ಬಳ್ಳಾರಿ, (ಜನವರಿ 11): ಬಳ್ಳಾರಿ ಗಲಭೆ ಪ್ರಕರಣ ಇಡೀ ರಾಜ್ಯದಲ್ಲಿಯೇ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಹಾಗೂ ಅವರ ಆಪ್ತ ಸತೀಶ್ ರೆಡ್ಡು ಬಂಧನ ಆಗಬೇಕು ಎಂದು ಜನಾರ್ದನ ರೆಡ್ಡಿ, ರಾಮುಲು ಒತ್ತಾಯಿಸುತ್ತಿದ್ದಾರೆ. ಆದರೆ ಇದುವರೆಗೂ ಶಾಸಕ ಭರತ್ ರೆಡ್ಡಿ ಬಂಧನ ಆಗಿಲ್ಲ. ಇನ್ನು ಈ ಪ್ರಕರಣದ ತನಿಖೆಯನ್ನು ಸರ್ಕಾರಕ್ಕೆ ವಹಿಸಿದ್ದು, ಅಧಿಕಾರಿಗಳು ಸಹ ಸ್ಥಳಕ್ಕೆ ಎಂಟ್ರಿ ಕೊಟ್ಟು ತನಿಖೆ ಚುರುಕುಗೊಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಗಲಭೆಯ ಮತ್ತಷ್ಟು ವಿಡಿಯೋ ಬಿಡುಗಡೆ ಮಾಡಿದ್ದಾರೆ. ನಂತರ ಶ್ರೀರಾಮುಲುರನ್ನ ಹೊಡೀರಿ ಎಂದು ಸತೀಶ್ ರೆಡ್ಡಿ ಹೇಳುತ್ತಿದ್ದರು. ಪ್ರೀ ಪ್ಲ್ಯಾಂಡ್ ಮಾಡಿ ಕಾಂಗ್ರೆಸ್ ನವರು ಈ ಗಲಾಟೆ ಮಾಡಿದ್ದಾರೆ. ಗಲಾಟೆ ವೇಳೆ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಹೇಳ್ತಿದ್ದ. ಶ್ರೀರಾಮುಲು ಏನು ದೊಡ್ಡ ಬ್ಯಾಡರ ನಾಯಕನಾ ಅಂತಾ ಹೇಳ್ತಿದ್ರು. ಆ ವಿಡಿಯೋ ಈಗ ಎಲ್ಲ ಕಡೆ ಹರಿದಾಡುತ್ತಿದೆ.