ ತಂದೆ ಪಾಠ ಮಾಡಿದ ಪುತ್ರ ಈಗ ತಾಯಿ ದೇಹ ಛೇದಿಸಲು ಮುಂದಾಗಿರುವುದು ವಿಶೇಷ. ಸದ್ಯ ಒಂದು ವೈದ್ಯಕೀಯ ಕುಟುಂಬವೇ ಈ ರೀತಿ ದೇಹ ದಾನದ ಮೂಲಕ ಜನರನ್ನ ಗಮನ ಸೆಳೆದು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದು ಸಾರ್ವಜನಿಕರು ಕೂಡ ಇದಕ್ಕೆ ಸಾಥ್ ಕೊಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *