ಬೆಂಗಳೂರು, ಫೆಬ್ರವರಿ 19: ಓದು ಮುಗಿಯುತ್ತಿದ್ದಂತೆ ಬೆಂಗಳೂರಿನತ್ತ (ಬೆಂಗಳೂರು) ಹೆಜ್ಜೆ ಹಾಕುವವರೇ ಹೆಚ್ಚು. ಇಲ್ಲಿ ಒಂದೊಳ್ಳೆ ಕೆಲಸ ಗಿಟ್ಟಿಸಿಕೊಂಡು ಸೆಟಲ್ ಆಗಬೇಕೆನ್ನುವ ಕನಸು ಅನೇಕರದ್ದು. ಆದರೆ ಈ ದುಬಾರಿ ದುನಿಯಾದಲ್ಲಿ ಕೈಯಲ್ಲಿ ಎಷ್ಟು ದುಡ್ಡಿದ್ರೂ ಸಾಲದು. ಇದೇ ರೀತಿ ಅನುಭವ ವ್ಯಕ್ತಿಗೆ ಆಗಿದೆ. ಬೆಂಗಳೂರಿಗೆ ಬಂದ ಒಂದೇ ವಾರಕ್ಕೆ ತಮ್ಮ ಖರ್ಚು ವೆಚ್ಚಗಳನ್ನು ಬಹಿರಂಗ ಪಡಿಸಿದ್ದಾರೆ. ತಿಂಗಳ ಬಾಡಿಗೆ 18 ಸಾವಿರ, ಏಳು ದಿನದ ಊಟಕ್ಕೆ ಸರಿಸುಮಾರು 12 ಸಾವಿರ ರೂ ಖರ್ಚು ಆಯ್ತು ಎಂದು ಹೇಳಿದ್ದಾರೆ. ಈ ವ್ಯಕ್ತಿಯ ಒಂದು ವಾರದ ವೆಚ್ಚದ ಪೋಸ್ಟ್ ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ.
ಪ್ರಾಹಾ (Praha) ಎಂಬ ಬಳಕೆದಾರರ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ, ಬೆಂಗಳೂರಿನಲ್ಲಿ ಒಂದು ವಾರ ಕಳೆದಿದೆ, ತಿಂಗಳ ಬಾಡಿಗೆ 18 ಸಾವಿರ ಹಾಗೂ ಊಟಕ್ಕಾಗಿ 12 ಸಾವಿರ ರೂ. ನಗರ ಜೀವನ ಅಗ್ಗವಾಗಿಲ್ಲ. ನನಗೆ ಹೆಚ್ಚು ಖರ್ಚು ಮಾಡುವ ಅಭ್ಯಾಸವಿಲ್ಲ. ಆದರೆ, ಇಂದಿರಾನಗರ, ಎಚ್‌ಎಸ್‌ಆರ್, ನಗರವನ್ನು ಅನ್ವೇಷಿಸಿದೆ. ಎಚ್‌ಎಸ್‌ಆರ್‌ನಲ್ಲಿ ಉಳಿಯಲಿದ್ದೇನೆ, ಉತ್ತಮವಾದ ಸುಸಜ್ಜಿತ ಫ್ಲಾಟ್ ಮತ್ತು ಎಲ್ಲ ಸವಲತ್ತುಗಳಿವೆ. ಈ ಬೆಂಗಳೂರು ಕೆಲಸ ಮಾಡಲು ಉತ್ತಮ ಸ್ಥಳ, ಬಹಳಷ್ಟು ಜನರು ಇದರಲ್ಲೇ ಒದ್ದಾಡುತ್ತಿದ್ದಾರೆ. ಈ ರೀತಿ ಯಾವತ್ತೂ ನೋಡಿಲ್ಲ ಅಥವಾ ನಿರೀಕ್ಷಿಸಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.
ಪೋಸ್ಟ್ ವೈರಲ್ ಇಲ್ಲಿದೆ
ಬೆಂಗಳೂರಿನಲ್ಲಿ 1 ವಾರ ಪೂರ್ಣಗೊಂಡಿದೆ.
₹18k+ ಬಾಡಿಗೆ ಮತ್ತು ₹12k+ ಆಹಾರದಲ್ಲಿ ಖರ್ಚು ಮಾಡಿದೆ. – ನಗರ ಜೀವನವು ಅಗ್ಗವಾಗಿಲ್ಲ, ಮತ್ತು ನನಗೆ ಉತ್ತಮ ಖರ್ಚು ಮಾಡುವ ಅಭ್ಯಾಸವೂ ಇಲ್ಲ.
ಇಂದಿರಾನಗರ, ಎಚ್‌ಎಸ್‌ಆರ್, ಎಲೆಕ್ಟ್ರಾನಿಕ್ ಸಿಟಿಯನ್ನು ಪರಿಶೋಧಿಸಲಾಯಿತು. – ಎಚ್‌ಎಸ್‌ಆರ್‌ನಲ್ಲಿ ಉಳಿಯಲಿದ್ದೇನೆ, ಉತ್ತಮವಾದ ಸಂಪೂರ್ಣ ಸುಸಜ್ಜಿತ ಫ್ಲಾಟ್ ಅನ್ನು ಪಡೆದುಕೊಂಡಿದ್ದೇನೆ ಮತ್ತು ನಡೆಯಬಹುದಾದ ಎಲ್ಲವೂ ಲಭ್ಯವಿದೆ…
— ಪ್ರಾಹಾ (@Praha37v) ಫೆಬ್ರವರಿ 17, 2026
ಇದನ್ನೂ ಓದಿ: ನವವಿವಾಹಿತ ಜೋಡಿಯನ್ನು ಕಂಡೊಡನೆ ಶುಭಾಶಯ ಕೋರಿದ ಶಾಲಾ ಬಸ್ಸಿನಲ್ಲಿದ್ದ ಪುಟಾಣಿಗಳು
ಫೆಬ್ರವರಿ 17 ರಂದು ಹಂಚಿಕೊಂಡಿದ್ದಾರೆ ಈ ಪೋಸ್ಟ್ ಹದಿನಾರು ಸಾವಿರ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, 18 ಸಾವಿರ ರೂಗೆ ಸುಸಜ್ಜಿತ ಪ್ಲಾಟ್ ಅನ್ನು ಹೇಗೆ ಕಂಡುಕೊಂಡಿದೆ ಎಂದು ಕಾಮೆಂಟ್ ಮಾಡಿದೆ. ಇತರರು, ನಗರ ಜೀವನ ದುಬಾರಿಯಾಗಿವೆ, ಆದರೆ ಅವಕಾಶಗಳು ಹೇರಳವಾಗಿರುವವು. ಮತ್ತೊಬ್ಬರು, ಎಚ್‌ಎಸ್‌ಆರ್‌ನಲ್ಲಿ ರಿಯಲ್ ಎಸ್ಟೇಟ್ ತುಂಬಾ ದುಬಾರಿಯಾಗಿದೆ. ನೀವು ಬೊಮ್ಮನಹಳ್ಳಿ ಅಥವಾ ಜಿಬಿ ಪಾಳ್ಯದಲ್ಲಿ ಮನೆ ಹುಡುಕಿದರೆ ಒಳ್ಳೆಯದಿತ್ತು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ