ಬೆಂಗಳೂರು, ನವೆಂಬರ್ 21: ಯೆಲ್ಲೋ ಲೈನ್ ಮೆಟ್ರೋ (ಮೆಟ್ರೋ ಹಳದಿ ಮಾರ್ಗ) ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಗಲಿದೆ. ಈ ತಿಂಗಳ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಬಿಎಂಆರ್ ಸಿಎಲ್ (bmrcl) ಆರನೇ ರೈಲು ಬರ್ತಿದ್ದು, 10 ನಿಮಿಷಕ್ಕೊಂದರಂತೆ ರೈಲುಗಳು ಸಂಚಾರ ಮಾಡಲಿದೆ.
ಆರ್.ವಿ ರೋಡ್ ಬೊಮ್ಮಸಂದ್ರ ಎಲ್ಲೋ ಲೈನಲ್ಲಿ ಸಂಚಾರ ಮಾಡಲು ಆರನೇ ರೈಲು ಕಲ್ಕತ್ತಾದ ಟಿಟಾಘರ್ ನಿಂದ ಹೊರಟ್ಟಿದ್ದು, ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಈ ರೈಲು ಬೆಂಗಳೂರಿಗೆ ಬರಲಿದೆ. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ಸಹಾಯ.
ಇದನ್ನೂ ಓದಿ: ಮೆಟ್ರೋ ಹಳದಿ ಮಾರ್ಗ: ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ ಸಂಚಾರ ವ್ಯತ್ಯಯ
ಸದ್ಯ ಎಲ್ಲೋ ಲೈನ್‌ನಲ್ಲಿ ಸಂಚಾರ ಮಾಡಲು ಐದು ರೈಲುಗಳು ಮಾತ್ರ ಇವೆ. ಪೀಕ್ ಅವರ್‌ನಲ್ಲಿ 15 ನಿಮಿಷಕ್ಕೊಂದರಂತೆ, ನಾನ್ ಪಿಕ್ ಅವರ್‌ನಲ್ಲಿ 19 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ, 6ನೇ ರೈಲು ನಮ್ಮ ಮೆಟ್ರೋಗೆ ಬರ್ತಿದ್ದು, ಈ ಹಿನ್ನೆಲೆ ಪಿಕ್ ಅವರ್‌ನಲ್ಲಿ 15 ರಿಂದ 10 ನಿಮಿಷಕ್ಕೆ ನಾನ್ ಪಿಕ್ ಅವರಲ್ಲಿ 19 ರಿಂದ 15 ನಿಮಿಷಕ್ಕೆ ಮೆಟ್ರೋ ರೈಲು ಸಂಚಾರ ನಡೆಯಲಿದೆ.
ರಾತ್ರಿ ವೇಳೆ ಸಿಗ್ನಲಿಂಗ್, ಸುರಕ್ಷತೆ ಸೇರಿದಂತೆ ಇತರ ಪರೀಕ್ಷೆಗಳನ್ನು ಸಿಎಂಆರ್ ಎಸ್ ಹಾಗೂ ಬಿಎಂಆರ್ ಸಿ ಅಧಿಕಾರಿಗಳು ನಡೆಸುತ್ತಿದ್ದಾರೆ, ಆ ರೈಲು ಬಳಿಕ ಸಂಚಾರ ಆರಂಭಿಸಲಿದೆ ಎಂದು ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌವ್ಹಾಣ್ ಹೇಳಿದ್ದಾರೆ.
ಇನ್ನು ಹೊಸ ಮೆಟ್ರೋ ಬೋಗಿಗಳು ಒಂದು ವಾರದೊಳಗೆ ಅಥವಾ ಹತ್ತು ದಿನಗಳಲ್ಲಿ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ಸೇರಲಿದೆ, ಈ ರೈಲುಗಳ ಸೇವೆಯನ್ನು ಆರಂಭಿಸಿದಾಗ ಮತ್ತಷ್ಟು ಇಳಿಕೆಯಾಗುತ್ತದೆ. ಆರನೇ ರೈಲಿನ ಕಾರ್ಯಾಚರಣೆಯಿಂದ ರೈಲು ಸಂಚಾರ ಸಮಯ ಇಳಿಮುಖವಾಗಲಿದೆ, ಡಿಸೆಂಬರ್ ಮತ್ತು ಜನವರಿಯಿಂದ ಇನ್ನೆರಡು ಹೊಸ ರೈಲುಗಳು ಟಿಟಾಘರ್‌ನಿಂದ ಬೆಂಗಳೂರಿಗೆ ಬರಲಿದೆ, 2026 ರ ಆರಂಭದಲ್ಲಿ ಗ್ರೀನ್, ಪರ್ಪಲ್ ಮೆಟ್ರೋ ಮಾರ್ಗಗಳಲ್ಲಿ ಹಳದಿ ಮಾರ್ಗದಲ್ಲಿ ಪ್ರತಿ 5 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚಾರ ನಡೆಯಲಿದೆ.
ಇದನ್ನೂ ಓದಿ: ಅಬ್ಬಾ! ನಮ್ಮ ಮೆಟ್ರೋ ರೈಲನ್ನೇ ತಡೆದು ನಿಲ್ಲಿಸಿದ ಪ್ರಯಾಣಿಕರು: ಕೇಸ್ ಬುಕ್
ಈ ಕುರಿತಾಗಿ ಮೆಟ್ರೋ ಪ್ರಯಾಣಿಕರಾದ ಮಂಜುನಾಥ್ ಎಂಬುವವರು ಮಾತನಾಡಿದ್ದು, ಆರನೇ ರೈಲು ಬರುವುದರಿಂದ ನಮಗೆ ತುಂಬಾ ಸಹಾಯವಾಗುತ್ತದೆ. ವಾಹನದಲ್ಲಿ ಆರ್.ವಿ ರೋಡ್ ಟು ಬೊಮ್ಮಸಂದ್ರ ಹೋಗಬೇಕು ಅಂದರೆ ಸುಮಾರು ಎರಡೂವರೆ ಗಂಟೆ. ಮೆಟ್ರೋದಲ್ಲಿ ಕೇವಲ ಅರ್ಧಗಂಟೆ ಸಾಕು. ಇದರಿಂದ ನಮಗೆ ತುಂಬಾ ಸಂತೋಷವಾಗುತ್ತದೆ.
ಒಟ್ಟಿನಲ್ಲಿ ಯೆಲ್ಲೋ ಲೈನ್‌ನಲ್ಲಿ ಸಂಚಾರ ಮಾಡಲು ಆರನೇ ರೈಲು ಆಗಮಿಸುವುದರಿಂದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಆಗುವುದರಲ್ಲಿ ನೋ ಡೌಟ್.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.