ಬೆಂಗಳೂರು 7 ಕೋಟಿ ರೂ ದರೋಡೆ​: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರಕರಣದ ಕಿಂಗ್​ಪಿನ್​ ಪತ್ನಿ

ಬೆಂಗಳೂರು 7 ಕೋಟಿ ರೂ ದರೋಡೆ​: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರಕರಣದ ಕಿಂಗ್​ಪಿನ್​ ಪತ್ನಿ


ಬೆಂಗಳೂರು, ನವೆಂಬರ್ 21: ನಡೆದಿರುವ 7.11 ಕೋಟಿ ನಗದು ದರೋಡೆ ಪ್ರಕರಣಕ್ಕೆ (ದರೋಡೆ ಪ್ರಕರಣ) ಸುಮಾರು 5.30 ಕೋಟಿ ರೂ. ಹಣವನ್ನು ಆಂಧ್ರದಲ್ಲಿ ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಕೇಸ್ನ ಕಿಂಗ್ಪಿನ್ (ಕಿಂಗ್‌ಪಿನ್)ರವಿ ಪತ್ನಿಯನ್ನು ನಿನ್ನೆ ರಾತ್ರಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಕರಣದ ಕಿಂಗ್‌ಪಿನ್ ರವಿ ಪತ್ನಿ ಪೊಲೀಸರ ವಶಕ್ಕೆ

ಪ್ರಕರಣದ ಕಿಂಗ್‌ಪಿನ್ ರವಿ ಪತ್ನಿಯನ್ನು ಬಂಧಿಸಿರುವ ಆರೋಪಿ ರವಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಪತಿ ಕೃತ್ಯದಲ್ಲಿ ಭಾಗಿಯಾಗಿದ್ದನ್ನು ರವಿ ಪತ್ನಿ ಒಪ್ಪಿಕೊಂಡಿದ್ದಾರೆ. ನಾನೇ ಪೊಲೀಸ್ ಠಾಣೆಗೆ ಬರಬೇಕು ಎಂದುಕೊಂಡಿದ್ದೆ, ನೀವೇ ಬಂದ್ರಿ ಎಂದು ಪೊಲೀಸರ ಜೊತೆಗೆ ಬಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದರೋಡೆ ಪ್ರಕರಣ: ಆರೋಪಿಗಳಿಗೆ ಪೊಲೀಸರ ಶಾಕ್, ಆಂಧ್ರದಲ್ಲಿ ಬಹುಪಾಲು ಹಣ ಸೀಜ್

ಪತಿ ರವಿ ಬೆಂಗಳೂರಿನಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದರು. ಆದರೆ ಟ್ರಾವೆಲ್ಸ್ ಏಜೆನ್ಸಿಯಲ್ಲಿ ಲಾಸ್ ಆಗಿ ಕೆಲಸವಿಲ್ಲದೆ ಮನೆಯಲ್ಲಿದ್ದರು. ಈ ವೇಳೆ ಏರಿಯಾದ ಹುಡುಗರನ್ನು ಸೇರಿಸಿಕೊಂಡು ರಾಬರಿಗೆ ಸಂಚು ರೂಪಿಸಿ ಹಣ ದರೋಡೆಗೆ ಪ್ಲ್ಯಾನ್ ಮಾಡಿದ್ದರು. ಸದ್ಯ ರವಿ ಬಗ್ಗೆ ಪತ್ನಿಯಿಂದ ಮಾಹಿತಿ ಕಲೆ ಹಾಕಿದ್ದಾರೆ.

ಪೋಲೀಸಪ್ಪನ ಬಂಧನ: 5.30ಕೋಟಿ ರೂ. ರಿಕವರಿ, ಉಳಿದಿದ್ದೇನಾಯ್ತು?

ಈ ಇಡೀ ಗ್ಯಾಂಗ್ನ ಮಾಸ್ಟರ್ ಮೈಂಡ್ ಬೇರೆ ಯಾರೋ ಅಲ್ಲ. ಆರಕ್ಷಕರಲ್ಲೇ ಒಬ್ಬ. ಗೋವಿಂದಪುರ ಠಾಣೆಯ ಪೊಲೀಸ್ ಕಾನ್ ಟೇಬಲ್ ಅಣ್ಣಪ್ಪ. ಅಣ್ಣಪ್ಪ ಮತ್ತವನ ಸ್ನೇಹಿತ ಸಿಎಂಎಸ್ ಸೆಕ್ಯೂರಿಟಿ ಏಜೆನ್ಸಿಯ ಮಾಜಿ ನೌಕರ ಕ್ಸೇವಿಯರ್ 7 ಕೋಟಿ ರೂ ಲೂಟಿಯ ಸೂತ್ರದಾರರು.

ಇದನ್ನೂ ಓದಿ: 7 ಕೋಟಿ ದರೋಡೆ ಕೇಸ್ನ ಮಾಸ್ಟರ್ ಮೈಂಡ್ ಒಬ್ಬನಲ್ಲ, ಇಬ್ಬರು!: ಪೊಲೀಸಪ್ಪನ ಜೊತೆ ಸಿಎಂಎಸ್ ಮಾಜಿ ಉದ್ಯೋಗಿಯೂ ಲಾಕ್

ರಾಬರಿ ಪ್ಲ್ಯಾನ್ ನಿಂದು, ಎಸ್ಕೇಪ್ ಪ್ಲ್ಯಾನ್ ನಂದು ಅಂತ ದರೋಡೆ ಮಾಡಿಸ್ದೋರ ಪ್ಲ್ಯಾನಿಂಗ್ ಕೈಕೊಟ್ಟಿತ್ತು. ಸದ್ಯ ಇಬ್ಬರನ್ನೂ ಬಂಧಿಸಿದ್ದು, ಒಟ್ಟು 5 ಕೋಟಿ 30 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *