ಕಬ್ಬು ಕಾರ್ಖಾನೆ ಮಾಲೀಕರು, ಸರ್ಕಾರದಿಂದ ಫಿಪ್ಟಿ ಫಿಪ್ಟಿ: ಸಭೆಯಲ್ಲಿ ಮಹತ್ವದ ನಿರ್ಧಾರ

ಕಬ್ಬು ಕಾರ್ಖಾನೆ ಮಾಲೀಕರು, ಸರ್ಕಾರದಿಂದ ಫಿಪ್ಟಿ ಫಿಪ್ಟಿ: ಸಭೆಯಲ್ಲಿ ಮಹತ್ವದ ನಿರ್ಧಾರ


ಬೆಂಗಳೂರು, (ನವೆಂಬರ್ 07): ಪ್ರತಿ ಕ್ವಿಂಟಲ್ ಕಬ್ಬಿಗೆ 3500 ರೂಪಾಯಿ ನಿಗದಿಪಡಿಸುವಂತೆ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದೆ. ಇಂದು (ನವೆ 07) 9ನೇ ದಿನ ನಡೆದ ಪ್ರತಿಭಟನೆ ತೀವ್ರ ಸ್ವರೂಪವಾಗಿದ್ದು, ಹತ್ತರಗಿ ಟೋಲ್ ಗೇಟ್ ಬಳಿ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಹಲವು ವಾಹನಗಳಿಗೆ ಹಾನಿ, 6 ಪೊಲೀಸ್ ಸಿಬ್ಬಂದಿಗೆ ಗಾಯ. ಪ್ರತಿಭಟನೆ ತೀವ್ರ ಸ್ವರೂಪದಲ್ಲಿದೆ. ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಿಎಂ ಸಿದ್ದರಾಮಯ್ಯನವರು ತುಮಕೂರು ಕಾರ್ಯಕ್ರಮದ ಕಬ್ಬು ಕಾರ್ಖಾನೆ ರದ್ದುಪಡಿಸಿ ಹಾಗೂ ರೈತ ಮುಖಂಡರ ಜೊತೆ ನಿರಂತರವಾಗಿ ಸಭೆ ಸೇರಿದ್ದಾರೆ. ಮೂರ್ನಾಳಕು ಸಭೆ ನಡೆಸಿದ ಬಳಿಕ ಸರ್ಕಾರ ಒಂದು ಅಂತಿಮ ನಿರ್ಧಾರಕ್ಕೆ ಬಂದಿದೆ.

ಸಕ್ಕರೆ ಕಾರ್ಖಾನೆ ಜತೆ ಸೇರಿ ಮೇಲೆ ಸಭೆ ಮಾಡಿದ್ದು, ಸಕ್ಕರೆ ಸಭೆಯಿಂದ 50 ರೂ. ಹಾಗೂ ಸರ್ಕಾರದಿಂದ 50 ರೂ. ನೀಡಲು ನಿರ್ಧರಿಸಲಾಗಿದೆ. ಇದರೊಂದಿಗೆ 3500 ರೂ. ಬೇಡಿಕೆಗೆ 3300 ನೀಡಲು ಸರ್ಕಾರ ತೀರ್ಮಾನಿಸಿದೆ. ಆದರೆ, 3500 ರೂಪಾಯಿಗೆ ಬೇಡಿಕೆ ಇಟ್ಟಿರುವ ರೈತರು 3300 ರೂಪಾಯಿಗೆ ಒಪ್ಪುತ್ತಾರಾ? ಎನ್ನುವುದೇ ಮುಂದಿರುವ ಪ್ರಶ್ನೆ.

ರಂದು ಪ್ರಕಟಿಸಲಾಗಿದೆ – 6:34 pm, ಶುಕ್ರ, 7 ನವೆಂಬರ್ 25



Source link

Leave a Reply

Your email address will not be published. Required fields are marked *