ಬೆಳಗಾವಿ ಮಲಪ್ರಭಾ ನದಿಯಲ್ಲಿ ಮೂರು ಬೈಕ್​​​ ಪತ್ತೆ: ಇದರ ಹಿಂದಿದೆ ಒಂದು ಜಾಲ

ಬೆಳಗಾವಿ ಮಲಪ್ರಭಾ ನದಿಯಲ್ಲಿ ಮೂರು ಬೈಕ್​​​ ಪತ್ತೆ: ಇದರ ಹಿಂದಿದೆ ಒಂದು ಜಾಲ


ಬೆಳಗಾವಿ, ಫೆಬ್ರವರಿ 11: ಮಲಪ್ರಭಾ ನದಿ (ಮಲಪ್ರಭಾ ನದಿ) ದಂಡೆ ಮೇಲೆ ವಾಕಿಂಗ್ ಮಾಡುತ್ತಿರುವವರಿಗೆ ಕಂಡಿದ್ದು ನದಿಯಲ್ಲಿ ಬೈಕ್ (ಬೈಕ್) ಒಂದು. ಮುಂದೆ ಹೋಗಿ ನೋಡಿದವರಿಗೆ ಸಿಕ್ಕಿದ್ದು ಒಂದಲ್ಲಾ ಎರಡಲ್ಲಾ ಬರೋಬ್ಬರಿ ಮೂರು ಬೈಕ್ ಗಳು. ನದಿ ನೀರಲ್ಲಿ ಬೈಕ್ ಕಂಡು ಶಾಕ್ ಆದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ ಬೈಕ್ ಮೂಲ ಪತ್ತೆ ಹಚ್ಚಿದ್ದಾರೆ. ಒಂದೂವರೆ ತಿಂಗಳ ಹಿಂದೆ ಕಳ್ಳತನವಾಗಿದ್ದ ಬೈಕ್‌ಗಳು ಇದೀಗ ನದಿಯಲ್ಲಿ ಪತ್ತೆ ಆಗಿವೆ.

ಒಂದೂವರೆ ತಿಂಗಳ ಹಿಂದೇ ಬೈಕ್ ಕಳ್ಳತನ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದ ವಲಯದಲ್ಲಿ ಹಾದು ಹೋಗುವ ಮಲಪ್ರಭಾ ನದಿಯಲ್ಲಿ ಮೂರು ಬೈಕ್‌ಗಳು ಪತ್ತೆ ಆಗಿವೆ. ಇಂದು ಬೆಳಂಬೆಳಗ್ಗೆ ನದಿ ನೀರಲ್ಲಿ ದಂಡೆ ಮೇಲೆ ಬೈಕ್ ಕಾಣಿಸಿದೆ. ಹತ್ತಿರ ಹೋಗಿ ನೋಡಿ ಯಾರೋ ಬೈಕ್ ಸಮೇತ ಸೇತುವೆ ಮೇಲಿಂದ ಬಿದ್ದಿರಬಹುದು ಅಂತಾ ನದಿಗಿಳಿದು ಹುಡುಕಿದೆ. ಅಲ್ಲಿ ಮನುಷ್ಯರ ಬದಲಾಗಿ ಸಿಕ್ಕಿದ್ದು ಮತ್ತೊಂದು ಬೈಕ್, ಇದನ್ನ ಕಂಡು ಶಾಕ್ ಆಗಿ ಮತ್ತೆ ಹುಡುಕಿದಾಗ ಸಿಕ್ಕಿದ್ದು ಮತ್ತೊಂದು ಬೈಕ್. ಹೀಗೆ ಮೂರು ಬೈಕ್‌ಗಳು ನದಿ ನೀರಿನಲ್ಲಿ ಸಿಗುತ್ತಿದ್ದಂತೆ ಶಾಕ್ ಆದ ಸ್ಥಳೀಯರು ಬೈಲಹೊಂಗಲ ಠಾಣೆ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದು ತಪಾಸಣೆ ನಡೆಸಿದ ಪೊಲೀಸರು ಬೈಕ್‌ ಹೊರತೆಗೆದು ತಪಾಸಣೆಗೆ ತೆಗೆದುಕೊಂಡು ಹೋಗಿ ಅವರ ನಂಬರ್ ಆಧಾರದ ಮೇಲೆ ಮಾಲೀಕರ ಪತ್ತೆ ಹಚ್ಚಿ ಗೊತ್ತಾಗಿದ್ದು ಅವರ ಬೈಕ್‌ಗಳು ಒಂದೂವರೆ ತಿಂಗಳ ಹಿಂದೆ ಕಳ್ಳತನವಾಗಿರುವ ವಿಚಾರ.

ಇದನ್ನೂ ಓದಿ: ಚಡ್ಡಿ ಹೋಗಿ ಲುಂಗಿ ಗ್ಯಾಂಗ್ ಬಂತು: ಕಳ್ಳರ ಹಾವಳಿಗೆ ಆತಂಕಗೊಂಡ ಬಾಗಲಕೋಟೆ ಜನ

ಇಲ್ಲಿ ನದಿಯಲ್ಲಿ ಸಿಕ್ಕ ಬೈಕ್‌ಗಳು ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಿಂದ ಒಂದೂವರೆ ತಿಂಗಳ ಹಿಂದೆ ಬೈಕ್ ಕಳ್ಳತನವಾಗಿತ್ತು. ಬೈಕ್ ಕಳ್ಳತನವಾಗಿರುವ ಕುರಿತು ಠಾಣೆಯಲ್ಲಿ ಕೇಸ್ ಕೂಡ ನೀಡಿದ್ದರು. ಈ ವಿಚಾರ ತಿಳಿದು ಮತ್ತಷ್ಟು ತನಿಖೆ ಚುರುಕುಗೊಳಿಸಿದಾಗ ಗೊತ್ತಾಗಿದ್ದು, ಸಿಕ್ಕ ಬೈಕ್ ಬಳಕೆ ಖದೀಮರಿಗೆ.

ಕಳ್ಳತನಕ್ಕೂ ಮೊದಲು ಮೂರು ಬೈಕ್‌ಗಳನ್ನ ಕದ್ದಿದ್ದ ಕಳ್ಳರು

ಡಿಸೆಂಬರ್ 22 ರಂದು ಸವದತ್ತಿ ಪಟ್ಟಣದ ಅದೊಂದು ಚಿನ್ನದ ಅಂಗಡಿಯಲ್ಲಿ ಚಡ್ಡಿ ಗ್ಯಾಂಗ್ ಕಳ್ಳತನ ಮಾಡುತ್ತೆ. 09 ಜನ ಮೂರು ಬೈಕ್ ಮೇಲೆ ಬಂದು ಚಿನ್ನದಂಗಡಿ ಬಾಗಿಲು ಮುರಿದು 12 ಲಕ್ಷ ರೂ ಮೌಲ್ಯದ ಚಿನ್ನ ಕದ್ದು ಪರಾರಿಯಾಗಿರುತ್ತಾರೆ. ಈ ಎಲ್ಲ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುತ್ತೆ. ಚಿನ್ನದಂಗಡಿ ಕಳ್ಳತನಕ್ಕೂ ಮೊದಲು ಮೂರು ಬೈಕ್‌ಗಳನ್ನ ಕದ್ದು ಕಳ್ಳರು ಬಳಿಕ ಚಿನ್ನದಂಗಡಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಹೀಗೆ ಕದ್ದು 25 ಕಿಮೀ ದೂರದಲ್ಲಿರುವ ಮಲಪ್ರಭಾ ನದಿಯಲ್ಲಿ ಮೂರು ಬೈಕ್ ಎಸೆದು ಯಾರಿಗೂ ಗೊತ್ತಾಗದ ಹಾಗೆ ಪರಾರಿಯಾಗಿದ್ದರು.

ಕಳ್ಳತನವಾದ ಬೈಕ್‌ಗಳು ಕಳ್ಳತನಕ್ಕೆ ಬಳಸಿಕೊಂಡಿದ್ದು ಬಳಿಕ ನದಿಗೆ ಎಸೆದಿದ್ದು ಒಂದೂವರೆ ತಿಂಗಳ ಬಳಿಕ ಬೈಕ್ ಅನ್ನು ಸಿದ್ಧಪಡಿಸಿದೆ. ಇದರಿಂದ ಕಳ್ಳರು ಪೊಲೀಸರ ದಿಕ್ಕು ತಪ್ಪಿಸಲು ಹೇಗೆಲ್ಲಾ ಪ್ಲ್ಯಾನ್ ಮಾಡ್ತಾರೆ ಅನ್ನೋದಕ್ಕೆ ಈ ಕೇಸ್ ಉದಾಹರಣೆಯಾಗಿದೆ. ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಆದಷ್ಟು ಬೇಗ ಕಳ್ಳರನ್ನು ಬಂಧಿಸುವುದಾಗಿ ಎಸ್ ಪಿ ಕೆ.ರಾಮರಾಜನ್ ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಚಡ್ಡಿ ಗ್ಯಾಂಗ್ ಹಾವಳಿಗೆ ಜನರು ತಲ್ಲಣ: ಬಂಧಿಸುವಲ್ಲಿ ಖಾಕಿ ವಿಫಲವಾಗಿದೆಯೇ?

ಸದ್ಯ ಬೆಳಗಾವಿ ಜಿಲ್ಲೆಯ ಹಾವಳಿ ಹೆಚ್ಚಾಗಿದ್ದರೆ, ಖದೀಮರ ಹಿಡಿಯಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಖದೀಮರು ಪೊಲೀಸರ ದಿಕ್ಕು ತಪ್ಪಿಸಲು ಹೊಸ ಹೊಸ ಟೆಕ್ನಿಕ್ ಅಳವಡಿಸಿಕೊಂಡು ಕಳ್ಳತನ ಮಾಡಿರುವುದು ಪೊಲೀಸರಿಗೂ ಸವಾಲ್ ಆಗಿದೆ. ಒಟ್ಟಿನಲ್ಲಿ ಕಳ್ಳತನವಾಗಿದ್ದ ಬೈಕ್ ನೀರಲ್ಲಿ ಇದ್ದಿದ್ದು, ಬೈಕ್ ಕಳೆದುಕೊಂಡವರು ನಿಟ್ಟುಸಿರು ಬಿಟ್ಟಿದ್ದಾರೆ. ಅತ್ತ ಚಿನ್ನದಂಗಡಿ ಮಾಲೀಕರು ಮಾತ್ರ ಕಳ್ಳರು ಸಿಗಲಿ ಅಂತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *