ಬೆಂಗಳೂರು, ಅಕ್ಟೋಬರ್ 01: ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಬಿ ಖಾತಾ (ಬಿ ಖಾತಾ) ಆಸ್ತಿಯನ್ನ ಎ ಖಾತಾಗೆ ಪರಿವರ್ತಿಸಲು ಅವಕಾಶ ನೀಡಲಾಗಿದೆ. ನವೆಂಬರ್ 1 ರಿಂದ ಅಂದರೆ ಫೆಬ್ರವರಿ ಮೊದಲ ವಾರದವರೆಗೆ, 100 ದಿನಗಳ ಅಭಿಯಾನ ಪ್ರಾರಂಭವಾಗಿದೆ. ಆ ಮೂಲಕ ಬಿ ಖಾತಾದಾರರು ತಮ್ಮ ಆಸ್ತಿಗಳಿಗೆ ಎ ಖಾತಾ ಪಡೆಯಲು ದಾರಿ ಮತ್ತಷ್ಟು ಸುಗಮವಾಗಿದೆ. ಇದೀಗ ಬಿ ಖಾತಾ ಇರುವವರು ಎ ಖಾತಾಗೆ ಪರಿವರ್ತಿಸುವ ಪ್ರಕ್ರಿಯೆ ಇಂದಿನಿಂದ ಪ್ರಾರಂಭವಾಗಲಿದೆ. ಹಾಗಾದರೆ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಲು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಸರಿಸುಮಾರು 25 ಲಕ್ಷಕ್ಕೂ ಹೆಚ್ಚು ಆಸ್ತಿ ಖಾತಾಗಳಿವೆ. ಈ ಮೇಲಿನ 7.5 ಲಕ್ಷ ಆಸ್ತಿಗಳಿಗೆ ಬಿ ಖಾತಾ ಇದೆ. ಬಿ ಖಾತಾ ಆಸ್ತಿ ಎದುರಿಸುತ್ತಿರುವ ಸಮಸ್ಯೆಗಳು ಅಷ್ಟಿಷ್ಟಲ್ಲ. ಬ್ಯಾಂಕ್‌ಗಳಲ್ಲಿ ಸಾಲ ಕೂಡ ಸಿಗುತ್ತಿಲ್ಲ. ಬಿ ಖಾತಾ ಸೈಟ್ಗೆ ಕಟ್ಟಡ ಯೋಜನೆ ಅನುಮೋದನೆ ಸಿಗಲ್ಲ. ಹೀಗಾಗಿ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಖಾತೆ ಪರಿವರ್ತನೆಗೆ ಅವಕಾಶ ಮಾಡಿಕೊಟ್ಟಿದೆ.
ಆನ್‌ಲೈನ್‌ನಲ್ಲಿ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಹೇಗೆ?
- ಮೊದಲು https://bbmp.karnataka.gov.in/BtoAKhata ವೆಬ್ ಸೈಟ್ ಗೆ ಭೇಟಿ ನೀಡಿ.
- ಮೊಬೈಲ್ ನಂಬರ್, ಕ್ಯಾಪ್ಚಾ ಮತ್ತು ಓಟಿಪಿ ನಮೂದಿಸಿ.
- ಲಾಗಿನ್ ಆದ ಬಳಿಕ ಬಿ-ಖಾತೆ ಎ-ಖಾತೆ ಪರಿವರ್ತನೆ ಮತ್ತು ಒಂದೇ ಪ್ಲಾಟ್ ಅನುಮೋದನೆಯ ಮೂಲಕ ಸೈಟ್‌ಗಳಿಗೆ ಹೊಸ ಎ-ಖಾತೆ ಎಂಬ ಆಯ್ಕೆ ಕಾಣಿಸುತ್ತದೆ.
- ಹೊಸದಾಗಿ ವಿನಂತಿ ಕೊಡಿ ಮತ್ತು ಪರಿವರ್ತಿಸಬೇಕಾದ ಖಾತೆ ಐಡಿಯನ್ನು ನಮೂದಿಸಿ. ಫೆಚ್ ಮೇಲೆ ಕ್ಲಿಕ್ ಮಾಡಿ.
- ಸೈಟ್ ಆಧಾರ್ ದೃಢೀಕರಣ ಮಾಡಬೇಕು. ಜೊತೆಗೆ ಇ-ಕೆವೈಸಿ ಕೂಡ ಪರಿಶೀಲನೆ ಮಾಡಿ.
- ಪ್ಲಾಟ್ ಸರ್ವೆ ಸಂಖ್ಯೆಗೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ.
- ಕೃಷಿಯಿಂದ ಕೃಷಿೇತರಕ್ಕೆ ಡಿಸಿ ಪರಿವರ್ತನೆ ಆದೇಶವನ್ನು ನಮೂದಿಸಿ.
- ಆಸ್ತಿಯ ಪ್ರಕಾರವನ್ನು ಆಯ್ಕೆ ಮಾಡಿ ಮತ್ತು ಕಟ್ಟಡದ ರೇಖಾಚಿತ್ರವನ್ನು ಅಪ್ಲೋಡ್ ಮಾಡಿ.
- ಮಾರ್ಗ, ರಸ್ತೆಗಳು ಅಥವಾ ಹತ್ತಿರದ ರಸ್ತೆಗಳಿಗೆ ಸಂಬಂಧಿಸಿದ ಇತರ ದಾಖಲೆಗಳು ಮತ್ತು ವಿವರಗಳನ್ನು ಅಪ್ಲೋಡ್ ಮಾಡಿ.
- ನಿರ್ದಿಷ್ಟ ಆಸ್ತಿಗೆ ಒಬ್ಬರಿಗಿಂತ ಹೆಚ್ಚು ಇದ್ದರೆ, ಇತರರಿಗೆ ಇ-ಕೆವೈಸಿ, ಫೋನ್ ನಂಬರ್ ಪರಿಶೀಲಿಸಿ, ಬಳಿಕ ಪ್ಲಾಟ್ ವಿವರಗಳನ್ನು ನಮೂದಿಸಿ.
- ಹಣವನ್ನು ಸಲ್ಲಿಸಿ ಮತ್ತು ಪಾವತಿಸಲು ಅರ್ಜಿ ಸಲ್ಲಿಸಿ.
- ಬಳಿಕ ಡ್ಯಾಶ್‌ಬೋರ್ಡ್‌ನಿಂದ ಸ್ವೀಕೃತಿ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 3:25 pm, ಶನಿ, 1 ನವೆಂಬರ್ 25