ಸಾಮಾನ್ಯವಾಗಿ ಕೇಕ್ ಶೋ ಎಂದಕೂಡಲೆ ಕ್ರಿಸ್ಮಸ್ ನೆನಪಾಗುತ್ತೆ. ಆದರೆ ಕ್ರಿಸ್ಮಸ್ಗೂ ಮುಂಚೆಯೇ ಅರಮನೆ ಮೈದಾನದಲ್ಲಿ 51ನೇ ವಾರ್ಷಿಕ ಕೇಕ್ ಅನ್ನು ಪ್ರದರ್ಶಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಪ್ರದರ್ಶನ ಉಚಿತವಿರಲಿದೆ. ಶೆಫ್ ಗಳ ಕೈಚಳಕದಲ್ಲಿ ತರಹೇವಾರಿ ಕೇಕ್ ಗಳು ಮೂಡಿ ಬಂದಿದ್ದು, 25ಕ್ಕೂ ಹೆಚ್ಚು ಕೇಕ್ ಗಳು ಜನರ ಕಣ್ಮನ ಸೆಳೆದವು.
ಬೆಂಗಳೂರಿನ ಅರಮನೆ ಮೈದಾನದ ತ್ರಿವಾಸಿನಿಯಲ್ಲಿ ಆಯೋಜನೆ ಮಾಡಿರುವ ಕೇಕ ಶೋ ಜ.4ರವರೆಗೆ ನಡೆಯಲಿದ್ದು, ಕೇಕ್ ನಲ್ಲಿ ಮಾಡಿರುವ ಕಲಾಕೃತಿಗಳು ಜನರ ಗಮನ ಸೆಳೆಯಲು ಸಿದ್ಧವಾಗಿದೆ. ಹಿಂದೂ , ಕ್ರಿಶ್ಚಿಯನ್, ಮುಸ್ಲಿಂ ಧರ್ಮಕ್ಕೆ ಸಂಬಂಧಿಸಿದ ದೇವರನ್ನು ಮತ್ತು ದೇವಾಲಯಗಳನ್ನು ಕೇಕ್ ಮೂಲಕ ತಯಾರಿಸಲಾಗಿದೆ. ಕೇವಲ ಕೈಗಳಿಂದ ಆಧುನಿಕ ತಂತ್ರಜ್ಞಾನದ ಲೇಸರ್ ಲೈಟ್ ಕೇಕ್ಗಳನ್ನು ತಯಾರಿಸಲಾಗಿದೆ.
ಡಿಸ್ನಿ ಕ್ಯಾಸ್ಟಲ್, ತಮಿಳುನಾಡಿನ ವೆಲಂಕಿ ಚರ್ಚ್ ಕೇಕ್, ಒಡಿಶಾದ ಜಗನಾಥ ಪುರಿ, ಕಂತರ ಸಿನಿಮಾದ ಯಕ್ಷಗಾನ ಕಲೆ, ಮಕ್ಕಳನ್ನು ಆರ್ಕಷಿಸುವ ಪಾಂಡ, ಮಾಸ್ಟರ್ ಶೆಫ್, ವೆಡಿಂಗ್ ಕೇಕ್, ವಿಕ್ಟೋರಿಯಾ ಮಾದರಿಯ ಕೇಕ್, ರ್ಯಾಗ್ ಟು ರಿಚಸ್, ಮೋವಾನಾ ಸಿನಿಮಾದ ಹಡಗು, ಜಿಆರ್ ಬಿ ಬಾಟಲ್, ಕ್ರಿಸ್ ಮಸ್ ಅಧಿಕ ಕೇಕ್, ಹೀಗೆ ವಿವಿಧ ರೀತಿಯ ಸಮಾರು 25
ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಹಿನ್ನಲೆ ರಾಜಧಾನಿಯಲ್ಲಿ ಕೇಕ್ ಉತ್ಸವ ನಡೆಯುತ್ತಿತ್ತು, ಕೇಕ್ ನಲ್ಲಿ ಅರಳಿದ 18 ಅಡಿ ಎತ್ತರದ ರಾಯಲ್ ಡ್ರೀಮ್ ಕ್ಯಾಸಲ್, ಸೇಕ್ರೆಡ್ ಬಸಿಲಿಕಾ ವೇಳಾಂಕಣ ಚರ್ಚ್ ಹಾಗೂ ಬಗೆ ಬಗೆಯ ಕೇಕ್ ಪ್ರದರ್ಶನವನ್ನು ಮಾಡಲಾಯಿತು. ಅರಮನೆ ಮೈದಾನ ತ್ರಿಪುರ ವಾಸಿನಿಯಲ್ಲಿ ಇಂದಿನಿಂದ ಎರಡು ದಿನಗಳ ಕೇಕ್ ಅನ್ನು ಪ್ರದರ್ಶಿಸಲಾಗಿದೆ.
51 ನೇ ವರ್ಷದ ಸಂಭ್ರಮದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಕಲೆಯ ಸಮ್ಮಿಲನದೊಂದಿಗೆ ನಡೆಯುತ್ತಿರುವ ಕೇಕ್ ಉತ್ಸವ ಈಗ ಮತ್ತೆ ಕೇಕ್ ಪ್ರಿಯರನ್ನು ಕೈ ಬಿಸಿ ಕರೆಯುತ್ತಿದೆ. 25 ಕ್ಕೂ ಹೆಚ್ಚು ಕೇಕ್ ನಕೃತಿಗಳಿರುವ ಈ ವರ್ಷದ ಕಲಾಕೃತಿಗಳು , ಹೊಸ ವಿನ್ಯಾಸಗಳು ಮತ್ತು ಸಂಸ್ಕೃತಿಗಳ ವಿಷಯದೊಂದಿಗೆ ಕ್ರಿಸ್ಮಸ್ ಟ್ರೀ, ಚರ್ಚ್ಗಳು ಕೇಕ್ ನಲ್ಲಿ ಮೂಡಿವೆ.




