ಹಾಸನ, ಮಾರ್ಚ್ 02: ಅದು ವಿಶ್ವವಿಖ್ಯಾತ ಶಿಲ್ಪ ಕಲೆಗಳ ತವರು, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ದೇವಾಲಯ ಇರುವ ನೆಲೆಬೀಡು, ಕರುನಾಡಿನ ಕಲೆ ವಾಸ್ತು ಶಿಲ್ಪವನ್ನ ಅನಾವರಣಗೊಳಿಸುತ್ತಿರುವ ನಗರ. ನಿತ್ಯವೂ ಸಹಸ್ರಾರು ಹಿಡಿದು ಬಂದು ಹೋಗುವ ಪಟ್ಟಣ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಬಿಂದು ಇಷ್ಟೆಲ್ಲಾ ವಿಶೇಷತೆ ಇರುವ ರಾಷ್ಟ್ರೀಯ ಹೆದ್ದಾರಿ (ರಾಷ್ಟ್ರೀಯ ಹೆದ್ದಾರಿ) ಮಂಜೂರಾಗಿ ಬರೋಬ್ಬರಿ 5 ವರ್ಷವೇ ಕಳೆದಿದೆ. ಕುಂಟುತ್ತಾ, ಉರುಳುತ್ತಾ ಸಾಗಿರುವ ಕಾಮಗಾರಿ ಮಾತ್ರ ಮುಗಿಯುವುದಿರಲಿ ಆರಂಭವೇ ಆಗಿಲ್ಲ. 630 ಕೋಟಿ ರೂ ಬೃಹತ್ ಮೊತ್ತದ ರಾಷ್ಟ್ರೀಯ ಹೆದ್ದಾರಿ 373ಕ್ಕೆ ಭೂಸ್ವಾಧೀನ ಗುಮ್ಮ ಕಾಡುತ್ತಿದೆ, ನಿತ್ಯವೂ ಸಾವಿರಾರು ವಾಹನಗಳು ಓಡುವ ರಸ್ತೆಯ ಕಾಮಗಾರಿ ಬೇಗ ಮುಗಿಯುವ ಆಗ್ರಹ ಕೇಳಿ ಬಂದಿದೆ.
ದೇಶದ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಶರವೇಗದಲ್ಲಿ ಆಗುತ್ತಿದೆ ಎಂಬ ಮಾತುಗಳನ್ನು ಕೇಂದ್ರ ಸರ್ಕಾರ ಹೆದ್ದಾರಿ ಸಚಿವರು ಪದೇ ಪದೇ ಹೇಳೋದನ್ನ ಕೇಳಿದ್ದೇವೆ. ಆದರೆ ಹಾಸನ ಜಿಲ್ಲೆಯ ಐತಿಹಾಸಿಕ ನಗರ, ವಿಶ್ವ ಪರಂಪರೆಯ ಪಟ್ಟಿಗೆ ಸೇರಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯವಿರುವ ಬೇಲೂರಿನಿಂದ ಮೈಸೂರಿನ ಬಿಳಿಕೆರೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 373 ಗ್ರಾಮೀಣ ರಸ್ತೆ ಇನ್ನೂ ಕಡೆಯಾಗಿದೆ. ಸಹಸ್ರಾರು ವಾಹನಗಳು ಚಲಿಸುವ ರಸ್ತೆಯಲ್ಲಿ ಗುಂಡಿಗಳು ಒಂದೆಡೆಯಾದರೆ ಎರಡು ವರ್ಷಗಳ ಹಿಂದೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅಲ್ಲಲ್ಲಿ ಇರುವ ರಸ್ತೆಯ ಬಗ್ಗೆ ಅವಾಂತರ ವಾಹನ ಸವಾರರಿಗೆ ದೊಡ್ಡ ತಲೆನೋವು ತರಿಸಿದೆ.
ಇದನ್ನೂ ಓದಿ: ಹಾಸನ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕೆ ಹತ್ತಾರು ವಿಘ್ನ: ಕಾಮಗಾರಿ ಮುಗಿಯೋದು ಯಾವಾಗ?
ಸುಮಾರು 35 ಕಿ.ಮೀಟರ್ ಸೇರಿ ಬೇಲೂರಿನಿಂದ ಬಿಳಿಕೆರೆಯಿಂದ ಈ ಹಾಸನ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 630 ಕೋಟಿ ರೂ ಹಣ ಮೀಸಲಿಟ್ಟಿದೆ. ಆದರೆ ರಸ್ತೆಗೆ ಬೇಕಾದ ಭೂಸ್ವಾಧೀನ ಅಧಿಕಾರಿಗಳು ಮಾಡಿರುವ ವಿಳಂಬದಿಂದಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎನ್ನೋದು ಸ್ಥಳೀಯ ಶಾಸಕರ ಆಕ್ರೋಶ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ, ರಾಜ್ಯದೋಪಯೋಗಿ ಸಚಿವರು ಕಾಮಗಾರಿಯ ಬಗ್ಗೆ ಉತ್ಸಾಹ ತೋರಿದ್ದಾರೆ, ಆದರೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ವಿಳಂಬದಿಂದ ಸಮಸ್ಯೆ ಆಗಿದ್ದಾರೆ ಸಾರ್ವಜನಿಕರ ಆರೋಪ.
ಹೆಚ್ಚುವರಿಯಾಗಿ 100 ಕೋಟಿ ರೂ ಹಣ ಬೇಕು
ಸಾಕಷ್ಟು ಸಮಸ್ಯೆಗೆ ಹಾಸನದಿಂದ ಬೇಲೂರಿಗೆ ತೆರಳುವ ಮಾರ್ಗ. ಬೇಲೂರು ಮೂಲಕ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಚಿಕ್ಕಮಗಳೂರು, ಶೃಂಗೇರಿ, ಹೊರನಾಡು ಸೇರಿ ಚಾರ್ಮಾಡಿ ಘಾಟ್ ಮೂಲಕ ಮಂಗಳೂರಿನ ಕಡೆಗೆ ತೆರಳಲು ಇರುವುದು ಕೂಡ ಇದೇ ಮಾರ್ಗವಾಗಿದೆ. ಇಲ್ಲಯೇ ಐದು ವರ್ಷಗಳ ಹಿಂದೆಯೇ ಈ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣ ಮೀಸಲಿಟ್ಟಿತ್ತು. ಆದರೆ ಇಲ್ಲಿಗೆ ಮೀಸಲಿಟ್ಟ ಹಣವನ್ನ ಬೇರೊಂದು ಕಾಮಗಾರಿಗೆ ವರ್ಗಾವಣೆ ಮಾಡಿದ್ದರಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. ಬಳಿಕ ವರ್ಷದ ಹಿಂದೆ ಮತ್ತೆ ಈ ಯೋಜನೆಗೆ ಮರುಜೀವ ಬಂದು, ಕಾಮಗಾರಿ ಆರಂಭಿಸಲು ಗುತ್ತಿಗೆದಾರರು ಅಲ್ಲಲ್ಲಿ ರಸ್ತೆಯನ್ನ ಕಡಿಯುವುದಕ್ಕೆ ಶುರು ಮಾಡಿದರು. ಆದರೆ ಈ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ 109 ಕೋಟಿ ರೂಪಾಯಿ ಹಣವನ್ನ ಮೀಸಲಿಡಲಾಗಿತ್ತು, ಹಾಸನ ಮಹಾನಗರ ಪಾಲಿಕೆಯ ಮೇಲ್ದರ್ಜೆಗೇರಿದ ಹಾಸನ ನಗರದ ಬಳಿಕ ಭೂಮಿಯ ಮೌಲ್ಯ ದುಪ್ಪಟ್ಟಾಗಿದೆ. ಇದಕ್ಕೆ ಹೆಚ್ಚುವರಿಯಾಗಿ 100 ಕೋಟಿ ರೂ ಹಣ ಬೇಕು ಎನ್ನೋದು ಒಂದೆಡೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿ ಕಚೇರಿ ಬೆಂಗಳೂರಿನಲ್ಲಿದ್ದು, ಜನರೊಂದಿಗೆ ಸಂವಹನಕ್ಕೆ ಸಮಸ್ಯೆಯಾಗುತ್ತಿರುವ ಬಗ್ಗೆ ಆರೋಪಗಳು ಬರುತ್ತಿವೆ. ಕಾಮಗಾರಿ ನಿಧಾನವಾಗಿರುವ ಬಗ್ಗೆ ಅಧಿಕಾರಿಗಳ ಸಭೆ ನಡೆಸಲಾಗಿದೆ. ಭೂಸ್ವಾಧೀನ ಅಧಿಕಾರಿಗಳ ಕಚೇರಿಯನ್ನು ಕೂಡ ಹಾಸನದಲ್ಲಿ ತೆರೆಯುವ ಬಗ್ಗೆ ಕೂಡ ಚರ್ಚೆ ನಡೆಸಲಾಯಿತು. ಶೀಘ್ರ ಕಾಮಗಾರಿ ಆರಂಭಿಸಲು ಹಾಸನ ಡಿಸಿ.
ಇದನ್ನೂ ಓದಿ: ಅಸಲಿ ಬದಲಿಗೆ ನಕಲಿ ಚಿನ್ನ ಇಟ್ಟು 3 ಲಕ್ಷ ರೂ. ಮೌಲ್ಯದ ಬಂಗಾರ ಕದ್ದ ಕದೀಮರು!
ಜಿಲ್ಲೆಯ ಅತೀ ಹೆಚ್ಚು ವಾಹನ ಸಂಚಾರ ಇರುವ ರಸ್ತೆಗಳಲ್ಲಿ ಹಾಸನ ಬೇಲೂರು ರಸ್ತೆಯೂ ಒಂದು ರಾಜ್ಯದ ಹಲವು ಪ್ರಮುಖ ಧಾರ್ಮಿಕ ಕೇಂದ್ರ, ಪ್ರವಾಸಿ ತಾಣಗಳಿಗೆ ಇದೇ ಪ್ರಮುಖ ಮಾರ್ಗವಾಗಿದೆ, ವಾಹನಗಳ ಓಡಾಟ ಹೆಚ್ಚುತ್ತಿರುವ ಕಾರಣ ಚತುಷ್ಪಥ ರಸ್ತೆ ಆಗಬೇಕು ಎನ್ನೋದು ಹಲವು ವರ್ಷದ ಯೋಜನೆ. ಅದಕ್ಕಾಗಿ ಹಣವೂ ಮೀಸಲಿಡಲಾಗಿದೆ. ಕಾಮಗಾರಿಯೂ ಶುರುವಾಗಿದೆ. ಆದರೆ ಸಣ್ಣ ಪುಟ್ಟ ತೊಡಕುಗಳನ್ನು ನಿವಾರಣೆ ಮಾಡುವಲ್ಲಿ ಆಗಿರುವ ನಿರ್ಲಕ್ಷ್ಯ ಇಡೀ ಯೋಜನೆಯನ್ನು ಮಂಕಾಗಿಸಿದ್ದು, ಈ ಬಗ್ಗೆ ಸರ್ಕಾರ ಯೋಜನೆ ಸಾಕಾರಕ್ಕೆ ಅಗತ್ಯ ಕ್ರಮವಹಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.