
ಬೆಂಗಳೂರು, ಏಪ್ರಿಲ್ 09: ಹೆಣ್ಣಿನ ಅಂದ ಚಂದವನ್ನು ಹೆಚ್ಚಿಸುವುದೇ ಈ ಸೀರೆ . ಎಷ್ಟೇ ಫ್ಯಾಷನ್, ಟ್ರೆಂಡಿ ಉಡುಗೆಗಳು ಬಂದರೂ ಸೀರೆಯ ಕ್ರೇಜ್ ಮಾತ್ರ ಕಡಿಮೆಯಾಗುವುದಿಲ್ಲ. ಅದರಲ್ಲೂ ಮೈಸೂರು ಸಿಲ್ಕ್ ಸೀರೆಗೆ ಎಲ್ಲಿಲ್ಲದ ಬೇಡಿಕೆಯಿದೆ. ಹೀಗಾಗಿ ತುಂಬಾ ದುಬಾರಿಯಾದ್ರು ಈ ಸೀರೆಯನ್ನು ಖರೀದಿಸದೇ ಇರಲಾರರು. ಬೆಂಗಳೂರಿನಲ್ಲಿ (ಬೆಂಗಳೂರು) ಕೆಎಸ್‌ಐಸಿ (KSIC) ಮೈಸೂರು ಸಿಲ್ಕ್ ಸೀರೆಗಾಗಿ ಯುವತಿಯೂ ಬೆಳಗಿನ ಜಾವ 4 ಗಂಟೆಗೆ 6 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ಸೀರೆ ಖರೀದಿಸಿದ ಘಟನೆ ವೈರಲ್ ಆಗಿದೆ. ಈ ವೇಳೆ ತಮಗಾದ ಅನುಭವವನ್ನು ಯುವತಿ ಹಂಚಿಕೊಂಡರು ಈ ಸೀರೆಗೆ ಎಷ್ಟು ಕ್ರೇಜ್ ಇದೆ ಎಂದು ವಿವರಿಸಿದ್ದಾರೆ. ಈ ವಿಡಿಯೋ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.
sona_sebin ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಯುವತಿಯೂ, ಜಯನಗರದಲ್ಲಿರುವ ಕೆಎಸ್ ಐಸಿ ಮೈಸೂರು ಸಿಲ್ಕ್ಸ್ ಮಳಿಗೆಗೆ ಬೆಳಗಿನ ಜಾವ ಭೇಟಿ ನೀಡಿ ದಾಖಲು ಮಾಡಿದ್ದಾರೆ. ಮೈಸೂರು ಸಿಲ್ಕ್ ಸೀರೆಗಾಗಿ ಬೆಳಗ್ಗೆ 4 ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಂತಿರುವ ಬಗ್ಗೆ ಹೇಳಿದ್ದಾರೆ. ಅದಲ್ಲದೇ, ಸೀರೆ ಖರೀದಿಸಲು ಮಹಿಳೆಯರು ಬೆಳಗಿನ ಜಾವ 3-4 ಗಂಟೆಗೆ ಬಂದು ಟೋಕನ್ ಪಡೆಯಲು ಗಂಟೆಗಟ್ಟಲೆ ಕಾಯುತ್ತಿರುವುದನ್ನು ತೋರಿಸಿದ್ದಾರೆ. ಕಾಫಿ ಕುಡಿಯಲು ಸ್ವಲ್ಪ ಹೊತ್ತು ಹೊರಗೆ ಹೋದ ನಂತರ, ಹಿಂತಿರುಗಿ ಬಂದಾಗ ಈ ಪಟ್ಟಿಗೆ 53 ಹೆಸರುಗಳು ಸೇರ್ಪಡೆಯಾಗಿವೆ ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಶೋರೂಮ್ ಮುಂದೆ ಸರತಿ ಸಾಲಿನಲ್ಲಿ ನಿಂತಿರುವ ಜನರನ್ನು ಮಾತನಾಡಿಸಿದ್ದು, ಒಬ್ಬ ಮಹಿಳೆ ಬೆಳಗಿನ ಜಾವ 3 ಗಂಟೆಗೆ ಬಂದಿದ್ದಾರೆ ಎಂದು ಹೇಳಿದ್ದಾರೆ, ಒಬ್ಬ ವ್ಯಕ್ತಿ ಹಿಂದಿನ ರಾತ್ರಿ 9 ಗಂಟೆಗೆ ಬಂದಿದ್ದಾಗಿ ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
ನನಗೆ ಇದನ್ನು ನಂಬಲಾಗುತ್ತಿಲ್ಲ
pic.twitter.com/tlt8blZOGK
– ಸೋನಾ
(@ಸೋನಾ_ಸೆಬಿನ್) ಏಪ್ರಿಲ್ 8, 2026
ಆ ಬಳಿಕ ಈ ಯುವತಿಯೂ, ಅಂಗಡಿ ಬೆಳಿಗ್ಗೆ 10-10:30 ರ ಸುಮಾರಿಗೆ ಮಾತ್ರ ತೆರೆಯುತ್ತದೆ. ಒಮ್ಮೆ 10 ಜನರಿಗೆ ಮಾತ್ರ ಪ್ರವೇಶವಿದ್ದು, ಕೇವಲ 10 ನಿಮಿಷಗಳಲ್ಲಿ ಸೀರೆ ಆರಿಸಬೇಕು. ಒಂದು ಟೋಕನ್‌ಗೆ ಒಂದು ಸೀರೆ ಮಾತ್ರ ಸಿಗುತ್ತದೆ. ಮೈಸೂರು ಸಿಲ್ಕ್ ಸೀರೆಗಳ ಬೆಲೆ 23,000 ರೂನಿಂದ 2.5 ಲಕ್ಷ ರೂವರೆಗೆ ಇರುತ್ತದೆ ಎಂದು ಹೇಳುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ: ನಿರ್ಮಾಣದ ಹೆಸರಿನಲ್ಲಿ ಹದಗೆಟ್ಟ ಬೆಂಗಳೂರು; ವರ್ಷಗಳ ಬಳಿಕ ನಗರಕ್ಕೆ ಮರಳಿದ ವ್ಯಕ್ತಿ ಹೀಗೆಂದಿದ್ದೇಕೆ?
ಈ ವಿಡಿಯೋ ನಾಲ್ಕೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ಹೆಣ್ಮಕ್ಕಳಿಗೆ ಸೀರೆ ಕ್ರೇಜ್ ಎಷ್ಟಿದೆ ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದರೆ, ಮತ್ತೊಬ್ಬರು, ಒಂದು ಸೀರೆ ಖರೀದಿಸಲು ಇಷ್ಟು ಕಷ್ಟ ಪಡಬೇಕಾ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ಎಲ್ಲಾ ಸೀರೆ ಮಹಿಮೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

(@ಸೋನಾ_ಸೆಬಿನ್)