
ಬೆಂಗಳೂರು, ಮಾರ್ಚ್ 19: ವಿವಾಹಿತ ಮಹಿಳೆಯನ್ನು ಯುವಕನೋರ್ವ ಡ್ಯಾಗರ್ ನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರಿನ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಫಿರ್ದೋಸ್ ಬಾನು ಕೊಲೆಯಾದ ಎರಡು ಮಕ್ಕಳ ತಾಯಿ. ಹಫೀಸ್ ಎಂಬಾತನಿಂದ ಕೃತ್ಯವೆಸಗಲಾಗಿದೆ. ಆಟೋಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿರುವ ಹಫೀಸ್, ಕೆಲ ತಿಂಗಳಿಂದ ಫೀರ್ಡೋಸ್ ಬಾನು ಹಿಂದೆ ಬಿದ್ದಿದ್ದ. ತನ್ನನ್ನು ಲವ್ ಮಾಡುವಂತೆ ಕಾಟ ಕೊಡುತ್ತಿದ್ದ. ಹಫೀಸ್ ಕಾಟ ತಾಳಲಾರದೆ ಫಿರ್ದೋಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಫೀಸ್‌ಗೆ ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿ ಕಳಿಸಿದ್ದರು. ಕೆಲ ದಿನ ಸುಮ್ಮನಿದ್ದು ಮತ್ತೆ ಹಿಂದೆ ಬಿದ್ದಿದ್ದ. ಆದರೆ ಹಫೀಸ್ನನ್ನು ಫೀರ್ದೋಸ್ ಅವಾಯ್ಡ್ ಮಾಡಲಾಗಿದೆ. ಇಂದು ಮಧ್ಯಾಹ್ನ 2ಗಂಟೆಗೆ ಕೆಲಸ ಮಾಡಲು ಬಂದಿದ್ದ ಹಫೀಸ್, ಈ ವೇಳೆ ಜಗಳ ತೆಗೆದು ಫಿರ್ದೋಸ್ ಬಾನುಗೆ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಚಂದ್ರಾಲೇಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಮಹಿಳೆ ಸಂಬಂಧಿ ಘಟನೆ ಬಗ್ಗೆ ಮಾಹಿತಿ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.