ಬೆಂಗಳೂರು, ಜ.8: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (ಬೆಂಗಳೂರು ವಿಮಾನ ನಿಲ್ದಾಣ) ಟ್ಯಾಕ್ಸಿಗಳಿಗೆ ನಿರ್ಬಂಧ ವಿಧಿಸಿರುವ ಬಗ್ಗೆ ಸಾರಿಗೆ ಸಚಿವರಿಗೆ ಚಾಲಕರು ದೂರು ನೀಡಿದ್ದಾರೆ. ಇದೀಗ ದೂರಿನ ಸೇವೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದರು. ವಿಮಾನ ನಿಲ್ಥಾಣದ ಟರ್ಮಿನಲ್ 1ರ ಪಿಕಪ್ ಪಾಯಿಂಟ್‌ನಲ್ಲಿ ಕಳೆದ ಡಿಸೆಂಬರ್ 11 ರಿಂದ ಹಳದಿ ಬೋರ್ಡ್ ಕ್ಯಾಬ್‌ಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಹೀಗಾಗಿ ವಿಮಾನ ನಿಲ್ದಾಣದ ಈ ಹೊಸ ರೂಲ್ಸ್ ನಿಂದ ಟ್ಯಾಕ್ಸಿ ಚಾಲಕರಿಗೆ ಸಂಕಷ್ಟ ಎದುರಾಗಿದೆ. ಎಂದಿನಂತೆ ಪಿಕಪ್ ಪಾಯಿಂಟ್ ಗೆ ಅನುಮತಿ ಕೊಡಿಸುವಂತೆ ಚಾಲಕರು ಸಾರಿಗೆ ಸಚಿವರ ಮೊರೆ ಹೋಗಿದ್ದರು. ಇನ್ನು ಚಾಲಕರ ಮನವಿ ಹಿನ್ನಲೆಯಲ್ಲಿ ಸಚಿವರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ವೇಳೆ ಈ ಪಾರ್ಕಿಂಗ್ ಸ್ಥಳಗಳಲ್ಲಿ ಪರಿಶೀಲನೆ. ಈ ವೇಳೆ ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಟರ್ಮಿನಲ್ ನಿಂದ ಟ್ಯಾಕ್ಸಿ ಚಾಲಕರಿಗೆ ನೀಡಿರುವ ಪಿಕಪ್ ಪಾಯಿಂಟ್ ದೂರವಿದ್ದು ಪ್ರಯಾಣಿಕರು ಬರಲು ಕಷ್ಟವಾಗುತ್ತೆ ಮೊದಲು ಇದ್ದಲ್ಲಿ ಅವರಿಗೂ ಅವಕಾಶ ನೀಡಬಹುದಲ್ವಾ ಎಂದು ಹೇಳಿದ್ದಾರೆ. ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಸ್ಥಳೀಯ ಟ್ಯಾಕ್ಸಿ ಚಾಲಕರಿಗೆ ಅನ್ಯಾಯ ಮಾಡಲು ಹೊರಟಿದ್ದು ಸರಿಯಲ್ಲ ಎಂದು ಅಸಮಧಾನ ಹೊರ ಹಾಕಿದರು. ಟರ್ಮಿನಲ್ 1ರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕೂಡ 14 ಇದ್ದ ಬಸ್ಸುಗಳನ್ನು 7ಕ್ಕೆ ಇಳಿಸಿದ ಸಾರ್ವಜನಿಕರಿಗೆ ತೊಂದರೆ ಆಗುತ್ತಿಲ್ವಾ? ಎಂದು ಏರ್ಪೋಟ್ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ