Headlines

ಚಳಿಯನ್ನೂ ಲೆಕ್ಕಿಸದೆ ಮೈದಾನದಲ್ಲೇ ಮಲಗಿದ ಆರ್ಮಿ ಸೇರಲು ಬಂದ ಯುವಕರು!

ಚಳಿಯನ್ನೂ ಲೆಕ್ಕಿಸದೆ ಮೈದಾನದಲ್ಲೇ ಮಲಗಿದ ಆರ್ಮಿ ಸೇರಲು ಬಂದ ಯುವಕರು!


ಬೆಳಗಾವಿ, ನವೆಂಬರ್ 23: ಬೆಳಗಾವಿಯಲ್ಲಿ(ಬೆಳಗಾವಿ) ಭಾರತೀಯ ಸೇನೆಯ ಭರ್ತಿ ರ‍್ಯಾಲಿಯು ಯಶಸ್ವಿಯಾಗಿ ನಡೆಯುತ್ತಿದೆ. ಟೆರಿಟೋರಿಯಲ್ ಆರ್ಮಿ ನೇತೃತ್ವದಲ್ಲಿ ಈ ನೇಮಕಾತಿ ಯುವಕರು ಕರ್ನಾಟಕದ ವಿವಿಧ ಸಾವಿರಾರು ಜನರು ಭಾಗವಹಿಸಿದ್ದಾರೆ. ಬೆಳಗಾವಿ ನಗರದ ಕ್ಲಬ್ ರೋಡ್‌ನಲ್ಲಿ ಸೇನಾ ಭರ್ತಿಗಾಗಿ ಅಪಾರ ಸಂಖ್ಯೆಯ ಯುವಕರು ಜಮಾಯಿಸಿದ್ದು, ಆಗಮಿಸಿರುವ ಯುವಕರ ಗುಂಪು ಚಳಿಯನ್ನೂ ಲೆಕ್ಕಿಸದೆ ಕ್ಯಾಂಪ್ ಪ್ರದೇಶದ ಸಿಪಿಎಡ್ ಮೈದಾನದಲ್ಲಿ ಮಲಗಿರುವುದು ಕಂಡುಬಂತು. ಸೇನೆಯ ಜನರಲ್ ಡ್ಯೂಟಿ ಮತ್ತು ಟ್ರೇಡ್ಸ್‌ಮನ್ ಹುದ್ದೆಗಳಿಗೆ ಈ ಭರ್ತಿಗೆ ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಮಂಡ್ಯ, ದಾವಣಗೆರೆ ಸೇರಿದಂತೆ ಹಲವು ಭಾಗಗಳಿಂದ ಯುವಕರು ಬಂದಿದ್ದು, ನಸುಕಿನ ಜಾವದ ಚಳಿಯಿದ್ದರೂ, ದೇಶ ಸೇವೆ ಮಾಡುವ ಮಹದಾಸೆಯಿಂದ ಯುವಕರು ಶಿಸ್ತಿನಿಂದ ಕಾಯುತ್ತಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *