ಬೆಂಗಳೂರು, ಅ.27: ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಆಟೋವೊಂದು ಟೇಕ್ (ಬೆಂಗಳೂರು ಆಟೋ ಅಪಘಾತ) ಮಾಡಲು ಹೋಗಿ, ಮಗುಚಿ ಬಿದ್ದ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಆಟೋ ರಿಕ್ಷಾವೊಂದು ವೇಗವಾಗಿ ಹೋಗುತ್ತಿದ್ದ ಟ್ರಕ್ ಬದಲಿಗೆ ಟೇಕ್ ಮಾಡಲು ಹೋಗಿ ಪಲ್ಟಿಯಾಗಿದೆ. ವಿಡಿಯೋವನ್ನು ನೋಡಿ ಸೋಶಿಯಲ್ ಮೀಡಿಯಾ ಬಳಕೆದಾರರು ಕಮೆಂಟ್ ಮಾಡಿದ್ದು, ಬೆಂಗಳೂರಿನಲ್ಲಿ ಇಂತಹ ಅನೇಕ ಘಟನೆಗಳು ನಡೆಯುತ್ತಿವೆ. ಇದಕ್ಕೆ ಚಾಲಕರ ಅಜಾಗರೂಕತೆಯೇ ಕಾರಣ ಎಂದು ಹೇಳಿದ್ದಾರೆ.
ಇನ್ನು ಈ ಘಟನೆಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಆಟೋರಿಕ್ಷಾ ಹೊಸೂರು ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಟ್ರಕ್ ಅನ್ನು ಓವರ್ ಟೇಕ್ ಮಾಡಲು ಹೋಗಿ, ಸ್ಕಿಡ್ ಆಗಿ ಮಗುಚಿ ಬಿದ್ದಿದೆ. ಈ ಅಪಘಾತದಿಂದ ಯಾವುದೇ ಸಾವು-ನೋವು ಆಗಿಲ್ಲ, ಚಾಲಕನಿಗೆ ಸಣ್ಣ-ಪುಟ್ಟ ಗಾಯ ಎಂದು ಹೇಳಲಾಗಿದೆ. ವೈರಲ್ ಆಗಿರುವ ಪೋಸ್ಟ್ನಲ್ಲಿ ಹೀಗೆ ವಿವರಿಸಲಾಗಿದೆ. ‘ಆಟೋವೊಂದು ವೇಗವಾಗಿ ಹೋಗಿ ಲಾರಿಯನ್ನುಓವರ್ ಟೇಕ್ ಮಾಡಿದೆ. ಈ ವೇಳೆ ಆಟೋ ಚಾಲಕ ಬ್ರೇಕ್ ಹಾಕಿದ್ದಾನೆ. ಈ ವೇಳೆ ಆಟೋ ನಿಯಂತ್ರಣ ಕಳೆದುಕೊಂಡು, ರಸ್ತೆಯಲ್ಲಿ ಪಲ್ಟಿಯಾಗಿ, ಆಟೋ ಚಾಲಕನ ಮೇಲೆ ಬಿದ್ದಿದೆ. ಚಾಲಕನಿಗೆ ಯಾವುದೇ ಗಂಭೀರ ಗಾಯಗಳು ಆಗಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋದ ಇಯರ್ ಫೋನ್ ಅನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬೆಂಗಳೂರಿನ ಆಟೋ ಚಾಲಕ!
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಯಾರದು ತಪ್ಪು ??? ಬೆಂಗಳೂರಿನಲ್ಲಿ ಅಜಾಗರೂಕತೆಯಿಂದ ಓವರ್ಟೇಕ್ ಮಾಡುವ ಯತ್ನದ ನಂತರ ಆಟೋ ರಿಕ್ಷಾ ಪಲ್ಟಿಯಾಗಿದೆ
ಅತಿವೇಗದಲ್ಲಿ ಲಾರಿಯನ್ನು ಹಿಂದಿಕ್ಕಲು ಯತ್ನಿಸಿದ ಆಟೋ ರಿಕ್ಷಾ ಪಲ್ಟಿಯಾಗಿ ಅಪಘಾತ ಸಂಭವಿಸಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ರಿಕ್ಷಾ ವೇಗವಾಗಿ ಚಲಿಸುತ್ತಿತ್ತು ಮತ್ತು ಓವರ್ಟೇಕ್ ಮಾಡುವ ಪ್ರಯತ್ನದ ಸಮಯದಲ್ಲಿ… pic.twitter.com/1Kd6ynttf4
— ಕರ್ನಾಟಕ ಪೋರ್ಟ್ಫೋಲಿಯೋ (@karnatakaportf) ಅಕ್ಟೋಬರ್ 26, 2025
ಈ ವೀಡಿಯೊವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, 2000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ವಿಡಿಯೋ ನೋಡಿ ಹಲವು ಸೋಶಿಯಲ್ ಮೀಡಿಯಾ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಬಳಕೆದಾರ, ಎಲಿವೇಟ್ ರಸ್ತೆಯಲ್ಲಿ ಒಬ್ಬ ಆಟೋಗಳು ಮತ್ತು ಬೈಕ್ಗಳನ್ನು ಅನುಮತಿಸಬಾರದು. ಏಕೆಂದರೆ ಇಂತಹ ಅನಾಹುತಗಳಿಗೆ ಕಾರಣ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಇಂತಹ ಘಟನೆಯನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ನೋಡಿದ್ದೇನೆ. ಒಬ್ಬ ಆಟೋ ಚಾಲಕ ವೇಗವಾಗಿ ಬಂದು ಯು-ಟರ್ನ್ ತೆಗೆದುಕೊಳ್ಳಲು ಹೋಗ ಪಲ್ಟಿಯಾಗಿ ಬಿದ್ದಿದ್ದಾನೆ ಎಂದು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ