Viral: ಬೆಂಗಳೂರಿನ ಈ ಏರಿಯಾದಲ್ಲಿ 2BHK ಮನೆ ಬಾಡಿಗೆ 70 ಸಾವಿರ ರೂ; ವಾಸ್ತವ ಸ್ಥಿತಿ ಬಿಚ್ಚಿಟ್ಟ ಸಾಫ್ಟ್‌ವೇರ್‌ ಇಂಜಿನಿಯರ್

Viral: ಬೆಂಗಳೂರಿನ ಈ ಏರಿಯಾದಲ್ಲಿ 2BHK ಮನೆ ಬಾಡಿಗೆ 70 ಸಾವಿರ ರೂ; ವಾಸ್ತವ ಸ್ಥಿತಿ ಬಿಚ್ಚಿಟ್ಟ ಸಾಫ್ಟ್‌ವೇರ್‌ ಇಂಜಿನಿಯರ್


ಬೆಂಗಳೂರು, ಜನವರಿ 22: ಮಾಯನಗರಿ ಬೆಂಗಳೂರಿಗೆ (ಬೆಂಗಳೂರು) ಕೆಲಸಕ್ಕೆಂದು ಬರುವ ಯುವಕರು ಯುವತಿಯರು ಮೊದಲು ಹುಡುಕುವುದೇ ಬಾಡಿಗೆ ಮನೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಕಡಿಮೆ ಬಾಡಿಗೆಗೆ ಮನೆಗೆ ಸಿಗೋದು ತುಂಬಾ ಕಡಿಮೆ. ಸಾಫ್ಟ್‌ವೇರ್‌ ಇಂಜಿನಿಯರ್‌ವೇರ್ ಬೆಂಗಳೂರಿನ ಕಾಡುಬೀಸನಹಳ್ಳಿಯಲ್ಲಿ ಮನೆ ಹುಡುಕುತ್ತಿದ್ದಾಗ ಬಾಡಿಗೆ ಮನೆ ಇರೋದು. ಈ ಖಾಲಿ ಮನೆಯೊಂದಕ್ಕೆ ತೆರಳಿ ಅಲ್ಲಿ ಮನೆಯ ಬಳಿ ಬಾಡಿಗೆ ಬಗ್ಗೆ ವಿಚಾರಿಸಿದ್ದಾರೆ. ಆದರೆ ಮನೆ ಮಾಲೀಕ 70 ಸಾವಿರ ರೂ ಬಾಡಿಗೆ ಹೇಳಿದ್ದು ಕೇಳಿ ಶಾಕ್ ಆಗಿದ್ದಾರೆ. ದುಬಾರಿ ಬಾಡಿಗೆ ಮನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದಾರೆ.

ರಾಜ್ವಿ (rajvi) ಹೆಸರಿನ ಎಕ್ಸ್ ಖಾತೆಯಲ್ಲಿ ಬೆಂಗಳೂರಿನ ದುಬಾರಿ ಬಾಡಿಗೆ ಮನೆಯ ಬಗ್ಗೆ ಪೋಸ್ಟ್ ಮಾಡಲಾಗಿದೆ. ಬೆಂಗಳೂರಿನ ಮನೆಗಳ ಬಾಡಿಗೆ ದರಗಳು ಹೆಚ್ಚಾಗಿವೆ. ಈ ದರಗಳು ಮುಂಬೈಗೂ ಸ್ಪರ್ಧೆ ನೀಡುವಂತಿವೆ. 70,000 ರೂಪಾಯಿ ಬಾಡಿಗೆಗೆ ಸೆಮಿ-ಫರ್ನಿಶ್ಡ್ 2BHK ಕೇಳುತ್ತಾರೆ ಅಂದರೆ ಏನು? ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಪೋಸ್ಟ್ ವೈರಲ್ ಇಲ್ಲಿದೆ

ಇದನ್ನೂ ಓದಿ:ಬೆಂಗಳೂರಿನಲ್ಲಿ 90 ಲಕ್ಷ ರೂ ಉತ್ತಮ ಸಂಬಳವೇ: ಅನಿವಾಸಿ ಭಾರತೀಯ ಹೀಗೆ ಕೇಳಿದ್ದೇಕೆ?

ಜನವರಿ 20 ರಂದು ಹಂಚಿಕೊಂಡಿದ್ದಾರೆ ಈ ಪೋಸ್ಟ್ ಮೂವತ್ತೈದು ಸಾವಿರ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಪೂರ್ವ ಬೆಂಗಳೂರು ಬಿಟ್ಟು, ಬೇರೆ ಕಡೆ 2ಬಿ ಹೆಚ್ ಕೆಗೆ 25 ರಿಂದ 30 ಸಾವಿರ ರೂಪಾಯಿ ಬಾಡಿಗೆ ಇದೆ. ಬೆಂಗಳೂರಿನ ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರದೇಶಕ್ಕೆ ಬಾಡಿಗೆ ದರಗಳು ಬದಲಾಗುತ್ತವೆ ಕಾಮೆಂಟ್ ಮಾಡಲಾಗಿದೆ. ಮತ್ತೊಬ್ಬರು ಬೆಂಗಳೂರಿನ ಮನೆ ಆಸೆ ಬುರುಕರು. ಇತರರು, ಬಾಡಿಗೆ ಮನೆಯಲ್ಲಿ ಇರೋ ಬದಲು ಸಾಲ ಮಾಡಿ ಮನೆ ಖರೀದಿ ಮಾಡಿದ್ರೆ ಸ್ವಂತ ಮನೆಯಾದ್ರೂ ಆಗುತ್ತೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *