Headlines

ಕುಡಿದ ಅಮಲಿನಲ್ಲಿ ಕಿರಿಕ್: ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್

ಕುಡಿದ ಅಮಲಿನಲ್ಲಿ ಕಿರಿಕ್: ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್


ಬೆಂಗಳೂರು,ಡಿ.16: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾರೆ. ಬೆಂಗಳೂರಿನ ಆನೇಕಲ್ ನ ಮಾರುತಿ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಈ ಘಟನೆ ನಡೆದಿದೆ. ಬಾರ್‌ಗೆ ಕುಡಿಯಲು ಬಂದಿದ್ದ, ಪ್ರಕಾಶ್ ಎಂಬುವವರ ಮೇಲೆ ಇನ್ನೊಂದು ಟೇಬಲ್‌ನಲ್ಲಿದ್ದ ಮೂವರು ಏಕಾಏಕಿ ಬಂದು ಪ್ರಕಾಶ್ ಮೇಲೆ ದಾಳಿ ಮಾಡಿದ್ದಾರೆ. ನಂತರ ಅಲ್ಲಿಂದ ಈ ಗ್ಯಾಂಗ್ ಪರಾರಿಯಾಗಿದೆ. ಇನ್ನು ಬಾಟಲಿಯಿಂದ ತಲೆಗೆ ಹೊಡೆದ ಪರಿಣಾಮ ವಿಪರೀತ ರಕ್ತ ಬಂದಿದೆ. ಗಾಯಾಳು ಪ್ರಕಾಶ್ ಅವರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪ್ರಕರಣಕ್ಕೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದಾಳಿ ಮಾಡಲು ಕಾರಣ ಏನು ಎಂಬ ಬಗ್ಗೆ ತಿಳಿದು ಬಂದಿಲ್ಲ. ಬಾರ್ನ ಇತರ ಗ್ರಾಹಕರು ಹೇಳಿರುವ ಪ್ರಕಾರ, ಚಿಕ್ಕ ಕಿರಿಕಿರಿ ಆಗಿದೆ, ಆ ಕಾರಣಕ್ಕೆ ಪ್ರಕಾಶ್ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *