
ಬೆಂಗಳೂರು, ಏಪ್ರಿಲ್ 10: ಇಂದಿನ ದುಬಾರಿ ದುನಿಯಾದಲ್ಲಿ ಎಷ್ಟು ದುಡಿದ್ರೂ ಕಡಿಮೆಯೇ. ಈ ಬೆಂಗಳೂರಿನಲ್ಲಿ (ಬೆಂಗಳೂರು) ತಿಂಗಳಿಗೆ ಲಕ್ಷ ಲಕ್ಷ ರೂ ದುಡಿಯುತ್ತಿದ್ರೂ ಖರ್ಚು ವೆಚ್ಚಗಳಿಗೆ ಲಗಾಮು ಹಾಕದೇ ಇದ್ರೆ ಉಳಿತಾಯ ಮಾಡೋದು ಅಷ್ಟು ಸುಲಭವಲ್ಲ. ಡ್ಯುಯಲ್ಕಮ್ ಹಾಗೂ ಮಕ್ಕಳಿಲ್ಲದ (DINK) ದಂಪತಿ ಬೆಂಗಳೂರಿನಲ್ಲಿ ತಮ್ಮ ತಿಂಗಳ ಖರ್ಚು ವೆಚ್ಚದ ಬಗ್ಗೆ ಹಂಚಿಕೊಂಡರು, ಮಾಸಿಕ ಖರ್ಚು 81,600 ರೂ ಆಗುತ್ತಿದೆ. ದಂಪತಿಯ ತಿಂಗಳ ಖರ್ಚು ವೆಚ್ಚದ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.
@_the_ghosh ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ದಂಪತಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಹೌದು, ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಹಿರಿಯ ಅಸೋಸಿಯೇಟ್-ಸೇಲ್ಸ್ ಆಗಿ ಕೆಲಸ ಮಾಡುತ್ತಿರುವ ಐಶ್ವರ್ಯ ಘೋಷ್ ಮತ್ತು ತನ್ನ ಪತಿ ತಿಂಗಳಿಗೆ ಎಷ್ಟು ಖರ್ಚು ಮಾಡುತ್ತಾರೆ ಎಂದು ವಿವರಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
ಬಾಡಿಗೆ ಮತ್ತು ನಿರ್ವಹಣೆ ವೆಚ್ಚ 29,000 ರೂ, ಬೆಲೆಗಳ ಬಾಡಿಗೆ 2,500 ರೂ, ಮನೆಕೆಲಸಕ್ಕೆ (ಮನೆಕೆಲಸಗಾರ ಸೇರಿದಂತೆ) ಮಾಸಿಕ ಖರ್ಚು 2,800 ರೂ, ವಿದ್ಯುತ್ ಮತ್ತು ನೀರು ತಲಾ 600 ರೂ, ವೈಫೈ 850 ರೂ ಮತ್ತು ಎಲ್ಪಿಜಿ ಆರುಗೊಮ್ಮೆ ರೂ 1,500 ವೆಚ್ಚವಾಗುತ್ತದೆ ಎಂದು ಹೇಳಿದರು. ದಿನಸಿ ಮತ್ತು ಮನೆಯ ಅಡುಗೆಗೆ ಸುಮಾರು 6,000 ರೂ, ಹೊರಗಡೆ ಊಟ ಹಾಗೂ ಫುಡ್ ಆರ್ಡರ್ ಗೆ ಹೆಚ್ಚುವರಿ 4,000 ರೂ ಹಾಗೂ ತಿಂಗಳಿಗೆ ₹ 15,000 ರಜೆಗಾಗಿಯೇ ಮೀಸಲಿಡಲಾಗುತ್ತದೆ.
ಬೈಕ್ ಇಂಧನ ಬೆಲೆ 1,500 ರೂ, ಆಟೋ ಮತ್ತು ಕ್ಯಾಬ್ ಸೇವೆಗೆ 2,000 ರೂ ಮತ್ತು ಮೆಟ್ರೋದಲ್ಲಿ ಪ್ರಯಾಣಿಸಲು 2,500 ರೂ ಎತ್ತಿಡುತ್ತೇವೆ. ಇನ್ನು ಉಳಿದಂತೆ ಸೇರಿದಾಗ 5,000 ರೂ ಕೈಯಲ್ಲಿ ಇಟ್ಟುಕೊಳ್ಳಲಾಗಿದೆ. ಅದರೊಂದಿಗೆ ಶಾಪಿಂಗ್ ಗಾಗಿ 3,000 ರೂ. ಹೀಗಾಗಿ ಒಟ್ಟಾರೆ ತಿಂಗಳ ವೆಚ್ಚಗಳು 81,600 ರೂ ಎಂದು ಹೇಳಿದರೆ ನೀವು ನೋಡಬಹುದು.
ಇದನ್ನೂ ಓದಿ: ಮೈಸೂರ್ ಸಿಲ್ಕ್ ಸೀರೆ ಖರೀದಿಸಲು ಮುಂಜಾನೆ 4 ಗಂಟೆಗೆ ಸರತಿ ಸಾಲಿನಲ್ಲಿ ನಿಂತ ಬೆಂಗಳೂರಿನ ಯುವತಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಸೇರಿದ್ದು, ಒಬ್ಬ ಬಳಕೆದಾರ ಬೆಂಗಳೂರು ದುಬಾರಿ ದುನಿಯಾ ಎಂದರೆ ಮತ್ತೊಬ್ಬರು, ನಾವು ಕೂಡ ಡಿಂಕ್ ದಂಪತಿಗಳು. ನಮ್ಮ ಖರ್ಚು ನೀವು ಹೇಳಿರುವ ಎರಡು ಪಟ್ಟು ಹೆಚ್ಚು. ಬಾಡಿಗೆಯಿಂದ ಪ್ರಾರಂಭ ಎಲ್ಲವೂ ಎರಡು ಪಟ್ಟು ಹೆಚ್ಚು ಎಂದು ಹೇಳಿದರು. ಯಾರಾದರೂ, ಬೆಂಗಳೂರು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ತಮ್ಮ ಅಭಿಪ್ರಾಯ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ