Headlines

ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ: ಡಿಸಿಎಂ ಡಿಕೆ ಶಿವಕುಮಾರ್​​ ಎಚ್ಚರಿಕೆ

ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ: ಡಿಸಿಎಂ ಡಿಕೆ ಶಿವಕುಮಾರ್​​ ಎಚ್ಚರಿಕೆ


ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ: ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ

ಬೆಂಗಳೂರು, ಮಾರ್ಚ್ 20: ಬೆಂಗಳೂರಿನಲ್ಲಿ ಇನ್ಮುಂದೆ ಟೋಯಿಂಗ್ (ಎಳೆಯುವುದು) ಪ್ರಾರಂಭವಾಗಲಿದೆ. ಆ ಮೂಲಕ ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆ ಇಡಲಾಗಿದೆ. ನಾನ್ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್ ಮಾಡಲಾಗುವುದು. ಎಲ್ಲಾ ಕಾರ್ಪೊರೇಷನ್ ಗೂ ಎರಡೆರಡು ಟೋಯಿಂಗ್ ವಾಹನ ನೀಡಿದ್ದು, ಈ ಬಗ್ಗೆ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (ಡಿಕೆ ಶಿವಕುಮಾರ್) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ

ವಿಧಾನಸೌಧದಲ್ಲಿಂದು ಜಿಬಿಎ 5 ನಗರ ಪಾಲಿಕೆಗಳ 2026-27ನೇ ಸಾಲಿನ ಆಯವ್ಯಯದ ಸಿದ್ಧತೆ ಕುರಿತು ಅಧಿಕಾರಿಗಳು ಹಾಗೂ ಬೆಂಗಳೂರಿನ ಶಾಸಕರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಪೂರ್ವಭಾವಿ ಸಭೆ ನಡೆಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಹೆಚ್ಚು ಕಾಲ ಹಳೇ ವಾಹನಗಳನ್ನು ನಿಲ್ಲಿಸಿದರೂ ಟೋಯಿಂಗ್ ಮಾಡಲಾಗುವುದು.

ಇದನ್ನೂ ಓದಿ: ನೌಕರರ ವರ್ಗಾವಣೆಗಿಂತ ಮಾಡಬೇಕಾದ ಉತ್ತಮ ಕೆಲಸಗಳಿವೆ: ಸಿಎಂಗೆ ತರಾಟೆ

ನಗರದ ರಸ್ತೆಗಳಲ್ಲಿ ಎಲ್ಲೆಲ್ಲಿ ಹಳೇ ವಾಹನಗಳನ್ನು ನಿಲ್ಲಿಸಿದ್ದಾರೋ ಅದನ್ನು ತುಂಬಿಕೊಂಡು ಹೋಗಿ ನಿರ್ದಿಷ್ಟ ಜಾಗದಲ್ಲಿ ಡಂಪ್ ಆಗುತ್ತದೆ. ಹಳೇ ವಾಹನಗಳನ್ನು ಟೋಯಿಂಗ್ ಮಾಡಲು ಬೆಳ್ಳಳ್ಳಿ, ಮಿಟಗಾನಹಳ್ಳಿ, ಸೊಂಡೆಕೊಪ್ಪ, ಗಿಡ್ಡೇನಹಳ್ಳಿಗಳಲ್ಲಿ ಜಾಗ ನಿಗದಿ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಫ್ಲೆಕ್ಸ್ ಹಾಕಿದರೆ 1 ಲಕ್ಷ ರೂ ದಂಡ

ವ್ಯಾಪಾರ ಮಾಡುವ ವಿಚಾರವಾಗಿ ಹೇಳಿದ್ದು, ಎಲ್ಲಿ ವ್ಯಾಪಾರ ಮಾಡಬೇಕು ಅಂತ ನಿಗದಿಯಾಗಿದೆ. ಯಾರು ನೋಂದಣಿ ಮಾಡಿದ್ದಾರೆ ಅವರಿಗೆ ಮಾತ್ರ ಅವಕಾಶ. ಇದಕ್ಕೆ ಎಲ್ಲಾ ಶಾಸಕರು ಸಹಮತ ವ್ಯಕ್ತಪಡಿಸಿದ್ದಾರೆ. ಎಲ್ಲಾ ಪಾರ್ಟಿಯವರು ಫ್ಲೆಕ್ಸ್ ಹಾಕುತ್ತಾರೆ. ಯಾರು ಫ್ಲೆಕ್ಸ್ ಹಾಕ್ತಾರೆ ಅವರಿಗೆ 50 ಸಾವಿರದಿಂದ 1 ಲಕ್ಷ ರೂ ದಂಡ ಹಾಕಬೇಕು. ಈ ಬಗ್ಗೆ ಪೊಲೀಸರಿಗೂ, ಕಾರ್ಪೊರೇಷನ್‌ನವರಿಗೆ ತಿಳಿಸಿದ್ದೇನೆ, ಕೇಸ್ ಹಾಕುತ್ತೇವೆ.

ಬೀದಿ ಬದಿ ವ್ಯಾಪಾರಸ್ಥರು ಅಂಗಡಿ ಹಾಕಬಾರದು, ಯಾರೇ ಇದ್ದರೂ ಎತ್ಕೊಂಡು ಹೋಗಬೇಕು. 30 ಸಾವಿರ ಜನ ತಳ್ಳೋ ಗಾಡಿ ಬೇಕು ಎಂದು ಕೇಳಿದ್ದಾರೆ, ಟೆಂಡರ್ ಕರೆದಿದ್ದಾರೆ. ಬೇಕು ಅಷ್ಟೇ ವ್ಯಾಪಾರ ಎಲ್ಲಿ ಮಾಡಬೇಕು. ಐಡೆಂಟಿಟಿ ಕಾರ್ಡ್ ಇದ್ದರೆ ಅಷ್ಟೇ ಮಾರಾಟ ಮಾಡಬೇಕು. ಈ ಪಾರ್ಕ್‌ನಲ್ಲಿ ಅನಧಿಕೃತ ಕೆಲಸ ನಡೆಯುತ್ತಿದೆ ಅಂತ ಆರೋಪವಿದೆ ಹೀಗಾಗಿ ಪಾರ್ಕ್ ಟೈಮ್ ನಿಗದಿಯಾಗಿದೆ. ಈ ಬಗ್ಗೆ ಐದು ಪಾಲಿಕೆಯ ಲೋಕಲ್ ಎಂಎಲ್ಎಗಳ ನಿರ್ಧಾರ ಮಾಡಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಉತ್ತರ ನೋಡಿ

ಫುಟ್ ಪಾತ್ ಪಾಲಿಸಿ ತರಬೇಕು ಅಂತ ಇದೆ. ಬೀದಿ ಬದಿ ವ್ಯಾಪಾರ ಮಾಡುತ್ತಾರೆ. ಈ ಸಮಸ್ಯೆಯಾಗಿದೆ. ಹೀಗಾಗಿ ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡಬೇಕು. ಈ ಸಮಸ್ಯೆಯನ್ನು ನಿಲ್ಲಿಸಬೇಕು ಅಂತ ಪಾಲಿಸಿ.

ವಾರ್ಡ್ ವೈಸ್ ಬಜೆಟ್ಗೆ ಒತ್ತಾಯ

ಇನ್ನು ಜಿಬಿಎ ಬಜೆಟ್ ಸಭೆಯ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಇಂದು ಬೆಂಗಳೂರಿನ ಶಾಸಕರ ಜೊತೆ ಬಜೆಟ್ ಸಭೆಯಾಗಿದೆ. ಪ್ರಮುಖ ನಿರ್ಣಯ ಆಗಿದೆ. ಅಶೋಕ್ ಕೂಡ ಬಂದಿದ್ದರು. ಅಭಿಪ್ರಾಯದಂತೆ. ವಾರ್ಡ್ ವೈಸ್ ಬಜೆಟ್ ಎಂದು ಒತ್ತಿ ಹೇಳಿದರು. ಇನ್ನು ಶಾಸಕರಿಂದ ವಾರ್ಡಿಗೆ 5-10 ಕೋಟಿ ರೂ ಅನುದಾನದ ಬೇಡಿಕೆ ವಿಚಾರವಾಗಿ ಮಾತನಾಡಿದ್ದು, ನೋಡೋಣ. ಅವರು ಆಕಾಶನೂ ಕೇಳ್ತಾರೆ, ಭೂಮಿನೂ ತಂದು ಕೊಡಿ ಅಂತ ಕೇಳ್ತಾರೆ. ನಮ್ಮಿಂದ ಎಷ್ಟಾಗಲಿದೆ ಅನ್ನೋದು ನೋಡಿ ಕೊಡುತ್ತೇವೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *