
ಬೆಂಗಳೂರು, ಮಾರ್ಚ್ 27: ಗೃಹಸಚಿವ ಡಾ. ಜಿ. ಪರಮೇಶ್ವರ್ ಒಡೆತನದ ಸಿದ್ದಾರ್ಥ ಮೆಡಿಕಲ್ ಕಾಲೇಜು ಸೇರಿ ಕೋಲಾರ ಮತ್ತು ಬೆಂಗಳೂರಿನ ವಿವಿಧ ಆರ್ಟಿಒ ಕಚೇರಿಗಳಿಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿರುವ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿಯಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ, ನಮ್ಮ ಸಹೋದರ ಡಾ.ಅಬ್ದುಲ್ ಅವರಿಗೆ ಅವಮಾನಮಾಡಿರುವ ಹಿನ್ನೆಲೆ 15 ಸಿಲಿಂಡರ್ ತುಂಬಿರುವ ಐಇಡಿ ಪ್ಲಾಂಟ್ ಮಾಡಲಾಗಿದೆ. ಇಸ್ಲಾಮಿಕ್ ಪ್ರಾರ್ಥನಾ ಸಮಯ ಮಧ್ಯಾಹ್ನ 2 ಗಂಟೆಗೆ SSIMST ಉದಯಿಸಲಾಗುವುದು. ನಾವು ಕೇವಲ ಕಟ್ಟಡವನ್ನು ಮಾತ್ರ ನಾಶಮಾಡಲು ಮುಂದಾಗಿದ್ದೇವೆ, ಹೀಗಾಗಿ ಸಾಧ್ಯವಾದರೆ ಎಲ್ಲಾ ವಿದ್ಯಾರ್ಥಿಗಳನ್ನು ಹೊರಗೆ ಕಳಿಸಿ ಎಂದು ತಿಳಿಸಲಾಗಿದೆ. ಈ ಹಿನ್ನೆಲೆ ಬಾಂಬ್ ನಿಷ್ಕ್ರಿಯ ದಳ, ನೆಲಮಂಗಲ ಗ್ರಾಮಾಂತರ ಪೊಲೀಸ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಬೆಂಗಳೂರಿನ ಆರ್ಟಿಒ ಕಚೇರಿಗಳಿಗೆ ಗಾಯತ್ರಿ_ಶಾಬಾಜ್@Hotmail.com ಐಡಿಯಿಂದ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಯಶವಂತಪುರ, ರಾಜಾಜಿನಗರ, ಕೋರಮಂಗಲ ಸೇರಿ ನಗರದ ಹಲವು ಆರ್ ಟಿಒ ಕಚೇರಿಗಳಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಫೋಟಿಸುವುದಾಗಿ ಇ-ಮೇಲ್ ಕಳುಹಿಸಲಾಗಿದೆ. 10 ಬಾಂಬ್ ಸ್ಫೋಟಗೊಳ್ಳುತ್ತಿದೆ ಎಂದು ದುಷ್ಕರ್ಮಿಗಳು ಎಚ್ಚರಿಕೆ ನೀಡಿದ್ದಾರೆ. ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವ ಹಿನ್ನೆಲೆ ಕೋರಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್. ದೀಪಕ್ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು. ಈ ಕಚೇರಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ, ನೂರಾರು ಸಾರ್ವಜನಿಕರು ವಿವಿಧ ಕೆಲಸ ಕಾರ್ಯಗಳಿಗಾಗಿ ಬರುತ್ತಾರೆ. ಹೀಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚುತ್ತಿದೆ ಬಾಂಬ್ ಬೆದರಿಕೆ; ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ಗೆ ಹುಸಿ ಬಾಂಬ್ ಬೆದರಿಕೆ
ಅಪರಿಚಿತ ಇ-ಮೇಲ್ ಐಡಿಯಿಂದ ಕೋಲಾರ ಆರ್ಟಿಒ ಕಚೇರಿಗೂ ಇದೇ ರೀತಿಯ ಬೆದರಿಕೆ ಬಂದಿದೆ. ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಅಬ್ದುಲ್ ಮೊಹಮ್ಮದ್ ಮತ್ತು ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್ ಬೆಂಬಲಿಗರಿಗೆ ಅವಮಾನ ಮಾಡಿರುವ ಕಾರಣ 10 ವಿಷದ ಬಾಂಬ್ಗಳನ್ನು ಸ್ಫೋಟಿಸಿರುವುದಾಗಿ ತಿಳಿಸಲಾಗಿದೆ. ಸ್ಥಳಕ್ಕೆ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಭೇಟಿ ಪರಿಶೀಲನೆಯನ್ನು ನೀಡಿ. ಇತ್ತೀಚೆಗೆ ಬಾಂಬ್ ಬೆದರಿಕೆ ಪ್ರಕರಣಗಳು ಮೇಲಿಂದ ಮೇಲೆ ರಾಜ್ಯದಲ್ಲಿ ವರದಿಯಾಗ್ತಿರೋದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.