Headlines

Video: ಪತ್ನಿಯ ಕಿವಿಯೋಲೆ ಆಟೋದಲ್ಲಿ ನೇತು ಹಾಕಿ ಪ್ರೀತಿ ವ್ಯಕ್ತಪಡಿಸಿದ ಆಟೋ ಡ್ರೈವರ್

Video: ಪತ್ನಿಯ ಕಿವಿಯೋಲೆ ಆಟೋದಲ್ಲಿ ನೇತು ಹಾಕಿ ಪ್ರೀತಿ ವ್ಯಕ್ತಪಡಿಸಿದ ಆಟೋ ಡ್ರೈವರ್


ಬೆಂಗಳೂರು, ಫೆ.24: ಪ್ರೀತಿ (ಪ್ರೀತಿ) ಕುರುಡು ಪ್ರೀತಿಗೆ ಕಣ್ಣಿಲ್ಲ. ಪ್ರೀತಿಯಲ್ಲಿ ಬಿದ್ದವರಿಗೆ ಈ ಜಗತ್ತಿನ ಪರಿಜ್ಞಾನವೇ ಇರುವುದಿಲ್ಲ ಎಂದು ಹೇಳುವುದನ್ನು ನೋಡಬಹುದಿತ್ತು. ವಿಭಿನ್ನವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ ಸಂಗಾತಿಯ ಮನಸ್ಸು ಗೆಲ್ತಾರೆ. ಆದರೆ ಬೆಂಗಳೂರು (ಬೆಂಗಳೂರು) ಆಟೋ ಚಾಲಕನೊಬ್ಬ ತನ್ನ ಮಡದಿ ಮೇಲಿನ ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸಿ ನೆಟ್ಟಿಗರ ಗಮನ ಸೆಳೆದಿದ್ದಾನೆ. ಹೌದು ತನ್ನ ಪತ್ನಿಯ ಕಿವಿಯೋಲೆಯನ್ನು ಆಟೋದಲ್ಲಿ ನೇತು ಹಾಕಿ ಪತ್ನಿಯ ಪ್ರೀತಿಯನ್ನು ಕೆಲಸದ ನಡುವೆಯೂ ನೆನಪಿಸಿಕೊಂಡಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮರ್ಲಿನ್ ಸುಲ್ತಾನ ಅಕಂಡ್ (marlyn.sultana.akand) ಹೆಸರಿನ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಪ್ರೀತಿಯಲ್ಲಿ ಬಿದ್ದ ಪುರುಷರು ಎಂದು ಶೀರ್ಷಿಕೆ ನೀಡಲಾಗಿದೆ. ಎಲ್ಲ ಪ್ರೇಮಿಗಳೂ ಹೂವುಗಳನ್ನು ನೀಡುವುದಿಲ್ಲ. ಕೆಲವು ತಮ್ಮ ಪ್ರೀತಿಯ ನೆನಪುಗಳನ್ನು ದಿನವಿಡೀ ಕಣ್ಣಮುಂದೆ ಇರುವಂತೆ ನೋಡಿಕೊಳ್ಳುತ್ತಾರೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಕಾಂಟೆಂಟ್ ಕ್ರಿಯೇಟರ್ ಮರ್ಲಿನ್ ಸುಲ್ತಾನ ಅಕಂಡ್ ಅವರು ಈ ಆಟೋದಲ್ಲಿ ಪ್ರಯಾಣಿಸುವಾಗ ಚಾಲಕನ ಸೀಟ್ನ ಬಳಿ ಪತ್ನಿಯ ಕಿವಿಯೋಲೆಗಳನ್ನು ತೂಗು ಹಾಕಿರುವುದನ್ನು ಗಮನಿಸಿದ್ದಾರೆ. ಪ್ರಯಾಣದ ವೇಳೆ ನೇತು ಹಾಕಿರುವ ಕಿವಿಯೋಲೆಯ ವಿಡಿಯೋ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಜೀವನ ಇಷ್ಟೊಂದು ದುಬಾರಿನಾ?; ತಿಂಗಳ ಖರ್ಚು 70 ಸಾವಿರ ರೂ., ಪಟ್ಟಿ ಬಿಚ್ಚಿಟ್ಟ ಯುವಕ

ಈ ವಿಡಿಯೋ ಎರಡು ಮಿಲಿಯನ್‌ಗೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ವಿಡಿಯೋ ನೋಡಿದ್ರೆ ಸಿನಿಮಾ ದೃಶ್ಯ ನೆನಪಾಯ್ತು. ಇತರರು, ಈ ಚಾಲಕನ ಪತ್ನಿ ಅದೃಷ್ಟವಂತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಂತಹ ಪರಿಶುದ್ಧ ಪ್ರೀತಿ ಮಾಡುವವರು ಸಿಗೋದು ವಿರಳ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 10:53 am, ಮಂಗಳವಾರ, 24 ಫೆಬ್ರವರಿ 26





Source link

Leave a Reply

Your email address will not be published. Required fields are marked *