ಬೆಂಗಳೂರು ಏರ್​​ಪೋರ್ಟ್​​​ನಲ್ಲಿ 38.60 ಕೋಟಿ ರೂ ಮೌಲ್ಯದ ಕೊಕೇನ್ ವಶಕ್ಕೆ

ಬೆಂಗಳೂರು ಏರ್​​ಪೋರ್ಟ್​​​ನಲ್ಲಿ 38.60 ಕೋಟಿ ರೂ ಮೌಲ್ಯದ ಕೊಕೇನ್ ವಶಕ್ಕೆ


ಅಧಿಕಾರಿಗಳು ವಶಕ್ಕೆ ಪಡೆದಿರುವ ಕೊಕೇನ್

ದೇವನಹಳ್ಳಿ, ಜನವರಿ 22: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ 38.60 ಕೋಟಿ ರೂ ಮೌಲ್ಯದ 7.72 ಕೆ.ಜಿ. ಬ್ರೆಜಿಲ್ನ ಸೌಪಾಲೊ ಏರ್ಪೋರ್ಟ್ನಿಂದ ಕೆಐಎಬಿಗೆ ಬಂದಿದ್ದ ವ್ಯಕ್ತಿ, ಮಕ್ಕಳ ಕಥೆ ಪುಸ್ತಕಗಳ ಮಾದರಿಯಲ್ಲಿ ಡ್ರಗ್ಸ್ ಅಡಗಿಸಿ ಸಾಗಾಟಕ್ಕೆ ಯತ್ನಿಸಿದ್ದಾನೆ. ಅನುಮಾನಗೊಂಡು ಲಗೇಜ್ ಬ್ಯಾಗ್ ಪರಿಶೀಲನೆ ನಡೆಸಿದಾಗ ಡ್ರಗ್ಸ್ ಪತ್ತೆ ಆಗಿದೆ.

ಬ್ರೆಜಿಲ್ನ ಸೌಪಾಲೊ ಏರ್‌ಪೋರ್ಟ್‌ನಿಂದ ಕೆಐಎಬಿಗೆ ಬಂದಿದ್ದ ಪ್ರಯಾಣಿಕ ಲಗೇಜ್ ಬ್ಯಾಗ್‌ನಲ್ಲಿ ಮಕ್ಕಳ ಕಥೆ ಪುಸ್ತಕಗಳ ಪುಸ್ತಕಗಳ ರಾಟ್ ಅಡಿಯಲ್ಲಿ ಡ್ರಗ್ಸ್ ಇಡಲಾಗಿದೆ. ಅನುಮಾನಗೊಂಡ ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಲಗೇಜ್ ಬ್ಯಾಗ್ ಪರಿಶೀಲನೆ ನಡೆಸಿದಾಗ ಡ್ರಗ್ಸ್ ಪತ್ತೆ ಆಗಿದೆ.

ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ಗೆ ಬಂದವನ ಬ್ಯಾಗ್‌ನಲ್ಲಿದ್ದವು ಹಾವುಗಳು, ಸರಿಸೃಪಗಳು!

ಈ ಡ್ರಗ್ಸ್ ಅಡಗಿಸಿ ಸಾಗಾಟಕ್ಕೆ ಯತ್ನಿಸಿದ್ದ ಪ್ರಯಾಣಿಕನನ್ನು ಇದೀಗ ವಶಕ್ಕೆ ಪಡೆದಿರುವ ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ತನಿಖಾ ದಳ. ಜೊತೆಗೆ 38.60 ಕೋಟಿ ರೂ ಮೌಲ್ಯದ 7.72 ಕೆಜಿ ಕೊಕೇನ್‌ಗಳನ್ನು ಪಡೆದುಕೊಂಡಿದ್ದಾರೆ.

35 ವಿವಿಧ ಬಗೆಯ ವನ್ಯ ಜೀವಿಗಳು ವಶಕ್ಕೆ: ಮೂವರು ಪ್ರಯಾಣಿಕರ ಬಂಧನ

ಬ್ಯಾಂಕಾಕ್‌ನಿಂದ ಅಕ್ರಮವಾಗಿ ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 35 ಬಗೆಯ ವನ್ಯ ಜೀವಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಥಾಣದ ಟರ್ಮಿನಲ್ 2ಕ್ಕೆ ಬ್ಯಾಂಕಾಕ್ ನಿಂದ ಮೂವರು ಪ್ರಯಾಣಿಕರು ಆಗಮಿಸಿದ್ದರು.

ಇದನ್ನೂ ಓದಿ: ದುಬೈಯಿಂದ 3.44 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ: ರನ್ಯಾ ಬಂಧನದ ಮರುದಿನವೇ ಅಂಧ ವ್ಯಕ್ತಿ ಬಂಧನ

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್ ಪರಿಶೀಲನೆ ವೇಳೆ ಲಗೇಜ್‌ನಲ್ಲಿ ವನ್ಯಜೀವಿಗಳ ಪೆತ್ತೆ, ಯಾವುದಾದರೂ ಸೂಕ್ತ ದಾಖಲೆಗಳನ್ನು ತೋರಿಸಿಲ್ಲ. ಹೀಗಾಗಿ ವನ್ಯ ಜೀವಿಗಳ ಸಂರಕ್ಷಣಾ ಕಾಯ್ದೆ ಹಾಗೂ ಕಸ್ಟಮ್ ಕಾಯ್ದೆ ಅಡಿ ಮೂವರು ಆರೋಪಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ವನ್ಯ ಜೀವಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *