ದೇವರ ಹಾಡು ಹಾಡಿದ್ದಕ್ಕೆ ಕ್ರುದ್ಧಗೊಂಡ ಶಾಲಾ ಸಹ-ಮಾಲೀಕ; ಬಂಗಾಳಿ ಗಾಯಕಿ ಮೇಲೆ ಹಲ್ಲೆಗೆ ಯತ್ನ?

ದೇವರ ಹಾಡು ಹಾಡಿದ್ದಕ್ಕೆ ಕ್ರುದ್ಧಗೊಂಡ ಶಾಲಾ ಸಹ-ಮಾಲೀಕ; ಬಂಗಾಳಿ ಗಾಯಕಿ ಮೇಲೆ ಹಲ್ಲೆಗೆ ಯತ್ನ?


ಕೋಲ್ಕತಾ, ಡಿಸೆಂಬರ್ 21: ಬಂಗಾಳಿ ಸಿನಿಮಾವೊಂದರ ಭಕ್ತಿ ಗೀತೆಯನ್ನು ಹಾಡಿದ್ದಕ್ಕೆ ಗಾಯಕಿ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ್ನ ಭಾಗಬನ್ಪುರ ಎಂಬಲ್ಲಿನ ಶಾಲೆಯಲ್ಲಿ ಈ ಘಟನೆ ನಡೆದಿದೆ. ಬಂಗಾಳಿ ಗಾಯಕಿ ಲಗ್ನಜಿತಾ ಚಕ್ರಬರ್ತಿ (ಲಗ್ನಜಿತಾ ಚಕ್ರಬರ್ತಿ) ಎಂಬಾಕೆಯನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಬಂಧಿತ ನಗರದಲ್ಲಿ ಆ ಶಾಲೆಯ ಒಬ್ಬ ಸಹ-ಮಾಲೀಕ ದಾಖಲಾಗಿದ್ದಾರೆ.

ಭಾಗಬನ್‌ಪುರದಲ್ಲಿರುವ ಸೌತ್ ಪಾಯಿಂಟ್ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಸಂಜೆ 7ಕ್ಕೆ ಲಗ್ನಿಜಿತಾ ಚಕ್ರಬರ್ತಿ ಅವರ ಗಾಯನ ಕಾರ್ಯಕ್ರಮ ಆರಂಭವಾಗಿದೆ. ಮೊದಲ 45 ನಿಮಿಷ ಅವರು ವಿವಿಧ ಹಾಡುಗಳನ್ನು ಹಾಡಿದ್ದಾರೆ. ನಂತರ, ಸನ್ಮಾನ ಕಾರ್ಯಕ್ರಮವೂ ಸರಾಗವಾಗಿ ನಡೆಯಿತು. ಅವರ ಏಳನೇ ಹಾಡು ದೇಬಿ ಚೌಧುರಾಣಿ ಎನ್ನುವ ಬಂಗಾಳಿ ಸಿನಿಮಾದ ‘ಜಾಗೋ ಮಾ’ ಹಾಡು.

ಇದನ್ನೂ ಓದಿ: ಟ್ರೈನ್ ಟಿಕೆಟ್ ಬೆಲೆ ಪ್ರತೀ ಕಿಮೀಗೆ 1-2 ಪೈಸೆ; ಡಿ. 26ರಿಂದ ಹೊಸ ದರ ಜಾರಿ

ಹಿಂದೂ ದೇವತೆಯನ್ನು ಸ್ತುತಿಸುವ ಈ ಹಾಡನ್ನು ಹಾಡಿದ ಬಳಿಕ ಲಗ್ನಜಿತಾ ಅವರು ಸಭಿಕರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ, ವೇದಿಕೆಗೆ ಏರಿ ಹೋದ ಮೆಹಬೂಬ್ ಮಲ್ಲಿಕ್ ಎಂಬ ವ್ಯಕ್ತಿ, ಲಗ್ನಜಿತಾ ಅವರನ್ನು ನಿಂದಿಸಿ ಹಲ್ಲೆ ನಡೆಸಿದ್ದಾನೆ. ‘ಜಾಗೋ ಮಾ ಹಾಡಿದ್ದು ಸಾಕು. ಈಗ ಏನಾದರೂ ಸೆಕ್ಯೂಲರ್ ನಂಥದ್ದು ಹಾಡು’ ಎಂದು ಮಲ್ಲಿಕ್ ಜಬರ್ದಸ್ ಮಾಡಿದ್ದು ಮೈಕ್ ನಲ್ಲಿ ಎಲ್ಲರಿಗೂ ಕೇಳಿದೆ. ಈತ ವೇದಿಕೆ ಮೇಲೆ ಏರಿ ಹೋಗಿ ಲಗ್ನಜಿತಾ ಮೇಲೆ ಹಲ್ಲೆಗೆ ಮುಂದಾಗುತ್ತಿರುವಂತೆಯೇ ಓಡಿ ಬಂದು ತಡೆದಿದ್ದಾರೆ.

ಈ ಘಟನೆ ಬಳಿಕ ಲಗ್ನಜಿತಾ ಅವರ ಕಾರ್ಯಕ್ರಮವನ್ನು ಅಲ್ಲಿಗೇ ಇಳಿಸಿ ಹೊರಟು ಹೋಗಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ಇದಾದ ಬಳಿಕಕ್ ಮೆಹಬೂಬಾ ಮಲ್ಲಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಸೌತ್ ಆಫ್ರಿಕಾದಲ್ಲಿ ಭೀಕರ ಶೂಟೌಟ್; ಒಂಬತ್ತು ಮಂದಿ ಬಲಿ, 10 ಜನರಿಗೆ ಗಾಯ

ಕಳೆದ ವರ್ಷದ (2024) ದುರ್ಗಾ ಪೂಜೆಯಂದು ಬಿಡುಗಡೆಯಾದ ದೇಬಿ ಚೌಧುರಾಣಿ ಸಿನಿಮಾದ ಹಿಟ್ ಹಾಡು ‘ಜಾಗೋ ಮಾ’. ಇದನ್ನು ಸಿನಿಮಾಗೆ ಹಾಡಿದವರು ಇದೇ ಗಾಯಕಿ ಲಗ್ನಜಿತಾ ಚಕ್ರಬರ್ತಿ. ಈಕೆಯ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದಲ್ಲಿ ಬಂಧಿತರಾದ ಮೆಹಬೂಬ್ ಮಲ್ಲಿಕ್ ಅವರು ಶಾಲೆಯ ಸಹ-ಮಾಲೀಕರಲ್ಲಿ ಒಬ್ಬರಾಗಿದ್ದಾರೆ. ಆ ಶಾಲೆಯ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *