
ಬಳ್ಳಾರಿ, (ಜನವರಿ 04): ಬಳ್ಳಾರಿ ಬ್ಯಾನರ್‌ಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವು ಪ್ರಕರಣದ ತನಿಖೆ ತೀವ್ರ ಸ್ವರೂಪ ಪಡೆದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಸೇರಿದ ಒಟ್ಟು 26 ಜನರನ್ನು ಬಂಧಿಸಲಾಗಿದೆ. ಪ್ರಮುಖವಾಗಿ ಘಟನೆ ನಡೆದ ಸ್ಥಳದಲ್ಲಿದ್ದ 9 ಗನ್ಮ್ಯಾನ್‌ಗಳ ಮೇಲ್ಭಾಗದ ಬಂಧನವಾಗಿದೆ. ಹೌದು.. ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್ಮ್ಯಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗಲಾಟೆ ವೇಳೆ ಸತೀಶ್ ರೆಡ್ಡಿ ಖಾಸಗಿ ಗನ್ ಮ್ಯಾನ್ ಗುರುಚರಣ್ ಸಿಂಗ್ ಹಾರಿಸಿದ ಗುಂಡಿಗೆ ರಾಜಶೇಖರ್ ಸಾವನ್ನಪ್ಪಿರುವುದು ದೃಢಪಟ್ಟಿದೆ. ಹೀಗಾಗಿ ಗುರುಚರಣ್ ಸಿಂಗ್ ನನ್ನನ್ನು ಬಂಧಿಸಿದ್ದಾರೆ.
ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ನಾಲ್ವರು ಗನ್ ಮ್ಯಾನ್, ಶಾಸಕ ಭರತ್ ರೆಡ್ಡಿ ಸರ್ಕಾರಿ ಗನ್ ಮ್ಯಾನ್ ಬಸವರಾಜ್, ಶಾಸಕ ಜನಾರ್ದನ ರೆಡ್ಡಿ ನಾಲ್ವರು ಸರ್ಕಾರಿ ಗನ್ ಮ್ಯಾನ್ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಅಂಗರಕ್ಷ ಸೇರಿದಂತೆ ಒಟ್ಟು 9 ಮಂದಿ ಗನ್ ಮ್ಯಾನ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಈ ಇದೀಗ ಸತೀಶ್ ರೆಡ್ಡಿ ಅಂಗರಕ್ಷಕ ಗುರುಚರಣ್ ಸಿಂಗ್ ಬಂಧನವಾಗಿದೆ.