ಭಾರತೀಯ ಸೇನೆಯ ಬಲಿಷ್ಠ ಯುದ್ಧ ಟ್ಯಾಂಕ್‌ಗಳ ಕಾರ್ಯಕ್ಷಮತೆ ಹೆಚ್ಚಿಸಿದ ಬೆಂಗಳೂರಿನ ಆಲ್ಫಾ-ಎಲ್ಸೆಕ್‌ ಸಂಸ್ಥೆ!

ಭಾರತೀಯ ಸೇನೆಯ ಬಲಿಷ್ಠ ಯುದ್ಧ ಟ್ಯಾಂಕ್‌ಗಳ ಕಾರ್ಯಕ್ಷಮತೆ ಹೆಚ್ಚಿಸಿದ ಬೆಂಗಳೂರಿನ  ಆಲ್ಫಾ-ಎಲ್ಸೆಕ್‌ ಸಂಸ್ಥೆ!

ಭಾರತೀಯ ಸೇನೆಯ ಬಲಿಷ್ಠ ಯುದ್ಧ ಟ್ಯಾಂಕ್‌ಗಳ ಕಾರ್ಯಕ್ಷಮತೆ ಹೆಚ್ಚಿಸಿದ ಬೆಂಗಳೂರಿನ  ಆಲ್ಫಾ-ಎಲ್ಸೆಕ್‌ ಸಂಸ್ಥೆ!

ಬೆಂಗಳೂರು ಮೂಲದ ಆಲ್ಫಾ-ಎಲ್ಸೆಕ್ ಸಂಸ್ಥೆಯು ಭಾರತೀಯ ಸೇನೆಯ 96 ಟಿ-72 ಯುದ್ಧ ಟ್ಯಾಂಕ್‌ಗಳಿಗೆ ‘ಥರ್ಮಲ್ ಇಮೇಜಿಂಗ್ ಫೈರ್ ಕಂಟ್ರೋಲ್ ಸಿಸ್ಟಮ್’ ಅನ್ನು ಯಶಸ್ವಿಯಾಗಿ ಅಳವಡಿಸಿದೆ. ಈ ತಂತ್ರಜ್ಞಾನವು, ರಾತ್ರಿಯ ಸಮಯದಲ್ಲಿಯೂ ಚಲಿಸುವ ಗುರಿಗಳನ್ನು ಪತ್ತೆಹಚ್ಚಿ ನಿಖರವಾಗಿ ದಾಳಿ ಮಾಡುವ ಸಾಮರ್ಥ್ಯ ನೀಡುತ್ತದೆ.

ಭಾರತೀಯ ಸೇನೆಯ ಬಲಿಷ್ಠ ಟಿ-72 (T-72) ಯುದ್ಧ ಟ್ಯಾಂಕ್‌ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರು ಮೂಲದ ‘ಆಲ್ಫಾ-ಎಲ್ಸೆಕ್ ಡಿಫೆನ್ಸ್ & ಏರೋಸ್ಪೇಸ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ (Alpha-Elsec) ರಕ್ಷಣಾ ಸಂಸ್ಥೆಯು ತನ್ನ ತಂತ್ರಜ್ಞಾನದ ಮೂಲಕ ಬಲ ತುಂಬಿದೆ.

ಸೇನೆಯ 96 ಟಿ-72 ಟ್ಯಾಂಕ್‌ಗಳಿಗೆ ಅತ್ಯಾಧುನಿಕ ‘ಥರ್ಮಲ್ ಇಮೇಜಿಂಗ್ ಫೈರ್ ಕಂಟ್ರೋಲ್ ಸಿಸ್ಟಮ್’ (TIFCS) ಅಳವಡಿಸುವ ಕಾರ್ಯವನ್ನು ಕಂಪನಿಯು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಈ ಹೊಸ ತಂತ್ರಜ್ಞಾನವು ಯುದ್ಧ ಟ್ಯಾಂಕ್‌ಗಳಿಗೆ ರಾತ್ರಿಯ ಸಮಯದಲ್ಲಿ ನಿಖರವಾಗಿ ಗುರಿ ಗುರುತಿಸಲು ಮತ್ತು ದಾಳಿ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆಟೋಮ್ಯಾಟಿಕ್ ಟಾರ್ಗೆಟ್ ಟ್ರ್ಯಾಕರ್ (ATT) ವ್ಯವಸ್ಥೆಯು ಚಲಿಸುವ ಗುರಿಗಳನ್ನು ಸ್ವಯಂಚಾಲಿತವಾಗಿ ಹಿಂಬಾಲಿಸಿ, ಕ್ಷಿಪ್ರವಾಗಿ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಹಿಂದೆ ಇಸ್ರೇಲ್‌ನಿಂದ ನೇರವಾಗಿ ಆಮದು ಮಾಡಿಕೊಳ್ಳಲಾಗುತ್ತಿದ್ದ ಈ ವ್ಯವಸ್ಥೆಯನ್ನು ಈಗ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಬೆಂಗಳೂರಿನಲ್ಲೇ ತಯಾರಿಸಿರುವುದು ವಿಶೇಷ.

ಭಾರತೀಯ ಸೇನೆಯು ಇತ್ತೀಚೆಗೆ ನಡೆಸಿದ ಫೈರಿಂಗ್ ವ್ಯಾಲಿಡೇಶನ್ ಪ್ರಯೋಗಗಳಲ್ಲಿ ಈ ವ್ಯವಸ್ಥೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಈ ಕುರಿತು ಮಾತನಾಡಿದ ಆಲ್ಫಾ-ಎಲ್ಸೆಕ್ ಸಿಇಒ ನಟರಾಜ್ ಕೃಷ್ಣಪ್ಪ ಅವರು, "ಸುಮಾರು 120 ನೈಪುಣ್ಯ ಹೊಂದಿದ ವೃತ್ತಿಪರರ ತಂಡದೊಂದಿಗೆ ನಾವು ಈ ಸಾಧನೆ ಮಾಡಿದ್ದೇವೆ. ಇದು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಗೆ ಸಾಕ್ಷಿಯಾಗಿದೆ," ಎಂದು ತಿಳಿಸಿದ್ದಾರೆ.

ಈ ಯೋಜನೆಯ ಯಶಸ್ಸಿನ ಬೆನ್ನಲ್ಲೇ ಆಲ್ಫಾ-ಎಲ್ಸೆಕ್ ಸಂಸ್ಥೆಗೆ ಭಾರತೀಯ ರಕ್ಷಣಾ ಪಡೆಗಳಿಂದ ಮತ್ತಷ್ಟು ದೊಡ್ಡ ಮಟ್ಟದ ಆರ್ಡರ್‌ಗಳು ಲಭಿಸುವ ಸಾಧ್ಯತೆ ದಟ್ಟವಾಗಿದೆ.

Source link

Leave a Reply

Your email address will not be published. Required fields are marked *