ಬೆಂಗಳೂರು: 10 ನಿಮಿಷ ಕಾಯಿಸಿದ್ದಕ್ಕೆ ಮಹಿಳೆ ಮತ್ತು ಆಟೋ ಚಾಲಕನ ನಡುವೆ ಬಿಗ್​​ ಫೈಟ್

ಬೆಂಗಳೂರು: 10 ನಿಮಿಷ ಕಾಯಿಸಿದ್ದಕ್ಕೆ ಮಹಿಳೆ ಮತ್ತು ಆಟೋ ಚಾಲಕನ ನಡುವೆ ಬಿಗ್​​ ಫೈಟ್


ಬೆಂಗಳೂರು, ಅ.30: ಬೆಂಗಳೂರಿನಲ್ಲಿ ಆಟೋ ಚಾಲಕರು (ಬೆಂಗಳೂರು ವಾಹನ ವಿವಾದ) ಹಾಗೂ ಪ್ರಯಾಣಿಕರ ನಡುವೆ ಕಿರಿಕಿರಿ ಮಾಡಿಕೊಳ್ಳುವ ಅದೆಷ್ಟೋ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ವೈರಲ್ ಆಗುತ್ತಿದೆ. ಇದೀಗ ಇಲ್ಲೊಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಇಲ್ಲಿ ಯಾರದು ತಪ್ಪು ಎಂದು ನಿರ್ಧಾರ ಮಾಡಬೇಕಾಗಿದೆ. ಚಾಲಕ ಮತ್ತು ಮಹಿಳೆಯ ನಡುವೆ ಕಾಯುವ ವಿಚಾರದಲ್ಲಿ ಜಗಳ ನಡೆದಿದೆ ಎಂದು ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದು, ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿರುವ ವೀಡಿಯೊದ ಪ್ರಕಾರ, ಮಹಿಳೆಯೊಬ್ಬರು ಆಯಪ್‌ನಲ್ಲಿ ಆಟೋ ಬುಕ್ ಮಾಡಿದ್ದಾರೆ. ಆಟೋ ಮಹಿಳೆಯ ಮನೆಗೆ ಬಂದ ನಂತರ ಚಾಲಕ ಫೋನ್ ಮಾಡಿ, ಮೇಡಂ ನಾನು ಲೊಕೇಶನ್‌ನಲ್ಲಿ ಇದ್ದೇನೆ ಎಂದು ಹೇಳಿದರು. ಅದಕ್ಕೆ ಮಹಿಳೆ ಎಸ್.. ಸರ್ ಬಂದೆ, ಮನೆಗೆ ಬೀಗ ಹಾಕುತ್ತಿದ್ದೇನೆ ಎಂದು ಹೇಳಿದ್ದಾರೆ. 10 ನಿಮಿಷವಾದ್ರೂ ಮಹಿಳೆಯ ಪತ್ತೆ ಇಲ್ಲ. 10 ನಿಮಿಷದ ನಂತರ ಮಹಿಳೆ ಆಟೋ ಬಳಿ ಬಂದಿದ್ದಾರೆ. ಆಟೋ ಚಾಲಕ ಮೇಡಂ ನನ್ನನ್ನು ಕಾಯಿಸಿದಕ್ಕಾಗಿ ಹೆಚ್ಚುವರಿ ಪಾವತಿ ಮಾಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಮಹಿಳೆ ಒಪ್ಪಿಲ್ಲ, ಈ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ.

ಇನ್ನು ಮಹಿಳೆ ನಾನು ಯಾವುದೇ ಕಾರಣಕ್ಕೂ ಹೆಚ್ಚಿನ ಪಾವತಿಯನ್ನು ನೀಡುತ್ತೇನೆ, ಬೇಕಿದ್ರೆ ನೀವೇ ಬುಕಿಂಗ್ ಕ್ಯಾನ್ಸಲ್ ಮಾಡಬೇಕೆಂದು ಹೇಳಿದರು. ಇದಕ್ಕೆ ಆಟೋ ಚಾಲಕ ನಾನು ಯಾಕೆ ರದ್ದು ಮಾಡಬೇಕು, ನೀವೇ ಮಾಡಬೇಕೆಂದು ಇಬ್ಬರು ವಾದಿಸಿದ್ದಾರೆ. ಕೊನೆಗೆ ಇಬ್ಬರು ಈ ವಾದವನ್ನು ನಿಲ್ಲಿಸಿದ್ದಾರೆ. ಈ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗಳು ಕಂಡುಬಂದಿದ್ದು, ಬಳಕೆದಾರರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ಬ್ರಿಟನ್ ರಾಜ – ರಾಣಿ, ಇದೊಂದು ಸುಂದರ ಕ್ಷಣ ಎಂದ ಜನ

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಕೆಲವು ಬಳಕೆದಾರರು ಚಾಲಕನ ಪರ ನಿಂತಿದ್ದಾರೆ. ಅವರ ಸಮಯಕ್ಕೆ ಬೆಲೆ ಇದೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವು ಬಳಕೆದಾರರು, ಇದೊಂದು ಸಂವಹನ ಮತ್ತು ನಮ್ಯತೆ ಕೆಲಸದ ಭಾಗವಾಗಿದೆ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರ 10 ನಿಮಿಷಗಳ ಕಾಲ ಕಾಯುವಂತೆ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ನಾನು ಮನೆಯಿಂದ ಹೊರಟ ನಂತರವೇ ನಾನು ಆಟೋ ಬುಕ್ ಮಾಡುವುದು, ಯಾವ ಕಾರಣಕ್ಕೆ ಮತ್ತೊಬ್ಬರನ್ನು ಕಾಯಿಸಬಾರದು ಎಂದು ಹೇಳಿದರು.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *