
ಬೆಂಗಳೂರು, ಮಾರ್ಚ್ 17: ಬೆಂಗಳೂರಿನ ವೈಯಾಲಿಕಾವಲ್‌ನ ವಿನಾಯಕ ವೃತ್ತದ ಬಳಿ ಅಚ್ಚರಿ ಮೂಡಿಸುವ ಘಟನೆಯೊಂದು ನಡೆದಿದೆ. ವ್ಯಕ್ತಿಯನ್ನು ಚೀಲಕ್ಕೆ ಹಾಕಿ ಕೊರಿಯರ್ ಶಾಪ್ಗೆ ತಂದಿದ್ದಾರೆ. ಪುಂಡರ ಹುಚ್ಚಾಟಕ್ಕೆ ಕೊರಿಯರ್ ಶಾಪ್ ಸಿಬ್ಬಂದಿ ಕಂಗಾಲಾಗಿದ್ದಾರೆ. ಪ್ರೊಫೆಷನಲ್ ಕೊರಿಯರ್ ಶಾಪ್‌ಗೆ ಬಂದ ಪುಂಡರು ಪ್ಲಾಸ್ಟಿಕ್ ಚೀಲದಲ್ಲಿರುವ ವ್ಯಕ್ತಿಯನ್ನು ಕೊರಿಯರ್ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಈ ವೇಳೆ ಚೀಲ ಅಲುಗಾಡುತ್ತಿರುವುದನ್ನು ಗಮನಿಸಿದ ಕೊರಿಯರ್ ಸಿಬ್ಬಂದಿ ಪರಿಶೀಲಿಸಿದ್ದು, ಅದರೊಳಗೆ ಮನುಷ್ಯನೊಬ್ಬ ಇರುವುದು ಕಂಡುಬಂದಿದೆ. ಒಂದು ಕ್ಷಣ ಕೊರಿಯರ್ ಶಾಪ್ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಅವರು ವೈಯಾಲಿಕಾವಲ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.