Headlines

ATM ವಾಹನದಲ್ಲಿದ್ದ 7 ಕೋಟಿ ರೂ, ದರೋಡೆ ಬಗ್ಗೆ ಕಮಿಷನರ್ ಹೇಳಿದ್ದಿಷ್ಟು

ATM ವಾಹನದಲ್ಲಿದ್ದ 7 ಕೋಟಿ ರೂ, ದರೋಡೆ ಬಗ್ಗೆ ಕಮಿಷನರ್ ಹೇಳಿದ್ದಿಷ್ಟು


ಬೆಂಗಳೂರು, (ನವೆಂಬರ್ 19): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಬಹುದೊಡ್ಡ ದರೋಡೆ ಪ್ರಕರಣ ನಡೆದಿದೆ. ಸಿಎಂಎಸ್ ಕಂಪನಿಯ ವ್ಯಾನ್ ಅಡ್ಡಗಟ್ಟಿ ಸುಮಾರು 7 ಕೋಟಿ 11 ಲಕ್ಷ ರೂಪಾಯಿ ಹಣ ದೋಚಿಕೊಂಡು ಪರಾರಿಯಾಗಿದೆ. ಅಶೋಕ್ ಪಿಲ್ಲರ್ ಬಳಿ ಹಣ ಇದ್ದ ಎಸ್ ವಾಹನವನ್ನು ಹೈಜಾಕ್ ಮಾಡಿದ್ದು, ಬಳಿಕ ಹಣವಿದ್ದ ವಾಹನವನ್ನು ಜಯದೇವ ಡೈರಿ ಸರ್ಕಲ್ ಸಿಎಂ ಫ್ಲೈಓವರ್ ಬಳಿ ನಿಲ್ಲಿಸಿದ್ದಾರೆ. ನಂತರ ದರೋಡೆಕೋರರು ಹಣವನ್ನು ತಮ್ಮ ಇನ್ನೋವಾ ಕಾರಿನಲ್ಲಿ ತುಂಬಿಕೊಂಡು ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಬೆಂಗಳೂರು ನಗರ, ಹೈಅಲರ್ಟ್ ಆಗಿದ್ದು ನಗರದೆಲ್ಲೆಡೆ ತಪಾಸಣೆ. ಇನ್ನು ಘಟನೆ ಸಂಬಂಧ ಮಾಹಿತಿ ಪಡೆಯಲು ಬೆಂಗಳೂರು ನಗರ ಕಮಿಷನರ್ ಸೀಮಂತ್ ಕುಮಾರ್ ಸಿದ್ದಾಪುರ ಠಾಣೆಗೆ ಭೇಟಿ ನೀಡಿದ್ದು, ದರೋಡೆ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇನ್ನು ಘಟನೆಯ ಬಗ್ಗೆ ಏನೆಲ್ಲಾ ಹೇಳಿದ್ದಾರೆ ಕೇಳಿ.



Source link

Leave a Reply

Your email address will not be published. Required fields are marked *